ETV Bharat / sports

'ಒಪ್ಪಿಕೊಳ್ಳುವುದು ಕಷ್ಟ': ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ರಾಹುಲ್​​ ಬೇಸರ

author img

By

Published : Jun 9, 2022, 12:33 PM IST

ನೆಟ್ಸ್​​ನಲ್ಲಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ರಾಹುಲ್​ ಗಾಯಗೊಂಡು ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಬೇಸರ ಹೊರಹಾಕಿದ್ದಾರೆ.

KL Rahul
KL Rahul

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿ ಆರಂಭಗೊಳ್ಳಲು ಒಂದು ದಿನ ಬಾಕಿ ಇರುವಾಗ ಟೀಂ ಇಂಡಿಯಾ ನಿಯೋಜಿತ ಕ್ಯಾಪ್ಟನ್ ರಾಹುಲ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ, ನಾಯಕತ್ವದ ಜವಾಬ್ದಾರಿ ಇದೀಗ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್​ ಹೆಗಲ ಮೇಲೆ ಬಿದ್ದಿದೆ. ತಾವು ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿರುವುದಕ್ಕೆ ಸಂಬಂಧಿಸಿದಂತೆ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನ ಒಪ್ಪಿಕೊಳ್ಳುವುದು ಕಷ್ಟ. ತವರಿನಲ್ಲಿ ಮೊದಲ ಸಲ ಭಾರತ ತಂಡದ ನಾಯಕತ್ವ ಜವಾಬ್ದಾರಿ ವಹಿಸಿಕೊಳ್ಳಲು ಎದುರು ನೋಡುತ್ತಿದ್ದೆ. ಆದರೆ, ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಟ್ವಿಟ್ಟರ್​​ನಲ್ಲಿ ತಂಡಕ್ಕೆ ಶುಭ ಹಾರೈಸಿರುವ ರಾಹುಲ್​, "ಒಪ್ಪಿಕೊಳ್ಳುವುದು ಕಷ್ಟ. ಆದರೆ, ಇಂದಿನಿಂದ ಮತ್ತೊಂದು ಸವಾಲು ಆರಂಭಿಸಲಿದ್ದೇನೆ. ತವರು ನೆಲದಲ್ಲಿ ಮೊದಲ ಸಲ ತಂಡ ಮುನ್ನಡೆಸಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಆದರೆ, ಎಲ್ಲ ಪ್ಲೇಯರ್ಸ್​​ಗೆ ನನ್ನ ಬೆಂಬಲವಿದೆ. ರಿಷಭ್​ ಪಂತ್​ಗೆ ಶುಭ ಹಾರೈಸುತ್ತೇನೆ. ಆದಷ್ಟು ಬೇಗ ನಿಮ್ಮನ್ನು ಭೇಟಿ ಮಾಡಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

  • Hard to accept but I begin another challenge today. Gutted not to be leading the side for the first time at home, but the boys have all my support from the sidelines.Heartfelt thanks to all for your support.Wishing Rishabh and the boys all the luck for the series.See you soon🏏💙

    — K L Rahul (@klrahul) June 8, 2022 " class="align-text-top noRightClick twitterSection" data=" ">

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೋಸ್ಕರ ನೆಟ್ಸ್​ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ರಾಹುಲ್​, ತೊಡೆಸಂದುವಿನಲ್ಲಿ ಗಾಯವಾಗಿದೆ. ಇದರ ಜೊತೆಗೆ ಸ್ಪಿನ್ನರ್​​ ಕುಲ್ದೀಪ್ ಯಾದವ್​​ ಕೂಡ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಇವರ ಅನುಪಸ್ಥಿತಿಯಲ್ಲಿ ತಂಡದ ನಾಯಕನಾಗಿ ವಿಕೆಟ್ ಕೀಪರ್ ಬ್ಯಾಟರ್​ ರಿಷಭ್ ಪಂತ್ ಹಾಗೂ ಉಪನಾಯಕನಾಗಿ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್‌ ಸರಣಿಯಿಂದ ರಾಹುಲ್, ಕುಲದೀಪ್ ಔಟ್; ಪಂತ್​ಗೆ ನಾಯಕತ್ವ

ಇಂದು ಸಂಜೆ 7 ಗಂಟೆಗೆ ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ದಕ್ಷಿಣ ಆಫ್ರಿಕಾ- ಭಾರತ ತಂಡ ಮೊದಲ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಪಂದ್ಯದಲ್ಲಿ ಭಾರತ ಗೆಲುವು ದಾಖಲು ಮಾಡಿದರೆ, ಸತತವಾಗಿ 13ನೇ ಪಂದ್ಯ ಗೆದ್ದು, ಹೊಸ ದಾಖಲೆ ನಿರ್ಮಿಸಲಿದೆ. ಕೆಲ ತಿಂಗಳಿಂದ ಸತತವಾಗಿ ಕ್ರಿಕೆಟ್ ಆಡಿರುವ ಕಾರಣ ತಂಡದ ಖಾಯಂ ಕ್ಯಾಪ್ಟನ್ ರೋಹಿತ್ ಶರ್ಮಾ, ಹಿರಿಯ ಆಟಗಾರ ವಿರಾಟ್​ ಕೊಹ್ಲಿ ಹಾಗೂ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.