ETV Bharat / sports

ಹಸರಂಗ ಹ್ಯಾಟ್ರಿಕ್: ಏಕದಿನ ಮತ್ತು ಟಿ20 ಎರಡರಲ್ಲೂ ಈ ಸಾಧನೆ ಮಾಡಿದ 4ನೇ ಬೌಲರ್​! - ಕರ್ಟಿಸ್​ ಕ್ಯಾಂಫರ್​ . ಲಸಿತಗ್ ಮಾಲಿಂಗ

ಹಸರಂಗ 15ನೇ ಓವರ್​ನ ಕೊನೆಯ ಎಸೆತದಲ್ಲಿ 16 ರನ್​ಗಳಿಸಿದ್ದ ಮಾರ್ಕ್ರಮ್​ರನ್ನು ಮತ್ತು 17ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ 46 ರನ್​ಗಳಿಸಿದ್ದ ಬವೂಮ ಮತ್ತು ಪ್ರೆಟೋರಿಯಸ್​ರನ್ನು ವಿಕೆಟ್​ ಪಡೆಯುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಸಾಧಿಸಿದ 3ನೇ ಬೌಲರ್ ಎನಿಸಿಕೊಂಡರು..

Hasaranga takes hat-trick against South Africa in T20 World Cup
ಹ್ಯಾಟ್ರಿಕ್ ಹಸರಂಗ
author img

By

Published : Oct 30, 2021, 8:53 PM IST

ಶಾರ್ಜಾ : ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಶ್ರೀಲಂಕಾದ ವನಿಂಡು ಹಸರಂಗ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಟಿ20 ವಿಶ್ವಕಪ್​ ಇತಿಹಾಸದಲ್ಲಿ ಈ ಸಾಧನೆ ಮಾಡಿದ 3ನೇ ಬೌಲರ್​ ಎನಿಸಿದ್ದಾರೆ.

ಹಸರಂಗ ಶಾರ್ಜಾದಲ್ಲಿ ನಡೆಯುತ್ತಿರುವ ಸೂಪರ್​ 12 ಪಂದ್ಯದಲ್ಲಿ 143 ರನ್​ಗಳ ಟಾರ್ಗೆಟ್ ಬೆನ್ನತ್ತಿದ ದಕ್ಷಿಣ ಅಫ್ರಿಕಾ ತಂಡ ಸುಲಭವಾಗಿ ಗೆಲುವು ಸಾಧಿಸುವ ಆಲೋಚನೆಯಲ್ಲಿತ್ತು.

ಆದರೆ, ಹಸರಂಗ ಹರಿಣಗಳ ಬ್ಯಾಟಿಂಗ್ ಬಲವಾಗಿದ್ದ ಐಡೆನ್ ಮಾರ್ಕ್ರಮ್​ ಜೊತೆಗೆ ಉತ್ತಮವಾಗಿ ಆಡುತ್ತಿದ್ದ ನಾಯಕ ಟೆಂಬ ಬವೂಮ ಮತ್ತು ಆಲ್​ರೌಂಡರ್​ ಪ್ರೆಟೋರಿಯಸ್​ ವಿಕೆಟ್​ ಪಡೆದು ಶ್ರೀಲಂಕಾ ಕಡೆಗೆ ಪಂದ್ಯವನ್ನು ತಿರುಗಿಸಿದ್ದರು. ಆದರೆ, ರಬಾಡ ಮತ್ತು ಮಿಲ್ಲರ್​ ಕೊನೆಯ 12 ಎಸೆತಗಳಲ್ಲಿ 26 ರನ್​ ಸಿಡಿಸಿ ಪಂದ್ಯವನ್ನು ಲಂಕಾ ಕೈಯಿಂದ ಕಸಿದುಕೊಂಡರು.

ಹಸರಂಗ 15ನೇ ಓವರ್​ನ ಕೊನೆಯ ಎಸೆತದಲ್ಲಿ 16 ರನ್​ಗಳಿಸಿದ್ದ ಮಾರ್ಕ್ರಮ್​ರನ್ನು ಮತ್ತು 17ನೇ ಓವರ್​ನ ಮೊದಲೆರಡು ಎಸೆತಗಳಲ್ಲಿ 46 ರನ್​ಗಳಿಸಿದ್ದ ಬವೂಮ ಮತ್ತು ಪ್ರೆಟೋರಿಯಸ್​ರನ್ನು ವಿಕೆಟ್​ ಪಡೆಯುವ ಮೂಲಕ ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ಸಾಧಿಸಿದ 3ನೇ ಬೌಲರ್ ಎನಿಸಿಕೊಂಡರು.

ಹಸರಂಗಗಿಂತ ಮೊದಲು 2007ರಲ್ಲಿ ಆಸ್ಟ್ರೇಲಿಯಾದ ವೇಗಿ ಬ್ರೆಟ್​ ಲೀ ಕೇಪ್​ಟೌನ್​ನಲ್ಲಿ ಬಾಂಗ್ಲಾದೇಶದ ವಿರುದ್ಧ, 2021ರ ವಿಶ್ವಕಪ್​ನ ಕ್ವಾಲಿಫೈಯರ್​ನಲ್ಲಿ ಐರ್ಲೆಂಡ್​ನ ಕರ್ಟಿಸ್​ ಕ್ಯಾಂಫರ್​ ನೆದರ್ಲೆಂಡ್ಸ್ ವಿರುದ್ಧ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಹ್ಯಾಟ್ರಿಕ್

ಹಸರಂಗ ಏಕದಿನ ಮತ್ತು ಟಿ20 ಕ್ರಿಕೆಟ್​ ಎರಡರಲ್ಲೂ ಹ್ಯಾಟ್ರಿಕ್ ವಿಕೆಟ್​ ಪಡೆದ ವಿಶ್ವದ 4ನೇ ಬೌಲರ್​ ಎಂಬ ಶ್ರೇಯಕ್ಕೆ ಪಾತ್ರರಾದರು. ಬ್ರೆಟ್​ ಲೀ, ತಿಸಾರ ಪೆರೆರಾ, ಲಸಿತ್ ಮಾಲಿಂಗ ಈ ಮೊದಲು ಎರಡೂ ಓವರ್​ಗಳಲ್ಲೂ ಹ್ಯಾಟ್ರಿಕ್ ಪಡೆದಿದ್ದಾರೆ.

ಇದನ್ನು ಓದಿ:ಶ್ರೀಲಂಕಾ ಪಾಲಿಗೆ ಕಿಲ್ಲರ್​ ಆದ ಮಿಲ್ಲರ್.. ದಕ್ಷಿಣ ಆಫ್ರಿಕಾಗೆ 4 ವಿಕೆಟ್​ಗಳ ರೋಚಕ ಜಯ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.