ಮುಂಬೈ(ಮಹಾರಾಷ್ಟ್ರ): ಇಂಡಿಯನ್ ಪ್ರೀಮಿಯರ್ ಲೀಗ್ನ 15ನೇ ಆವೃತ್ತಿ ಆರಂಭಗೊಳ್ಳಲು ದಿನಗಣನೆ ಆರಂಭಗೊಂಡಿದೆ. ಮಾರ್ಚ್ 26ರಂದು ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್-ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.
ಈ ಸಲದ ಟೂರ್ನಿಯಲ್ಲಿ 10 ತಂಡಗಳು ಇದ್ದು, ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವ ಜವಾಬ್ದಾರಿ ಹಾರ್ದಿಕ್ ಪಾಂಡ್ಯ ವಹಿಸಿಕೊಂಡಿದ್ದಾರೆ. ಕಳೆದ ಕೆಲ ತಿಂಗಳಿಂದ ಟೀಂ ಇಂಡಿಯಾದಿಂದ ದೂರು ಉಳಿದಿರುವ ಹಾರ್ದಿಕ್ ಪಾಂಡ್ಯಾ ಇದೀಗ ಗುಜರಾತ್ ಟೈಟಾನ್ಸ್ ಮುನ್ನಡೆಸಲು ಸಜ್ಜಾಗಿದ್ದು,ಮಾರ್ಚ್ 28ರಂದು ಮೊದಲ ಪಂದ್ಯವನ್ನ ಆರ್ಸಿಬಿ ವಿರುದ್ಧ ಆಡಲಿದೆ.
-
.@hardikpandya7 is excited ahead of his stint as captain of @gujarat_titans 😎 👏
— IndianPremierLeague (@IPL) March 18, 2022 " class="align-text-top noRightClick twitterSection" data="
Watch this space for more! 🎥 👌
Full interview coming soon on https://t.co/4n69KTTxCB ⌛️ pic.twitter.com/zLyOzYYhaN
">.@hardikpandya7 is excited ahead of his stint as captain of @gujarat_titans 😎 👏
— IndianPremierLeague (@IPL) March 18, 2022
Watch this space for more! 🎥 👌
Full interview coming soon on https://t.co/4n69KTTxCB ⌛️ pic.twitter.com/zLyOzYYhaN.@hardikpandya7 is excited ahead of his stint as captain of @gujarat_titans 😎 👏
— IndianPremierLeague (@IPL) March 18, 2022
Watch this space for more! 🎥 👌
Full interview coming soon on https://t.co/4n69KTTxCB ⌛️ pic.twitter.com/zLyOzYYhaN
ಈಗಾಗಲೇ ಅಭ್ಯಾಸದಲ್ಲಿ ಗುಜರಾತ್ ತಂಡ ಭಾಗಿಯಾಗಿದ್ದು, ಈ ವೇಳೆ ಕ್ಯಾಪ್ಟನ್ ಹಾರ್ದಿಕ್ ಮಾತನಾಡಿದ್ದಾರೆ. ತಂಡದೊಂದಿಗೆ ಸಾಕಷ್ಟು ಸಂತೋಷವಾಗಿದ್ದೇನೆ. ಇದು ಹೊಸ ತಂಡವಾಗಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಏನನ್ನೂ ಸಾಬೀತುಪಡಿಸಲು ಇಲ್ಲಿಲ್ಲ. ಉತ್ತಮ ಕ್ರಿಕೆಟ್ ಆಡಲು ಇಲ್ಲಿದ್ದೇವೆ ಎಂದಿದ್ದಾರೆ.
ಕುಟುಂಬದೊಂದಿಗೆ ಸಮಯ ಕಳೆದಿದ್ದು, ಕ್ರಿಕೆಟ್ಗೋಸ್ಕರ ಚೆನ್ನಾಗಿ ತಯಾರಿ ನಡೆಸಿದ್ದೇನೆ ಎಂದಿದ್ದಾರೆ. ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾ ಪರ 2021ರ ಟಿ20 ವಿಶ್ವಕಪ್ನಲ್ಲಿ ಕೊನೆಯ ಪಂದ್ಯವನ್ನಾಡಿದ್ದಾರೆ.
ಭಾರತ ಕ್ರಿಕೆಟ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಬೌಲಿಂಗ್ ಮಾಡುವುದರ ಜೊತೆಗೆ, ಯೋ ಯೋ ಟೆಸ್ಟ್ನಲ್ಲಿಯೂ ಉತ್ತೀರ್ಣರಾಗುವ ಮೂಲಕ ಫಿಟ್ನೆಸ್ ಸಾಬೀತುಪಡಿಸಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡ: ರಶೀದ್ ಖಾನ್, ಹಾರ್ದಿಕ್ ಪಾಂಡ್ಯ (ಕ್ಯಾಪ್ಟನ್), ಲಾಕಿ ಫರ್ಗುಸನ್, ರಾಹುಲ್ ತೆವಾಟಿಯಾ, ಶುಭಮನ್ ಗಿಲ್, ಮೊಹಮ್ಮದ್ ಶಮಿ, ಯಶ್ ದಯಾಳ್, ಡೇವಿಡ್ ಮಿಲ್ಲರ್, ಸಾಯಿ ಕಿಶೋರ್, ಅಭಿನವ್ ಸದಾರಂಗನಿ, ಮ್ಯಾಥ್ಯೂ ವೇಡ್, ಅಲ್ಜಾರಿ ಜೋಸೆಫ್, ರಹಮಾನುಲ್ಲಾ ಗುರ್ಬಾಜ್, ಜಯಂತ್ ಯಾದವ್, ವಿಜಯ್ ಶಂಕರ್, ಡೊಮಿನಿಕ್ ಡ್ರೇಕ್ಸ್, ವರುಣ್ ಆರೋನ್, ಗುರುಕೀರತ್ ಸಿಂಗ್, ನೂರ್ ಅಹ್ಮದ್, ದರ್ಶನ್ ನಲ್ಕಂಡೆ, ಪ್ರದೀಪ್ ಸಾಂಗ್ವಾನ್ ಹಾಗು ವೃದ್ಧಿಮಾನ್ ಸಾಹ