ETV Bharat / sports

ರವೀಂದ್ರ ಜಡೇಜಾ ತಮ್ಮ ನಾಯಕತ್ವದ ಹೊರೆಯನ್ನು ಧೋನಿ ಹೆಗಲ ಮೇಲೆ ಹೊರಿಸುತ್ತಿದ್ದಾರೆ: ಹರ್ಭಜನ್ ಸಿಂಗ್ - ಸಿಎಸ್​ಕೆ ನಾಯಕತ್ವ

ಹಾಲಿ ಚಾಂಪಿಯನ್ 2022ರ ಆವೃತ್ತಿ ಮೂರು ಸೋಲುಗಳೊಂದಿಗೆ ಆರಂಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 6 ವಿಕೆಟ್​ಗಳಿಂದ, ನಂತರ ಲಖನೌ ಸೂಪರ್ ಜೈಂಟ್ಸ್​ ವಿರುದ್ಧ 6 ವಿಕೆಟ್​ ಹಾಗೂ ಕೊನೆಯ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್​ಗಳ ಅಂತರದಿಂದ ಸೋಲು ಕಂಡಿದೆ. ಹಾಗಾಗಿ ರವೀಂದ್ರ ಜಡೇಜಾ ನಾಯಕನಾಗಿ ಗುರುತಿಸಿಕೊಳ್ಳುವ ಮುನ್ನಡೆ ಟೀಕಕಾರರಿಗೆ ಆಹಾರವಾಗಿದ್ದಾರೆ.

Harbhajan Singh says he feels still MS Dhoni is CSK captain
ಜಡೇಜಾ ನಾಯಕತ್ವ
author img

By

Published : Apr 5, 2022, 11:01 PM IST

ಮುಂಬೈ: ಧೋನಿ ಪಾಲಿಗೆ 15ನೇ ಆವೃತ್ತಿಯ ಐಪಿಎಲ್ ಬಹುತೇಕ ಕೊನೆಯ ಆವೃತ್ತಿ ಆಗಿದೆ. ಹಾಗಾಗಿ ಈಗಾಾಗಲೇ ತಮ್ಮ ಉತ್ತರಾಧಿಕಾರಿಯಾಗಿ ಆಲ್​ರೌಂಡರ್​ ರವೀಂದ್ರ ಜಡೇಜಾರನ್ನು ನೇಮಕ ಮಾಡಿ ತಾವೂ ವಿಕೆಟ್​ ಕೀಪರ್ ಆಗಿ ತಂಡದಲ್ಲಿದ್ದಾರೆ. ಆದರೆ ಧೋನಿ ಜಾಗಕ್ಕೆ ಆಗಮಿಸಿರುವ ಜಡ್ಡು ತಮ್ಮ ಮೇಲಿನ ನಿರೀಕ್ಷೆಗೆ ತಕ್ಕಂತೆ ತಂಡವನ್ನು ಮುನ್ನಡೆಸುತ್ತಿಲ್ಲ ಎಂದು ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಅಸಮಾಧಾನ ಹೊರಹಾಕಿದ್ದಾರೆ.

ಹಾಲಿ ಚಾಂಪಿಯನ್ 2022ರ ಆವೃತ್ತಿ ಮೂರು ಸೋಲುಗಳೊಂದಿಗೆ ಆರಂಭಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಕೆಕೆಆರ್​ ವಿರುದ್ಧ 6 ವಿಕೆಟ್​ಗಳಿಂದ, ನಂತರ ಲಖನೌ ಸೂಪರ್ ಜೈಂಟ್ಸ್​ ವಿರುದ್ಧ 6 ವಿಕೆಟ್​ ಹಾಗೂ ಕೊನೆಯ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ಧ 54 ರನ್​ಗಳ ಅಂತರದಿಂದ ಸೋಲು ಕಂಡಿದೆ. ಹಾಗಾಗಿ ರವೀಂದ್ರ ಜಡೇಜಾ ನಾಯಕನಾಗಿ ಗುರುತಿಸಿಕೊಳ್ಳುವ ಮುನ್ನವೇ ಟೀಕಕಾರರಿಗೆ ಆಹಾರವಾಗಿದ್ದಾರೆ.

