ETV Bharat / sports

ರೋಹಿತ್​, ಹಾರ್ದಿಕ್ ಚೆನ್ನೈ ವಿರುದ್ಧ ಆಡದಿರುವುದಕ್ಕೆ ಕಾರಣ ತಿಳಿಸಿದ ಕೋಚ್ ಜಯವರ್ದನೆ - ಕ್ರಿಕೆಟ್​ ನ್ಯೂಸ್

ಹಾರ್ದಿಕ್​ ಅವರಿಗೆ ತರಬೇತಿಯ ವೇಳೆ ಸಣ್ಣ ಗಾಯ ಕಾಣಿಸಿಕೊಂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಚೇತರಿಸಿಕೊಳ್ಳಲು ವಿಶ್ರಾಂತಿ ನೀಡಿದ್ದೇವೆ. ಆದರೆ ಅದು ಗಂಭೀರ ಸಮಸ್ಯೆಯಲ್ಲ ಎಂದು ಶ್ರೀಲಂಕಾದ ಮಾಜಿ ನಾಯಕ ಹಾಗು ತಂಡ ಕೋಚ್‌ ಮಹೇಲಾ ಜಯವರ್ದನೆ ಸ್ಪಷ್ಟಪಡಿಸಿದ್ದಾರೆ.

Mahela  Jayawardene
ಮಹೇಲಾ ಜಯವರ್ದನೆ
author img

By

Published : Sep 20, 2021, 6:31 PM IST

ದುಬೈ: ಮುಂಬೈ ಇಂಡಿಯನ್ಸ್​ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯಗೆ ಸಣ್ಣ ಗಾಯ ಕಾಣಿಸಿಕೊಂಡಿದ್ದರಿಂದ ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ ಸಿಎಸ್​ಕೆ ವಿರುದ್ಧ ಪಂದ್ಯದಲ್ಲಿ ವಿಶ್ರಾಂತಿ ನೀಡಲಾಗಿತ್ತು ಎಂದು ಮುಖ್ಯ ಕೋಚ್​ ಮಹೇಲಾ ಜಯವರ್ದನೆ ತಿಳಿಸಿದರು.

ಭಾನುವಾರ ಐಪಿಎಲ್​ 14ನೇ ಆವೃತ್ತಿಯ 2ನೇ ಭಾಗ ಯುಎಇನಲ್ಲಿ ಆರಂಭವಾಗಿದೆ. ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಸಿಎಸ್‌ಕೆ ನೀಡಿದ 157 ರನ್ ಗುರಿ ತಲುಪಲಾಗದೆ 20 ರನ್​ಗಳ ಸೋಲು ಅನುಭವಿಸಿತು. ಆದರೆ ಈ ಪಂದ್ಯದಲ್ಲಿ ಹಾರ್ದಿಕ್ ಮತ್ತು ರೋಹಿತ್​ ಶರ್ಮಾ ತಂಡದಿಂದ ಹೊರಗುಳಿದಿರುವುದು ಅಭಿಮಾನಿಗಳಿಗೆ ಅಚ್ಚರಿ ಉಂಟು ಮಾಡಿತ್ತು. ಈ ಕುರಿತು ಪಂದ್ಯದ ನಂತರ ಮಾತನಾಡಿದ ಜಯವರ್ದನೆ ಕಾರಣ ತಿಳಿಸಿದರು.

ಮುಂಬೈ ಇಂಡಿಯನ್ಸ್‌ ತಂಡದ ಕೋಚ್‌ ಮಹೇಲಾ ಜಯವರ್ದನೆ

ಹಾರ್ದಿಕ್‌ಗೆ ತರಬೇತಿಯ ವೇಳೆ ಸಣ್ಣ ಗಾಯ ಕಾಣಿಸಿಕೊಂಡಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಚೇತರಿಸಿಕೊಳ್ಳಲು ವಿಶ್ರಾಂತಿ ನೀಡಿದ್ದೇವೆ. ಅದು ಗಂಭೀರ ಸಮಸ್ಯೆಯಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಇನ್ನು, ನಾಯಕ ರೋಹಿತ್ ಶರ್ಮಾ ಅಲಭ್ಯರಾಗಿದ್ದ ಕುರಿತು ಮಾತನಾಡುತ್ತಾ, ಅವರಿಗೆ ವಿಶ್ರಾಂತಿ ನೀಡಲಾಗಿತ್ತು, ಮುಂದಿನ ಪಂದ್ಯಗಳಲ್ಲಿ ಆಡಲಿದ್ದಾರೆ ಎಂದು ತಿಳಿಸಿದರು.

ರೋಹಿತ್ ಶರ್ಮಾ ಬ್ಯಾಟಿಂಗ್ ಮತ್ತು ರನ್ನಿಂಗ್​ ಉತ್ತಮವಾಗಿದೆ. ಆದರೆ ಅವರು ಇಂಗ್ಲೆಂಡ್​​ನಿಂದ ಬಂದಿರುವ ಕಾರಣ ಹೆಚ್ಚುವರಿ ದಿನಗಳ ಅಗತ್ಯತೆ ಮನಗಂಡು ವಿಶ್ರಾಂತಿ ನೀಡಿದೆವು, ಮುಂದಿನ ಪಂದ್ಯವನ್ನಾಡಲಿದ್ದಾರೆ ಎಂದರು.

ಇದನ್ನೂ ಓದಿ:IPLಗೆ ಗ್ಲ್ಯಾಮರ್​ ಸ್ಪರ್ಶ: ಬುಮ್ರಾ ಪತ್ನಿ ಸೇರಿ ಇವರೆಲ್ಲಾ ಹೊಡಿಬಡಿ ಆಟದ ಸ್ಟಾರ್‌ ಆ್ಯಂಕರ್ಸ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.