ETV Bharat / sports

ಐರ್ಲೆಂಡ್​ ವಿರುದ್ಧದ ಟಿ20 ಸರಣಿಗೆ ಹಾರ್ದಿಕ್ ಪಾಂಡ್ಯಾ​ ನಾಯಕ: ಬಿಸಿಸಿಐ

author img

By

Published : Jun 15, 2022, 9:38 PM IST

ಜೂನ್​ 26-28 ರಂದು ಐರ್ಲೆಂಡ್​ ವಿರುದ್ಧ ನಡೆಯುವ 2 ಪಂದ್ಯಗಳ ಟಿ-20 ಸರಣಿಗೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾಗೆ ಭಾರತದ ನಾಯಕತ್ವದ ಹೊಣೆಗಾರಿಕೆ ನೀಡಲಾಗಿದೆ.

ಐರ್ಲೆಂಡ್​ ವಿರುದ್ಧದ ಟಿ-20 ಸರಣಿಗೆ ಹಾರ್ದಿಕ್ ಪಾಂಡ್ಯಾ​ ನಾಯಕ

ಈ ತಿಂಗಳಾಂತ್ಯದಲ್ಲಿ ಐರ್ಲೆಂಡ್​ ವಿರುದ್ಧ ನಡೆಯುವ 2 ಪಂದ್ಯಗಳ ಟಿ20 ಸರಣಿಗೆ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಾಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಐಪಿಎಲ್​ನಲ್ಲಿ ಗುಜರಾತ್​ ತಂಡವನ್ನು ಮುನ್ನಡೆಸಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದ ಪಾಂಡ್ಯಾಗೆ ಭಾರತ ತಂಡವನ್ನು ಮುನ್ನಡೆಸುವ ಮಹತ್ತರ ಹೊಣೆಗಾರಿಕೆಯನ್ನು ಬಿಸಿಸಿಐ ನೀಡಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ಹಿರಿಯರಿಗೆ ವಿಶ್ರಾಂತಿ ನೀಡಿದ ಕಾರಣ ಸ್ಟಾರ್​ ಬ್ಯಾಟರ್​ ಕೆ.ಎಲ್​.ರಾಹುಲ್​ ನಾಯಕತ್ವದ ಹೊಣೆ ಹೊತ್ತಿದ್ದರು. ಆದರೆ, ದುರಾದೃಷ್ಟವಶಾತ್​ ಸರಣಿಗೆ ಆರಂಭಕ್ಕೂ ಮುಂಚೆ ಗಾಯಗೊಂಡು ಹೊರಬಿದ್ದಿದ್ದರು. ಈ ವೇಳೆ ವಿಕೆಟ್​ ಕೀಪರ್​ ರಿಷಬ್​ ಪಂತ್​ಗೆ ಕ್ಯಾಪ್ಟನ್​ ಜವಾಬ್ದಾರಿ ನೀಡಲಾಗಿದೆ. ಪಂತ್​ ನೇತೃತ್ವದ ಭಾರತದ ಪಡೆ 5 ಪಂದ್ಯಗಳ ಸರಣಿಯಲ್ಲಿ ಹರಿಣಗಳ ವಿರುದ್ಧ 2-1 ರಿಂದ ಹಿನ್ನಡೆಯಲ್ಲಿದೆ.

  • India Squad
    Hardik Pandya (C), Bhuvneshwar Kumar (vc), Ishan Kishan, Ruturaj Gaikwad, Sanju Samson, Suryakumar Yadav, Venkatesh Iyer, Deepak Hooda, Rahul Tripathi, Dinesh Karthik (wk), Yuzvendra Chahal, Axar Patel, R Bishnoi, Harshal Patel, Avesh Khan, Arshdeep Singh, Umran Malik

    — BCCI (@BCCI) June 15, 2022 " class="align-text-top noRightClick twitterSection" data=" ">

India Squad

— BCCI (@BCCI) June 15, 2022

ಈ ಸರಣಿಯ ಬಳಿಕ ರಿಷಬ್​ ಪಂತ್​ ಇಂಗ್ಲೆಂಡ್​ ವಿರುದ್ಧದ ಏಕೈಕ ಟೆಸ್ಟ್​ ಪಂದ್ಯವನ್ನಾಡಲು ಇಂಗ್ಲೆಂಡ್​ ಪ್ರವಾಸ ಮಾಡಲಿದ್ದಾರೆ. ಇದಕ್ಕೂ ಮೊದಲು ಐರ್ಲೆಂಡ್​ ವಿರುದ್ಧ ಜೂನ್​ 26, 28 ರಂದು 2 ಪಂದ್ಯಗಳ ಟಿ-20 ಸರಣಿ ನಡೆಯಲಿದೆ. ಟೆಸ್ಟ್​ ಸರಣಿಗೆ ಸಜ್ಜಾಗಲು ಎಲ್ಲ ಹಿರಿಯ ಆಟಗಾರರಿಗೆ ಅವಕಾಶ ನೀಡಲಾಗಿದ್ದು, ಹಾರ್ದಿಕ್​ ಪಾಂಡ್ಯಾಗೆ ತಂಡದ ನೇತೃತ್ವ ವಹಿಸಲಾಗಿದೆ. ಇದೇ ವೇಳೆ ತಂಡವನ್ನು ಪ್ರಕಟಿಸಲಾಗಿದೆ.

ವಿವಿಎಸ್​ ಲಕ್ಷ್ಮಣ್​ ಕೋಚ್​?: ಇದಲ್ಲದೇ, ಐರ್ಲೆಂಡ್​ ವಿರುದ್ಧದ ಸರಣಿಗೆ ವಿವಿಎಸ್​ ಲಕ್ಷ್ಮಣ್​ ಅವರನ್ನು ಕೋಚ್​ ಆಗಿ ಕೆಲಸ ಮಾಡಲು ಬಿಸಿಸಿಐ ಕೋರಿದೆ. ಇದಕ್ಕೆ ವಿವಿಎಸ್ ಲಕ್ಷ್ಮಣ್​ ಅವರು ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ತಂಡ ಇಂತಿದೆ: ಹಾರ್ದಿಕ್​ ಪಾಂಡ್ಯಾ(ನಾಯಕ), ಭುವನೇಶ್ವರ್​ ಕುಮಾರ್​(ಉಪ ನಾಯಕ), ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್ ) ಯಜುವೇಂದ್ರ ಚಹಲ್, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್​ ಸಿಂಗ್, ಉಮ್ರಾನ್ ಮಲಿಕ್.

ಇದನ್ನೂ ಓದಿ: ಐರ್ಲೆಂಡ್​ ವಿರುದ್ಧದ ಟಿ-20 ಸರಣಿಗೆ ದ್ರಾವಿಡ್​ ಬದಲಾಗಿ ವಿವಿಎಸ್​ ಲಕ್ಷ್ಮಣ್​ ಕೋಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.