ದುಬೈ: ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಬಾಂಗ್ಲಾದೇಶ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಐಸಿಸಿ ಮಹಿಳಾ ಆಟಗಾರ್ತಿ ರ‍್ಯಾಂಕಿಂಗ್‌ನಲ್ಲಿ ನಾಲ್ಕು ಸ್ಥಾನ ಮೇಲಕ್ಕೇರಿ ಟಾಪ್ ಟೆನ್ನಲ್ಲಿ ಅಗ್ರ ಸ್ಥಾನ ಪಡೆದ್ದಾರೆ. ಐಸಿಸಿ ಮಹಿಳಾ ಆಟಗಾರರ ಶ್ರೇಯಾಂಕದ ಇತ್ತೀಚಿನ ಅಪ್‌ಡೇಟ್‌ನಲ್ಲಿ ಟಿ-20ಐ ಮತ್ತು ಒಡಿಐ ತಂಡದಲ್ಲಿ ಗಮನಾರ್ಹ ಬದಲಾವಣೆ ಕಂಡಿದೆ.
ಬ್ಯಾಟಿಂಗ್ ಶ್ರೇಯಾಂಕದಲ್ಲಿ ತಹ್ಲಿಯಾಗೆ ಅಗ್ರಸ್ಥಾನ: ತಹ್ಲಿಯಾ ಮೆಕ್‌ಗ್ರಾತ್ 784 ರೇಟಿಂಗ್ ಅಂಕಗಳನ್ನು ಪಡೆದು, ಟಿ-20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಸಹ ಆಟಗಾರ್ತಿ ಬೆತ್ ಮೂನಿ (777) ನಂತರದ ಸ್ಥಾನದಲ್ಲಿದ್ದಾರೆ. ಸ್ಮೃತಿ ಮಂಧಾನ (728), ಸೋಫಿ ಡಿವೈನ್ (683) ಹಾಗೂ ಬೇಟ್ಸ್ (677) ಮೊದಲ ಐದು ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ವಾರದ ಅಪ್‌ಡೇಟ್‌ನಲ್ಲಿ ಟಿ-20ಐ ಬ್ಯಾಟರ್‌ಗಳಿಗಾಗಿ ಮಹಿಳಾ ಶ್ರೇಯಾಂಕದಲ್ಲಿ ನ್ಯೂಜಿಲ್ಯಾಂಡ್ ತಾರೆ ಸುಜಿ ಬೇಟ್ಸ್ ಅಗ್ರ ಸ್ಥಾನಕ್ಕೆ ಸಮೀಪಿಸುತ್ತಿದ್ದಾರೆ. ಐಸಿಸಿ ಪ್ರಕಾರ, ಮೂರು ಸ್ಥಾನಗಳನ್ನು ಮೇಲಕ್ಕೇರಿ 5ನೇ ಸ್ಥಾನಕ್ಕೆ ಬಂದಿದ್ದಾರೆ.
ಶ್ರೀಲಂಕಾ ವಿರುದ್ಧದ ಟಿ-20ಐ ಸರಣಿಯಲ್ಲಿ ನ್ಯೂಜಿಲ್ಯಾಂಡ್ ಮೊದಲ ಮತ್ತು ಎರಡನೇ ಪಂದ್ಯಗಳಲ್ಲಿ ಕ್ರಮವಾಗಿ 44 ಮತ್ತು 52 ಸ್ಕೋರ್‌ಗಳೊಂದಿಗೆ 2-0 ಮುನ್ನಡೆ ಸಾಧಿಸುವಲ್ಲಿ ಅನುಭವಿ ಆರಂಭಿಕ ಆಟಗಾರ್ತಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬೇಟ್ಸ್ ತಂಡದ ಸಹ ಆಟಗಾರ್ತಿ ಅಮೆಲಿಯಾ ಕೆರ್ ಅವರು ಶ್ರೀಲಂಕಾ ವಿರುದ್ಧದ ಎರಡು ಶ್ರೇಷ್ಠ ಪಂದ್ಯಗಳ ನಂತರ (34 ಮತ್ತು 33*), ವೃತ್ತಿಜೀವನದ ಅತ್ಯಧಿಕ 606 ರೇಟಿಂಗ್ ಅಂಕಗಳನ್ನು ಗಳಿಸಿದರು.
ಸ್ಟಾರ್ ಕಿವೀಸ್ ಆಲ್ ರೌಂಡರ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಎರಡು ಸ್ಥಾನ ಮೇಲೇರಿ 15ನೇ ಸ್ಥಾನಕ್ಕೆ ತಲುಪಿದ್ದಾರೆ. 22 ವರ್ಷ ವಯಸ್ಸಿನವರು ಸರಣಿಯಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದರು. ಆಲ್‌ರೌಂಡರ್ ಶ್ರೇಯಾಂಕದಲ್ಲಿ 3ನೇ ಸ್ಥಾನ ಗಳಿಸಿ, ಅಗ್ರ ಆಲ್‌ರೌಂಡರ್ ಸ್ಥಾನಕ್ಕೆ ಹತ್ತಿರವಾಗಿದ್ದಾರೆ. ಶ್ರೇಯಾಂಕದಲ್ಲಿ ಲೀ ತಹುಹು 6ನೇ ಸ್ಥಾನಕ್ಕೆ ಏರಿದ್ದಾರೆ.
