ಚೆನ್ನೈ : ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಭುಜದ ಗಾಯಕ್ಕೆ ತುತ್ತಾಗಿದ್ದರು. ನೋವು ಕಾಣಿಸಿಕೊಳ್ಳುವುದರಿಂದ ಕಳೆದ ಮೂರು ಐಪಿಎಲ್ ಪಂದ್ಯಗಳಲ್ಲಿ ಅವರು ಬೌಲಿಂಗ್ ಮಾಡಲಿಲ್ಲ ಎಂದು ಮುಖ್ಯ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
"ಈ ಆವೃತ್ತಿಯಲ್ಲಿ ಅವರು (ಹಾರ್ದಿಕ್) ಬೌಲಿಂಗ್ ಮಾಡುವುದನ್ನು ನೋಡಲು ನಾವು ಎದುರು ನೋಡುತ್ತಿದ್ದೇವೆ. ಅವರು ಈಗಾಗಲೇ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಬಂದಿದ್ದಾರೆ. ಆದರೆ, ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದ ವೇಳೆ ಅವರು ಗಾಯ ಮಾಡಿಕೊಂಡಿದ್ದಾರೆ. ಹಾಗಾಗಿ, ನಾವು ಅವರನ್ನು ಈ ಸಮಯದಲ್ಲಿ ಶುಶ್ರೂಷೆ ಮಾಡುತ್ತಿದ್ದೇವೆ" ಎಂದು ಜಯವರ್ಧನೆ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಶ್ರೀಲಂಕಾದ ಮಾಜಿ ಬ್ಯಾಟ್ಸ್ಮನ್, ಮುಂದಿನ ಒಂದೆರಡು ವಾರಗಳಲ್ಲಿ ಹಾರ್ದಿಕ್ ಬೌಲಿಂಗ್ಗೆ ಮರಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ನಾವು ಅವರನ್ನು ಅಪಾಯಕ್ಕೆ ದೂಡಲು ಬಯಸುವುದಿಲ್ಲ.
ಯಾಕೆಂದರೆ, ಅವರು ಆರಾಮವಾಗಿ ಬಂದು ಬೌಲಿಂಗ್ ಮಾಡುವ ಸ್ಥಿತಿಯಲ್ಲಿರುವರೇ ಎಂದು ಮೊದಲು ನಾವು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಆದ್ದರಿಂದ ಮುಂದಿನ ಕೆಲವು ವಾರಗಳಲ್ಲಿ ಸ್ವಲ್ಪ ಕೆಲಸ ಮಾಡಿಕೊಳ್ಳುವುದು ಅಗತ್ಯ ಹಾಗೂ ನಂತರ ಆಶಾದಾಯಕವಾಗಿ ಅವರು ಬೌಲಿಂಗ್ ಮಾಡುವುದನ್ನು ನೋಡಬಹುದು" ಎಂದು ತಿಳಿಸಿದ್ದಾರೆ. 27 ವರ್ಷದ ಬರೋಡಾ ಕ್ರಿಕೆಟಿಗ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 2 ರನ್ಔಟ್ ಮಾಡಿ 13 ರನ್ಗಳಿಂದ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಪಾಂಡ್ಯಗೆ ಭುಜದ ನೋವಿರುವುದರಿಂದ ಅವರು ಅತ್ಯುತ್ತಮ ಬೌಂಡರಿ ಲೈನ್ ಫೀಲ್ಡರ್ ಆಗಿದ್ದರೂ ಚೆಂಡನ್ನು ದೂರದಿಂದ ಎಸೆಯುವುದಕ್ಕೆ ಕಷ್ಟವಾಗಿರಬಾರದು ಎಂಬ ಕಾರಣಕ್ಕೆ 30 ಅಡಿಗಳಲ್ಲಿ ಫೀಲ್ಡಿಂಗ್ ನಿಲ್ಲಿಸಲಾಗಿತ್ತು. ಇದನ್ನು ಸದುಪಯೋಗ ಪಡಿಸಿಕೊಂಡ ಅವರು, ವಾರ್ನರ್ ಮತ್ತು ಅಬ್ದುಲ್ ಸಮದ್ರನ್ನು ರನ್ಔಟ್ ಮಾಡುವ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇದನ್ನು ಓದಿ:ನಿವೃತ್ತಿ ಯಾವಾಗ, ಇನ್ನು ಎಷ್ಟು ವರ್ಷ ಐಪಿಎಲ್ನಲ್ಲಿ ಆಡುತ್ತೇನೆ ಎಂಬುದನ್ನ ಖಚಿತಪಡಿಸಿದ ಯುನಿವರ್ಸಲ್ ಬಾಸ್