ಬ್ರಿಸ್ಬೇನ್: ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ 95 ಮತ್ತು ಟ್ರಾವಿಸ್ ಹೆಡ್(112) ಅಜೇಯ ಶತಕದ ನೆರವಿನಿಂದ ಆಸ್ಟ್ರೇಲಿಯಾ ತಂಡ ಮೊದಲ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ಆಂಗ್ಲರ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ.
ಮೊದಲ ಪಂದ್ಯದ ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಆಂಗ್ಲರ ವೇಗದ ದಾಳಿಗೆ ತತ್ತರಿಸಿ ಕೇವಲ 147 ರನ್ಗಳಿಗೆ ಆಲೌಟ್ ಆಯಿತು. ಜೋಶ್ ಬಟ್ಲರ್ 39, ಒಲ್ಲಿ ಪೋಪ್ 35 ಮತ್ತು ಹಸೀಬ್ ಹಮೀದ್ 25 ಮತ್ತು ಕ್ರಿಸ್ ವೋಕ್ಸ್ 21 ರನ್ಗಳಿಸಿ ತಂಡದ ಪರ ಎರಡಂಕಿ ಮೊತ್ತ ದಾಖಲಿಸಿದ ಬ್ಯಾಟರ್ಗಳೆನಿಸಿಕೊಂಡರು.
ನಾಯಕ ಜೋ ರೂಟ್(0), ರೋರಿ ಬರ್ನ್ಸ್(0), ಡೇವಿಡ್ ಮಲನ್(6) ದೀರ್ಘ ಸಮಯದ ನಂತರ ತಂಡಕ್ಕೆ ಮರಳಿದ ಬೆನ್ ಸ್ಟೋಕ್ಸ್(5) ಅಲ್ಪ ಮೊತ್ತಕ್ಕೆ ವಿಕೆಟ್ ನೀಡಿ ನಿರಾಶೆಯನುಭವಿಸಿದರು.
-
A brilliant day two for Australia at the Gabba as they secure a lead of 196 runs.#Ashes | #WTC23 | #AUSvENG | https://t.co/pR2hqnzR22 pic.twitter.com/Pngwu8Cmuh
— ICC (@ICC) December 9, 2021 " class="align-text-top noRightClick twitterSection" data="
">A brilliant day two for Australia at the Gabba as they secure a lead of 196 runs.#Ashes | #WTC23 | #AUSvENG | https://t.co/pR2hqnzR22 pic.twitter.com/Pngwu8Cmuh
— ICC (@ICC) December 9, 2021A brilliant day two for Australia at the Gabba as they secure a lead of 196 runs.#Ashes | #WTC23 | #AUSvENG | https://t.co/pR2hqnzR22 pic.twitter.com/Pngwu8Cmuh
— ICC (@ICC) December 9, 2021
ಆಸ್ಟ್ರೇಲಿಯಾ ಪರ ಪ್ಯಾಟ್ ಕಮ್ಮಿನ್ಸ್ 38ಕ್ಕೆ5, ಮಿಚೆಲ್ ಸ್ಟಾರ್ಕ್35ಕ್ಕೆ2, ಜೋಶ್ ಹೆಜಲ್ವುಡ್ 42ಕ್ಕೆ 2 ಹಾಗೂ ಕ್ಯಾಮೆರಾನ್ ಗ್ರೀನ್ 6ಕ್ಕೆ 1 ವಿಕೆಟ್ ಪಡೆದು ಆಂಗ್ಲರನ್ನು ಅಲ್ಪ ಮೊತ್ತಕ್ಕೆ ಆಲೌಟ್ ಮಾಡಿದರು.
ವಾರ್ನರ್ -ಲಾಬುಶೇನ್ ಶತಕದ ಜೊತೆಯಾಟ:
2ನೇ ದಿನ ಆಂಗ್ಲರ 147 ರನ್ಗಳನ್ನು ಹಿಂಬಾಲಿಸಿದ ಆಸ್ಟ್ರೇಲಿಯಾ 10 ರನ್ಗಳಿಸುವಷ್ಟರಲ್ಲಿ ಮಾರ್ಕಸ್ ಹ್ಯಾರಿಸ್ ವಿಕೆಟ್ ಕಳೆದುಕೊಂಡಿತು. ಆದರೆ 2ನೇ ವಿಕೆಟ್ ಒಂದಾದ ಡೇವಿಡ್ ವಾರ್ನರ್ ಮತ್ತು ಲಾಬುಶೇನ್ 156 ರನ್ಗಳ ಬೃಹತ್ ಜೊತೆಯಾಟ ನೀಡಿದರು. ಲಾಬುಶೇನ್ 117 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 74 ರನ್ಗಳಿಸಿ ಜಾಕ್ ಲೀಚ್ಗೆ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಸ್ಟೀವ್ ಸ್ಮಿತ್(12) ಮಾರ್ಕ್ ವುಡ್ ಬೌಲಿಂಗ್ನಲ್ಲಿ ಕೀಪರ್ ಬಟ್ಲರ್ಗೆ ಕ್ಯಾಚ್ ನೀಡಿ ಔಟಾದರು. 3ನೇ ಓವರ್ಗಳ ಬಳಿಕ 176 ಎಸೆತಗಳಲ್ಲಿ 11 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 94 ರನ್ಗಳಿಸಿದ್ದ ವಾರ್ನರ್ ಕೂಡ ರಾಬಿನ್ಸನ್ಗೆ ವಿಕೆಟ್ ಒಪ್ಪಿಸಿದರು.
ಟ್ರಾವಿಸ್ ಹೆಡ್ ಅಬ್ಬರದ ಶತಕ:
5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಟ್ರಾವಿಸ್ ಹೆಡ್ ಒಂದು ಕಡೆ ವಿಕೆಟ್ ಬೀಳುತ್ತಿದ್ದರೂ ಸಹ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 85 ಎಸೆತಗಳಲ್ಲಿ ಶತಕ ಪೂರೈಸಿದರು. ಇವರು ಅಲೆಕ್ಸ್ ಕ್ಯಾರಿ(12) ಜೊತೆಗೆ 41, ಪ್ಯಾಟ್ ಕಮ್ಮಿನ್ಸ್(12) ಜೊತೆ 70 ರನ್ಗಳ ಜೊತೆಯಾಟ ನೀಡಿದರು. ಪ್ರಸ್ತುತ 95 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 112 ರನ್ಗಳಿಸಿರುವ ಹೆಡ್ ಹಾಗೂ 10 ರನ್ಗಳಿಸಿರುವ ಸ್ಟಾರ್ಕ್ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ.
ಆಸ್ಟ್ರೇಲಿಯಾ 84 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 343 ರನ್ಗಳಿಸಿ 196 ರನ್ಗಳ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡಿದೆ.
ಇದನ್ನೂ ಓದಿ:ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ: ಕೊಹ್ಲಿ ನೇತೃತ್ವದ ಬಲಿಷ್ಠ ಬಳಗ ಪ್ರಕಟ, ವಿಹಾರಿ ಕಮ್ಬ್ಯಾಕ್