ಹೇಯ್ಲಿ ಮ್ಯಾಥ್ಯೂಸ್ಗೆ ಉತ್ತಮ ಸ್ಥಾನ: ಹೇಯ್ಲಿ ಮ್ಯಾಥ್ಯೂಸ್ ಐರ್ಲೆಂಡ್ ವಿರುದ್ಧದ ಟಿ-20ಐ ಸರಣಿಯ ಸಮಯದಲ್ಲಿ ಎಲ್ಲಾ ಮೂರು ಪಂದ್ಯಗಳಲ್ಲಿ ನಂಬಲಾಗದ ಆಲ್-ರೌಂಡ್ ಪ್ರದರ್ಶನಗಳನ್ನು ನೀಡಿದ್ದರು. ಮೂರನೇ ಪಂದ್ಯದಲ್ಲಿ ಹ್ಯಾಟ್ರಿಕ್ ಸೇರಿದಂತೆ, ಸ್ಟಾರ್ ಆಲ್‌ರೌಂಡರ್ ಹಿಂದಿನ ತಿಂಗಳಿನಿಂದ ತನ್ನ ಫಾರ್ಮ್ ಅನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಅವರು ಐಸಿಸಿ ಮಹಿಳಾ ಆಟಗಾರ್ತಿಯರ ಜೂನ್ ತಿಂಗಳ ಶಾರ್ಟ್ಲಿಸ್ಟ್ನಲ್ಲಿದ್ದ ಮೂವರಲ್ಲಿ ಸ್ಥಾನ ಗಳಿಸಿದ್ದರು.
ಬ್ಯಾಟಿಂಗ್‌ನಲ್ಲಿ (ಐದು ಸ್ಥಾನಗಳನ್ನು ಮೇಲಕ್ಕೇರಿ 17ನೇ ಸ್ಥಾನ) ಮತ್ತು ಬೌಲಿಂಗ್‌ನಲ್ಲಿ (ಮೂರು ಸ್ಥಾನಗಳನ್ನು ಮೇಲಕ್ಕೇರಿ 7ನೇ ಸ್ಥಾನ) ಅವರು ರನ್-ಸ್ಕೋರಿಂಗ್ ಚಾರ್ಟ್‌ಗಳಲ್ಲಿ (135 ರನ್) ಮತ್ತು ವಿಕೆಟ್-ಟೇಕರ್‌ಗಳ ಪಟ್ಟಿಯಲ್ಲಿ (ಎಂಟು ವಿಕೆಟ್‌ಗಳು) ಅಗ್ರಸ್ಥಾನದಲ್ಲಿದ್ದರು. ಅವರು ವೃತ್ತಿಜೀವನದ ಅತ್ಯುತ್ತಮ 422 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ತನ್ನ ಎರಡನೇ ಸ್ಥಾನವನ್ನು ಗಟ್ಟಿಗೊಳಿಸಿದ್ದಾರೆ. ವಿಂಡೀಸ್ ತಾರೆ ಈಗ ಆಸ್ಟ್ರೇಲಿಯಾದ ಆಶ್ ಗಾರ್ಡ್ನರ್‌ಗಿಂತ ಕೇವಲ 13 ಅಂಕಗಳ ಹಿಂದೆ ಇದ್ದರೂ ಕೂಡ ಅಗ್ರಸ್ಥಾನದಲ್ಲಿದ್ದಾರೆ.
ಬೌಲರ್‌ಗಳ ಪಟ್ಟಿಯಲ್ಲಿ ದೀಪ್ತಿ ಶರ್ಮಾಗೆ 3ನೇ ಸ್ಥಾನ: ದೀಪ್ತಿ ಶರ್ಮಾ ಅವರು 733 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಬೌಲರ್‌ಗಳ ಪಟ್ಟಿಯಲ್ಲಿ 3ನೇ ಸ್ಥಾನ ಪಡೆದುಕೊಂಡಿದ್ದಾರೆ. ನಾನ್‌ಕುಲುಲೆಕೊ ಮ್ಲಾಬಾ (746) ಮತ್ತು ಸೋಫಿ ಎಕ್ಲೆಸ್ಟೋನ್ (788) ಅವರೊಂದಿಗಿನ ಅಂತರವನ್ನು ಮತ್ತಷ್ಟು ಕಡಿಮೆಗೊಳಿಸಿದ್ದಾರೆ. ಮಹಿಳಾ ಆ್ಯಶಸ್‌ನ ಟಿ-20ಐ ಲೆಗ್‌ನಲ್ಲಿ ಅಗ್ರ ಪ್ರದರ್ಶನ ನೀಡಿ, ಶ್ರೇಯಾಂಕದಲ್ಲಿ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಸರಣಿಯಲ್ಲಿ 115 ರನ್‌ಗಳೊಂದಿಗೆ ಅತ್ಯಧಿಕ ರನ್ ಗಳಿಸಿದ ಮೂನಿ, ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ಮೆಕ್‌ಗ್ರಾತ್‌ರೊಂದಿಗಿನ ಅಂತರವನ್ನು ಕಡಿಮೆಗೊಳಿಸಿದ್ದಾರೆ.
ಅಗ್ರ ವಿಕೆಟ್ ಟೇಕರ್ ಎಕ್ಲೆಸ್ಟೋನ್ ಅವರು ಬೌಲರ್‌ಗಳ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿದ್ದಾರೆ. ಗಾರ್ಡ್ನರ್ ಆಲ್-ರೌಂಡರ್‌ಗಳ ಶ್ರೇಯಾಂಕದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ: ICC ODI World Cup 2023: ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುವ ವಿಶ್ವಕಪ್ ಪಂದ್ಯಗಳ ಟಿಕೆಟ್ ಬೆಲೆ ಪ್ರಕಟ