ETV Bharat / sports

ಧೋನಿಗೆ ಪಾಂಡ್ಯ ಹೋಲಿಕೆ: ಟೀಂ ಇಂಡಿಯಾ ಮುನ್ನಡೆಸುವ ಸಾಮರ್ಥ್ಯವಿದೆ ಎಂದ ಭಜ್ಜಿ

ಏಷ್ಯಾ ಕಪ್​​ನಲ್ಲಿ ಪಾಕ್​​ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿರುವ ಹಾರ್ದಿಕ್​ ಪಾಂಡ್ಯ ಬಗ್ಗೆ ಹರ್ಭಜನ್ ಸಿಂಗ್​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

author img

By

Published : Aug 30, 2022, 9:38 PM IST

Harbhajan Singh on Hardik Pandya
Harbhajan Singh on Hardik Pandya

ನವದೆಹಲಿ: ಏಷ್ಯಾ ಕಪ್​ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಲ್​ರೌಂಡ್​ ಆಟದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಹಾರ್ದಿಕ್ ಪಾಂಡ್ಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಅವರ ಗುಣಗಾನ ಮಾಡಿರುವ ಮಾಜಿ ಆಟಗಾರ ಹರ್ಭಜನ್ ಸಿಂಗ್​, ಮಹೇಂದ್ರ ಸಿಂಗ್ ಧೋನಿಗೆ ಹೋಲಿಕೆ ಮಾಡಿದ್ದಾರೆ.

ಬರೋಡಾ ಆಲ್​​ರೌಂಡರ್ ಹಾರ್ದಿಕ್ ಪಾಂಡ್ಯ ಭವಿಷ್ಯದಲ್ಲಿ ಭಾರತದ ನಾಯಕನಾಗುವ ಎಲ್ಲ ಅರ್ಹತೆ ಇದೆ ಎಂದಿರುವ ಭಜ್ಜಿ, ಅವರ ಬ್ಯಾಟಿಂಗ್​​ನಲ್ಲಿ ವಿಭಿನ್ನ ಮಟ್ಟದ ಸಾಮರ್ಥ್ಯವಿದೆ. ಮೈದಾನದಲ್ಲಿ ಶಾಂತ ಸ್ವಭಾವದಿಂದ ಇರುವ ಹಾರ್ದಿಕ್​, ಇತ್ತೀಚಿನ ದಿನಗಳಲ್ಲಿ ತಮ್ಮ ಪ್ರತಿಭೆ ಸಾಬೀತುಪಡಿಸಿದ್ದಾರೆ ಎಂದರು.

ಪಾಂಡ್ಯ ತಂಡದ ನಾಯಕನಾಗಬೇಕು. ನಾಯಕನಾಗುತ್ತಾರೆ ಎಂದು ನಾನು ಭಾವಿಸುತ್ತೇನೆ. ಇತ್ತೀಚಿನ ದಿನಗಳಲ್ಲಿ ವಿಭಿನ್ನ ಅವತಾರಗಳಲ್ಲಿ ಕಾಣುತ್ತಿರುವ ಹಾರ್ದಿಕ್​ ಅವರಲ್ಲಿ ಎಂ ಎಸ್ ಧೋನಿ ಗುಣಲಕ್ಷಣ ಕಾಣಿಸುತ್ತಿವೆ. ಅವರ ಸಾಮರ್ಥ್ಯದ ಮೇಲೆ ಹಾರ್ದಿಕ್​​​ಗೆ ನಂಬಿಕೆ ಇದೆ.

