ಮುಂಬೈ: ಪ್ರಸ್ತುತ ಐಪಿಎಲ್ನಲ್ಲಿ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ರನ್ಗಳಿಸುವಲ್ಲಿ ವಿಫಲರಾಗುತ್ತಿದ್ದಾರೆ. 6 ಪಂದ್ಯಗಳನ್ನಾಡಿದರೂ ಒಂದೂ ಅರ್ಧಶತಕವನ್ನೂ ಸಿಡಿಸದಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಸದ್ಯಕ್ಕೆ ಇಲ್ಲಿವರೆಗಿನ ಟೂರ್ನಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನವೆಂದರೆ ಪಂಜಾಬ್ ವಿರುದ್ಧದ 41 ಮತ್ತು ಮುಂಬೈ ವಿರುದ್ಧ 48ರನ್ಗಳಿಸಿದ್ದಾಗಿದೆ.
ಐಪಿಎಲ್ನಲ್ಲಿ ಮಾತ್ರವಲ್ಲ, ರಾಷ್ಟ್ರೀಯ ತಂಡದ ಪರವೂ ಅವರ ಪ್ರದರ್ಶನ ಇಳಿಮುಖವಾಗಿದೆ. ಕಳೆದ 2 ವರ್ಷಗಳಿಂದ ಅವರು ಯಾವುದೇ ಮಾದರಿಯಲ್ಲೂ ಶತಕ ಸಿಡಿಸಿಲ್ಲ. ದಿನದಿಂದ ದಿನಕ್ಕೆ ವೈಫಲ್ಯದ ಹಾದಿಯಲ್ಲೇ ಮುಂದುವರೆಯುತ್ತಿರುವ ಕೊಹ್ಲಿ ಫಾರ್ಮ್ ಬಗ್ಗೆ ಮಾತನಾಡಿರುವ ಪಾಕಿಸ್ತಾನದ ಮಾಜಿ ವೇಗಿ ಶೋಯಬ್ ಅಖ್ತರ್, ಟೀಮ್ ಇಂಡಿಯಾ ಮಾಜಿ ನಾಯಕ ತಮ್ಮೆದುರು ಆಡಿದ್ದಿದ್ದರೆ ಸ್ಕೋರ್ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾರೆ.
"ವಿರಾಟ್ ಒಬ್ಬ ಒಳ್ಳೆಯ ವ್ಯಕ್ತಿ. ಒಬ್ಬ ಒಳ್ಳೆಯ ಆಟಗಾರ ಮತ್ತು ಅದ್ಭುತ ಕ್ರಿಕೆಟಿಗ. ಆದರೆ ಅವರು ಈ ಸಮಯದಲ್ಲಿ ಒಂದು ವಿಷಯ ತಲೆಯಲ್ಲಿ ಇಟ್ಟುಕೊಳ್ಳಬೇಕೆಂದು ಬಯಸುತ್ತೇನೆ, ಅದೇನೆಂದರೆ ಅವರು ತಮ್ಮನ್ನು ತಾವೊಬ್ಬ ಸಾಧಾರಣ ಆಟಗಾರ ಎಂದು ಭಾವಿಸಬೇಕು, ನಂತರ ಬ್ಯಾಟ್ ತೆಗೆದುಕೊಂಡು ಹೋಗಿ ಆಡಬೇಕು. ಜನರು ಈಗಾಗಲೇ ವಿರಾಟ್ ಕೊಹ್ಲಿ ಕಡೆಗೆ ಬೆರಳು ತೋರಿಸಿ ಮಾತನಾಡಲು ಆರಂಭಿಸಿದ್ದಾರೆ. ಇದು ತುಂಬಾ ಅಪಾಯಕಾರಿ" ಎಂದು ಅಖ್ತರ್ ಸ್ಪೋರ್ಟ್ಸ್ ಕೀಡಾ ಕಾರ್ಯಕ್ರಮದಲ್ಲಿ ತಿಳಿಸಿದರು.