''ನನಗೆ ಈಗಲೂ ಎಂಎಸ್ ಧೋನಿಯೇ ನಾಯಕ ಎಂಬ ಭಾವನೆ ಉಂಟಾಗುತ್ತಿದೆ. ನಾನು ರವೀಂದ್ರ ಜಡೇಜಾ ಕಡೆ ನೋಡಿದಾಗಲೆಲ್ಲಾ ಅವರು 30 ಯಾರ್ಡ್ ವೃತ್ತದಿಂದ ಹೊರಗೆ ಇರುತ್ತಾರೆ. ಹಾಗೆ ಮಾಡುವುದರಿಂದ ನೀವು ಹೆಚ್ಚು ವಿಷಯಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದರ ಜೊತೆಗೆ ಫೀಲ್ಡ್​ ಸೆಟ್ಟಿಂಗ್ ಮತ್ತು ಪ್ರತಿಯೊಂದನ್ನು ನೋಡಿಕೊಳ್ಳಲು ಅವರು ಎಂಎಸ್ ಧೋನಿಗೆ ತಲೆನೋವು ತಂದಿದ್ದಾರೆ. ಇದು ಮೇಲು ನೋಟಕ್ಕೆ ಜಡೇಜಾ, ಎಂಎಸ್ ಧೋನಿ ಮೇಲೆ ತಾವೂ ಹೊರಬೇಕಾದ ಹೆಚ್ಚಿನ ತೂಕ ಹಾಕುತ್ತಿದ್ದಾರೆ ಎನಿಸುತ್ತದೆ ಎಂದಿದ್ದಾರೆ ಹರ್ಭಜನ್ ಸಿಂಗ್ ಸ್ಟಾರ್ ಸ್ಪೋರ್ಟ್ಸ್​ನ ಬೈಜೂಸ್​ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಆದರೆ ಸಿಎಸ್‌ಕೆ ನಾಯಕತ್ವ ವಹಿಸಿಕೊಳ್ಳಲು ಜಡೇಜಾ ಸೂಕ್ತ ವ್ಯಕ್ತಿ ಮತ್ತು ದ್ಭುತವಾದ ಆತ್ಮವಿಶ್ವಾಸವುಳ್ಳ ವ್ಯಕ್ತಿ. ಸಿಎಸ್‌ಕೆ ಜಡೇಜಾ ಮೇಲೆ ನಂಬಿಕೆ ಇಡಬಹುದು. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಆಗಲಿ ಮೂರೂ ವಿಭಾಗದ ಮೇಲೆ ಅವರಿಗೆ ಹಿಡಿತ ಇದೆ. ಆದರೆ ಈಗ ಸಿಎಸ್‌ಕೆ ಈ ಮೂರು ವಿಭಾಗದಲ್ಲಿ ಸೂಕ್ತ ಪ್ರದರ್ಶನ ತೋರುತ್ತಿಲ್ಲ. ಈ ಸಮಯದಲ್ಲಿ ಅವರು ಮುಂದೆ ನಿಂತು ತಂಡದ ಜವಾಬ್ದಾರಿಯನ್ನು ನಿರ್ವಹಿಸಿಬೇಕು. ತಂಡದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಮಾಜಿ ಸ್ಪಿನ್ನರ್​ ತಿಳಿಸಿದ್ದಾರೆ.

ಇದನ್ನು ಓದಿ:ನಟರಾಜನ್​ ಡೆತ್ ಓವರ್​ ಸ್ಪೆಷಲಿಸ್ಟ್... ವಿಶ್ವಕಪ್ ವೇಳೆ ಮಿಸ್​ ಮಾಡಿಕೊಂಡೆವು: ರವಿ ಶಾಸ್ತ್ರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.