ETV Bharat / sports

ಹಾರ್ದಿಕ್​ ಪಾಂಡ್ಯ ಬದಲಿಗೆ ಪ್ರಸಿದ್ಧ್​ ಕೃಷ್ಣ ಎಷ್ಟು ಸೂಕ್ತ?: ಆಯ್ಕೆ ಸಮಿತಿಗೆ ಮಾಜಿ ಆಟಗಾರರ ಪ್ರಶ್ನೆ - ETV Bharath Karnataka

ಬಾಂಗ್ಲಾ ವಿರುದ್ಧ ಗಾಯಕ್ಕೆ ತುತ್ತಾದ ಹಾರ್ದಿಕ್​ ಪಾಂಡ್ಯ ಅವರ ಬದಲಾಗಿ ಕನ್ನಡಿಗ ಪ್ರಸಿದ್ಧ್​ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದ್ದು, ಮಾಜಿ ಆಟಗಾರರು ಟೀಮ್​ ಇಂಡಿಯಾದ ಪ್ಲಾನ್​ ಬಿ ಬಗ್ಗೆ ಪ್ರಶ್ನೆ ಎತ್ತುತ್ತಿದ್ದಾರೆ.

Prasidh Krishna
Prasidh Krishna
author img

By ETV Bharat Karnataka Team

Published : Nov 4, 2023, 5:56 PM IST

ಬೆಂಗಳೂರು: ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಹಾಗೂ ಉಪನಾಯಕ ಹಾದಿರ್ಕ್ ಪಾಂಡ್ಯ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗಾಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಅವರ ಬದಲಿ ಆಟಗಾರರನ್ನಾಗಿ ಕನ್ನಡಿಗ ಪ್ರಸಿದ್ಧ್ ಕೃಷ್ಣ ತಂಡಕ್ಕೆ ಆಯ್ಕೆ ಆಗಿದ್ದಾರೆ. ಈ ಬಾರಿಯ ವಿಶ್ವಕಪ್​ನಲ್ಲಿ ಕೆ ಎಲ್ ರಾಹುಲ್​ ಜೊತೆಗೆ ತಂಡದಲ್ಲಿ ಸ್ಥಾನ ಪಡೆದ ಎರಡನೇ ಕನ್ನಡಿಗ ಆಟಗಾರ ಕೃಷ್ಣ. ವಿಶ್ವಕಪ್​ ಆಯ್ಕೆ ಆಗಿದ್ದ 18 ಜನ ಆಟಗಾರರ ಪಟ್ಟಿಯಲ್ಲಿ ಪ್ರಸಿದ್ಧ್​ ಕೃಷ್ಣ ಅವರನ್ನು ಸೇರಿಸಿಕೊಳ್ಳಲಾಗಿತ್ತು. ಹೀಗಾಗಿ ಪ್ರಸಿದ್ಧ್​ ಏಷ್ಯಾಕಪ್​ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಕಾಣಿಸಿಕೊಂಡಿದ್ದರು.

  • Hardik Pandya ruled out of the World Cup. Big blow to the possibilities of having a sixth bowling option.
    India’s picked pacer Prasidh Krishna to replace him. Says a lot about how many players of Hardik’s skill-set are available in India. Answer is 0️⃣ #CWC23

    — Aakash Chopra (@cricketaakash) November 4, 2023 " class="align-text-top noRightClick twitterSection" data=" ">

ಹಾರ್ದಿಕ್​ ಅಲಭ್ಯವಾಗಿರುವ ಬಗ್ಗೆ ಈಗ ತಂಡದ ಮಾಜಿ ಆಟಗಾರರು ಪ್ರಶ್ನೆ ಎತ್ತುತ್ತಿದ್ದಾರೆ. ಹಾರ್ದಿಕ್​ ಬದಲಿ ಆಗಿ ಪ್ರಸಿದ್ಧ ಕೃಷ್ಣ ಅವರ ಆಯ್ಕೆ ಎಷ್ಟು ಸರಿ ಎಂಬುದು ಹಲವರ ಪ್ರಶ್ನೆ ಆಗಿದೆ. 2019 ರಲ್ಲಿ ವಿಜಯ್​ ಶಂಕರ್​ ಆಯ್ಕೆಗೆ ಹೋಲಿಕೆ ಮಾಡಿ ಟ್ರೋಲ್​ಗಳು ಮತ್ತು ಟೀಕೆ ಟಪ್ಪಣಿಗಳನ್ನು ಮಾಡಲಾಗುತ್ತಿದೆ. ಟೀಮ್ ಇಂಡಿಯಾದ ಪ್ಲಾನ್​ ಬಿ ಬಗ್ಗೆ ಚಿಂತಿಸಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ.