ವಿರಾಟ್ ಕೊಹ್ಲಿಯ ರನ್ಗಳಿಕೆ ಮತ್ತು ಶತಕಗಳ ಬಗ್ಗೆ ಮಾತನಾಡುತ್ತಾ, ಒಂದು ವೇಳೆ ಕೊಹ್ಲಿ ನನ್ನನ್ನು ಎದುರಿಸಿದ್ದರೆ, ಅವರು ಇಷ್ಟೊಂದು ರನ್ ಅಥವಾ 70 ಶತಕಗಳನ್ನು ಸಿಡಿಸಲು ಆಗುತ್ತಿರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಇಶಾನ್ ಕಿಶನ್ ಅಷ್ಟು ವೇತನಕ್ಕೆ ಯೋಗ್ಯರಲ್ಲ, ಜೋಫ್ರಾ ಮೇಲೆ ಹಣ ಹೂಡಿದ್ದು ವ್ಯರ್ಥ: ಶೇನ್ ವಾಟ್ಸನ್ ಟೀಕೆ
"ವಿರಾಟ್ ಕೊಹ್ಲಿ ಒಬ್ಬ ಒಳ್ಳೆಯ ವ್ಯಕ್ತಿ ಮತ್ತು ದೊಡ್ಡ ಕ್ರಿಕೆಟಿಗ. ದೊಡ್ಡ ಆಟಗಾರನಿಂದ ಯಾವಾಗಲೂ ದೊಡ್ಡ ಹೇಳಿಕೆಗಳೇ ಬರುತ್ತವೆ. ಅದಕ್ಕಾಗಿ ನಾನು ಅವರಿಗೆ ಧನ್ಯವಾದ ತಿಳಿಸುತ್ತೇನೆ. ಆದರೆ, ನಾನೇನಾದರೂ ವಿರಾಟ್ ಕೊಹ್ಲಿ ವಿರುದ್ಧ ಆಡಿದ್ದೇ ಆಗಿದ್ದರೆ, ಅವರು ವೃತ್ತಿ ಜೀವನದಲ್ಲಿ ಇಷ್ಟೊಂದು ಸ್ಕೋರ್ ಮಾಡುತ್ತಿರಲಿಲ್ಲ. ಆದರೆ ಅದೇನೇ ಆದರೂ ಪ್ರಸ್ತುತ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಇಷ್ಟೊಂದು ರನ್‌ಗಳಿಸಿರುವುದು ಅದ್ಭುತ"
"ಆದರೆ ನನ್ನ ವಿರುದ್ಧ ಆಡಿದ್ದೇ ಆಗಿದ್ದರೆ ಅವರು ಸಾಕಷ್ಟು ಹಿನ್ನಡೆ ಅನುಭವಿಸುತ್ತಿದ್ದರು. ಅವರು 50 ಶತಕಗಳನ್ನು ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚೆಂದರೆ 20 ಅಥವಾ 25 ಶತಕಗಳನ್ನು ಮಾತ್ರ ಬಾರಿಸಿರುತ್ತಿದ್ದರು. ಅವುಗಳು ವೀರ ಶತಕಗಳಾಗುತ್ತಿದ್ದವು. ಆದರೆ ನನ್ನೆದುರು ವಿರಾಟ್ ತಮ್ಮ ಸರ್ವಶ್ರೇಷ್ಠ ಆಟವನ್ನು ಹೊರತರುತ್ತಿದ್ದೆ" ಎಂದು ಅಖ್ತರ್ ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ.
ವಿರಾಟ್ 2017ರಲ್ಲಿ ಬ್ರೇಕ್ಫಾಸ್ಟ್ ವಿತ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ವಿಶ್ವದ ಯಾವುದೇ ಬ್ಯಾಟರ್ ಅಖ್ತರ್ ಬೌಲಿಂಗ್ ಎದುರಿಸಲು ಬಯಸಲ್ಲ ಎಂದು ಹೇಳಿಕೊಂಡಿದ್ದರು. ಅದಕ್ಕಾಗಿಯೇ ಅಖ್ತರ್ ಇಂದು ಕೊಹ್ಲಿಯ ಆ ಹೇಳಿಕೆಯನ್ನು ಗಣನೆಗೆ ತೆಗೆದುಕೊಂಡು ತಮ್ಮ ಬಗ್ಗೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅಖ್ತರ್ ಕೇವಲ ಒಂದು ಪಂದ್ಯದಲ್ಲಿ ಒಟ್ಟಿಗೆ ಆಡಿದ್ದಾರೆ. ಆದರೆ ಆ ಪಂದ್ಯದಲ್ಲಿ ಕೊಹ್ಲಿ ಸಯೀದ್ ಅಜ್ಮಲ್ಗೆ ವಿಕೆಟ್ ಒಪ್ಪಿಸಿದ್ದರಿಂದ ಅಖ್ತರ್ ಎದುರು ಆಡುವ ಅವಕಾಶ ಎದುರಾಗಿರಲಿಲ್ಲ.
ಇದನ್ನೂ ಓದಿ:IPL ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಸೋಲು.. ಮುಂಬೈ ಇಂಡಿಯನ್ಸ್ ಈ ಬೇಡದ ದಾಖಲೆ ಪಟ್ಟಿಗೆ ಸೇರಿದ 3ನೇ ತಂಡ!