ETV Bharat / sports

ಮೈ ಡಾರ್ಲಿಂಗ್' ಹುಟ್ಟುಹಬ್ಬದ ಶುಭಾಶಯ ಮಹಿ ಭಾಯ್​: ಧೋನಿಗೆ ವಿಶೇಷವಾಗಿ ಶುಭ ಕೋರಿದ ಹಾರ್ದಿಕ್​ - ಧೋನಿ ಹುಟ್ಟುಹಬ್ಬ

41ನೇ ವಸಂತಕ್ಕೆ ಕಾಲಿಟ್ಟಿರುವ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕೆ ಹಾರ್ದಿಕ್ ಪಾಂಡ್ಯಾ ವಿಶೇಷವಾಗಿ ಶುಭ ಹಾರೈಸಿದ್ದಾರೆ.

Hardik Pandya tweets MS Dhoni birthday
Hardik Pandya tweets MS Dhoni birthday
author img

By

Published : Jul 7, 2022, 4:16 PM IST

ಹೈದರಾಬಾದ್​: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್​ ಧೋನಿ ಇಂದು 41ನೇ ವಸಂತಕ್ಕೆ ಕಾಲಿಟ್ಟಿದ್ದು, ಅನೇಕ ಕ್ರಿಕೆಟ್ ಪ್ಲೇಯರ್ಸ್​​, ಸಿನಿಮಾ ತಾರೆಯರು, ಅಭಿಮಾನಿಗಳು ಹುಟ್ಟುಹಬ್ಬಕ್ಕೆ ಶುಭ ಹಾರೈಕೆ ಮಾಡಿದ್ದಾರೆ. ಟೀಂ ಇಂಡಿಯಾ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ ಸಹ ಶುಭ ಕೋರಿ ಟ್ವೀಟ್ ಮಾಡಿದ್ದಾರೆ. ಎಲ್ಲರಿಗಿಂತಲೂ ವಿಭಿನ್ನವಾಗಿ ಶುಭ ಹಾರೈಕೆ ಮಾಡಿರುವ ಹಾರ್ದಿಕ್ ಪಾಂಡ್ಯಾ ಮೈ ಡಾರ್ಲಿಂಗ್​​.. ಹುಟ್ಟುಹಬ್ಬದ ಶುಭಾಶಯ ಮಹಿ ಭಾಯ್​(My darling ❤️ Wishing you the best birthday Mahi bhai) ಎಂದು ಬರೆದುಕೊಂಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ನಾಯಕನಾಗಿದ್ದಾಗ ಅಂದರೆ 2016ರಲ್ಲಿ ಹಾರ್ದಿಕ್ ಪಾಂಡ್ಯಾ ಭಾರತ ತಂಡಕ್ಕೆ ಡೆಬ್ಯು ಮಾಡಿದ್ದರು. ಇನ್ನೂ ಕಳೆದ ಕೆಲ ತಿಂಗಳ ಹಿಂದೆ ವೈಫಲ್ಯಕ್ಕೊಳಗಾಗಿ ತಂಡದಿಂದ ಹಾರ್ದಿಕ್​ ಕಡೆಗಣಿಸಲ್ಪಟ್ಟಾಗ ಧೋನಿ ಸಲಹೆ ನೀಡಿದ್ದರು. ಅದರ ಫಲವಾಗಿ ಇದೀಗ ಕಮ್​​ಬ್ಯಾಕ್ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಾಂಡ್ಯ ಖುದ್ದಾಗಿ ಹೇಳಿಕೊಂಡಿದ್ದರು.

ರಾಂಚಿ ಮೂಲದ ಮಹೇಂದ್ರ ಸಿಂಗ್​ ಧೋನಿ, ಟೀಂ ಇಂಡಿಯಾ ಕಂಡಿರುವ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. 2007ರ ಟಿ20 ವಿಶ್ವಕಪ್​​, 2011ರ ಏಕದಿನ ವಿಶ್ವಕಪ್​ ಹಾಗೂ 2013ರಲ್ಲಿ ನಡೆದ ಐಸಿಸಿ ಚಾಂಪಿಯನ್​ ಟ್ರೋಫಿ ಗೆದ್ದ ತಂಡದ ನಾಯಕನಾಗಿ ಕೆಲಸ ಮಾಡಿದ್ದಾರೆ.

  • To one of the all times great entertainer & finisher, an inspiration and role model, I wish you a happy birthday sir @msdhoni. And sir You are still young & fit enough to play cricket, so please keep entertaining us for atleast few more years❤️🎂. pic.twitter.com/z7ByQtCJwc

    — Shahnawaz Dahani (@ShahnawazDahani) July 7, 2022 " class="align-text-top noRightClick twitterSection" data=" ">

ಇದನ್ನೂ ಓದಿರಿ: ಮನೆ, ಮನದಲ್ಲೂ ಧೋನಿ.. ಬಿಹಾರ್​ ಬಿಟ್ಟು ರಾಂಚಿಯಲ್ಲಿನ ಮಹಿ ಮನೆ ಬಳಿಯೇ ನೆಲೆಸಿದ್ದಾರೆ ಈ ಡೈ ಹಾರ್ಡ್​ ಫ್ಯಾನ್!​

ಇನ್ನಷ್ಟು ಕಾಲ ಕ್ರಿಕೆಟ್ ಆಡಿ ಎಂದ ಪಾಕ್ ಪ್ಲೇಯರ್​ : ಪಾಕಿಸ್ತಾನದ ಕ್ರಿಕೆಟರ್​ ಶಹನವಾಜ್​ ದಹಾನಿ ಟ್ವೀಟ್​ ಮಾಡಿ ಮಹೇಂದ್ರ ಸಿಂಗ್ ಧೋನಿ ಹುಟ್ಟುಹಬ್ಬಕ್ಕೆ ಶುಭಾಯಶ ಕೋರಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆಟಗಾರ, ಗ್ರೇಟ್ ಫಿನಿಶರ್, ಸ್ಫೂರ್ತಿ ಮತ್ತು ಮಾದರಿ ಆಟಗಾರರಾದ ಧೋನಿ ಸರ್‌ಗೆ ಹುಟ್ಟುಹಬ್ಬದ ಶುಭಾಶಯ. ಸರ್, ನೀವು ಈಗಲೂ ಕ್ರಿಕೆಟ್ ಆಡಲು ಸಾಕಷ್ಟು ಫಿಟ್ ಆಗಿದ್ದೀರಿ, ಆದ್ದರಿಂದ ದಯವಿಟ್ಟು ಇನ್ನೂ ಕೆಲವು ವರ್ಷಗಳ ಕಾಲ ನಮ್ಮನ್ನು ಕ್ರಿಕೆಟ್ ಆಡುವ ಮೂಲಕ ರಂಜಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.