ಟೀಮ್​ ಇಂಡಿಯಾದ ಮಾಜಿ ಆಟಗಾರ ಆಕಾಶ್​ ಚೋಪ್ರಾ ಆರನೇ ಬೌಲಿಂಗ್​ ಆಯ್ಕೆಯ ಬಗ್ಗೆ ಟೀಕೆ ಮಾಡಿದ್ದಾರೆ. ಎಕ್ಸ್​ ಆ್ಯಪ್​ ಖಾತೆ (ಹಿಂದಿನ ಟ್ವಿಟರ್​)ಯಲ್ಲಿ, "ಹಾರ್ದಿಕ್ ಪಾಂಡ್ಯ ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಆರನೇ ಬೌಲಿಂಗ್ ಆಯ್ಕೆಯನ್ನು ಮಾಡಿರುವುದು ದೊಡ್ಡ ಹೊಡೆತ. ಅವರ ಸ್ಥಾನಕ್ಕೆ ಭಾರತದ ವೇಗಿ ಪ್ರಸಿದ್ಧ್ ಕೃಷ್ಣ ಆಯ್ಕೆಯಾಗಿದ್ದಾರೆ. ಇದು ಭಾರತದಲ್ಲಿ ಹಾರ್ದಿಕ್ ಅವರ ಕೌಶಲ್ಯ ಇರುವ ಆಟಗಾರರು ಎಷ್ಟು ಜನ ಲಭ್ಯವಿದ್ದಾರೆ ಎಂಬುದರ ಕುರಿತು ಬಹಳಷ್ಟು ಹೇಳುತ್ತದೆ. ಹಾಗೇ ಇದಕ್ಕೆ ಉತ್ತರ ಶೂನ್ಯ" ಎಂದು ಬರೆದುಕೊಂಡಿದ್ದಾರೆ.

  • Happy for Prasidh Krishna. But he isn’t a like for like replacement for Pandya. Is he? #CWC23

    — Dodda Ganesh | ದೊಡ್ಡ ಗಣೇಶ್ (@doddaganesha) November 4, 2023 " class="align-text-top noRightClick twitterSection" data=" ">

ಕರ್ನಾಟಕದವರೇ ಆದ ದೊಡ್ಡ ಗಣೇಶ್​ ಪ್ರಸಿದ್ಧ್​​ ಆಯ್ಕೆಗೆ ಸಂತಸ ವ್ಯಕ್ತ ಪಡಿಸಿದರೂ, ಹಾರ್ದಿಕ್​ಗೆ ಪರ್ಯಾಯ ಅಲ್ಲ ಎಂದು ಹೇಳಿದ್ದಾರೆ. ಎಕ್ಸ್​ ಆ್ಯಪ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, " ಪ್ರಸಿದ್ಧ್ ಕೃಷ್ಣ ಅವರ ಆಯ್ಕೆ ಖುಷಿ ತಂದಿದೆ. ಆದರೆ ಅವರು ಪಾಂಡ್ಯ ಬದಲಿ ಆಟಗಾರ ಆಗಬಲ್ಲರೇ?" ಎಂಬ ಪ್ರಶ್ನೆಯನ್ನೂ ಇದೇ ವೇಳೆ ಮಾಡಿದ್ದಾರೆ.

ಟೀಮ್​ ಇಂಡಿಯಾದ ಮಾಜಿ ಆಟಗಾರ ಜತಿನ್ ಪರಾಂಜಪೆ ಸಹ ಪಾಂಡ್ಯ ಬದಲಿಗೆ ಪ್ರಸಿದ್ಧ್​​ ಕೃಷ್ಣ ಆಯ್ಕೆ ಎಷ್ಟು ಸರಿ ಎಂಬಂತೆ ಪ್ರಶ್ನಿಸಿದ್ದಾರೆ. "ಇದೊಂದು ದುರದೃಷ್ಟಕರ ಬೆಳವಣಿಗೆ. ನಾಕ್ ಔಟ್ ಪಂದ್ಯಕ್ಕೆ 5 ಬೌಲರ್​ಗಳ ಜೊತೆ ಆಡುವುದು ಸರಿಯಲ್ಲ. ಇದರರ್ಥ ಪ್ಲಾನ್ ಬಿ ಬಗ್ಗೆ ಇನ್ನಷ್ಟೂ ಕೂಲಂಕಷ ಚಿಂತನೆ ಅಗತ್ಯ!" ಎಂದಿದ್ದಾರೆ.

ವಿಶ್ವಕಪ್​ನಲ್ಲಿ ಹಾರ್ದಿಕ್​: ಹಾರ್ದಿಕ್​​ ಪಾಂಡ್ಯ ಅವರು ವೇಗದ ಆಲ್​ರೌಂಡರ್​ ಆಗಿ ತಂಡದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅಲ್ಲದೇ ಅವರು ಟೀಮ್​ ಇಂಡಿಯಾದ ಟಿ20 ತಂಡದ ನಾಯಕರಾಗಿ ಯಶಸ್ವಿಯಾಗಿದ್ದಾರೆ. ನಡೆಯುತ್ತಿರುವ ವಿಶ್ವಕಪ್​ನಲ್ಲಿ ಮೊದಲ ಮೂರು ಪಂದ್ಯದಲ್ಲಿ ಹಾರ್ದಿಕ್​ ಪಾಂಡ್ಯಗೆ ಬ್ಯಾಟಿಂಗ್​ನಲ್ಲಿ ಅಷ್ಟು ಅವಕಾಶ ಸಿಗಲಿಲ್ಲ. ಆದರೆ, ಬೌಲಿಂಗ್​ನಲ್ಲಿ 16.3 ಓವರ್​ ಮಾಡಿದರು ಹಾರ್ದಿಕ್​​ 5 ವಿಕೆಟ್​​ ಕಬಳಿಸಿದ್ದಾರೆ. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್​ ಮಾಡಿದ ಹಾರ್ದಿಕ್​ ಅಜೇಯ 11 ರನ್​ಗಳನ್ನು ಬಾರಿಸಿದ್ದರು.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್: ರಚಿನ್, ವಿಲಿಯಮ್ಸನ್​ ಭರ್ಜರಿ ಆಟ.. ಪಾಕಿಸ್ತಾನಕ್ಕೆ 402 ರನ್​ಗಳ ಬೃಹತ್​ ಗುರಿ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.