ಕಳೆದ ವರ್ಷ ಟಿ20 ವಿಶ್ವಕಪ್​​ ಬಳಿಕ ದೀರ್ಘ ವಿಶ್ರಾಂತಿ ತೆಗೆದುಕೊಂಡಿದ್ದ ಹಾರ್ದಿಕ್​, ಟೀಂ ಇಂಡಿಯಾಗೆ ಕಮ್​​​ಬ್ಯಾಕ್​ ಮಾಡ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಹೀಗಾಗಿ, 5 ತಿಂಗಳ ಕಾಲ ಸೈಡ್​ಲೈನ್​ ಆಗಿದ್ದರು. ಇದಾದ ಬಳಿಕ 2022ರ ಐಪಿಎಲ್​ ಬಳಿಕ ಕಮ್​​​ಬ್ಯಾಕ್​ ಮಾಡಿ, ಐರ್ಲೆಂಡ್​ ವಿರುದ್ಧ ತಂಡದ ನಾಯಕತ್ವ ಜವಾಬ್ದಾರಿ ಸಹ ವಹಿಸಿಕೊಂಡಿದ್ದರು. ಹಾರ್ದಿಕ್​ ಕಠಿಣ ಪರಿಶ್ರಮ, ಬದ್ಧತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹರ್ಭಜನ್​ ಸಿಂಗ್​, ಅವರು ಟೀಂ ಇಂಡಿಯಾ ನಾಯಕನಾಗುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: ಟೀಂ ಇಂಡಿಯಾ ನಾಯಕತ್ವಕ್ಕೆ ಹಾರ್ದಿಕ್ ಪಾಂಡ್ಯ ಪ್ರಬಲ ಸ್ಪರ್ಧಿ: ಹರ್ಭಜನ್ ಸಿಂಗ್​

ಪಾಕ್​ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್​​ಗಳ ಗೆಲುವು ದಾಖಲು ಮಾಡಿದ್ದು, ಈ ಪಂದ್ಯದಲ್ಲಿ ಪಾಂಡ್ಯ 3 ವಿಕೆಟ್ ಪಡೆದುಕೊಂಡಿದ್ದು, ಅಜೇಯ 33 ರನ್​​​ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಏಷ್ಯಾ ಕಪ್​​ನಲ್ಲಿ ಟೀಂ ಇಂಡಿಯಾ ನಾಳೆ ಹಾಂಗ್​ಕಾಂಗ್​ ವಿರುದ್ಧ ಕಣಕ್ಕಿಳಿಯಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಗುಜರಾತ್ ಟೈಟನ್ಸ್ ಮುನ್ನಡೆಸಿ ಯಶಸ್ವಿಯಾಗಿರುವ ಹಾರ್ದಿಕ್ ಪಾಂಡ್ಯ, ಅನೇಕ ಏಳು-ಬೀಳಿನ ಬಳಿಕ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 2021ರ ಐಸಿಸಿ ಟಿ-20 ವಿಶ್ವಕಪ್​​ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಾಂಡ್ಯ, ಐಪಿಎಲ್​​ನಲ್ಲಿ 15 ಪಂದ್ಯಗಳಿಂದ 487 ರನ್​​ಗಳಿಸಿದ್ದು, 8 ವಿಕೆಟ್ ಸಹ ಪಡೆದುಕೊಂಡಿದ್ದಾರೆ. ಈ ವೇಳೆ ಕೂಡ ಹಾರ್ದಿಕ್ ಗುಣಗಾನ ಮಾಡಿದ್ದ ಭಜ್ಜಿ, ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ ಅವರು ಪ್ರಬಲ ಸ್ಪರ್ಧಿ ಎಂದು ಹೇಳಿದ್ದರು.

ಹಾಂಗ್​ಕಾಂಗ್​ ಲಘುವಾಗಿ ಪರಿಗಣಿಸಲ್ಲ: ಏಷ್ಯಾ ಕಪ್​​ನಲ್ಲಿ ಟೀಂ ಇಂಡಿಯಾ ನಾಳೆ ಹಾಂಗ್​​ಕಾಂಗ್​ ಎದುರು ಕಣಕ್ಕಿಳಿಯಲಿದೆ. ಈ ಪಂದ್ಯಕ್ಕೂ ಮುಂಚಿತವಾಗಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ರವೀಂದ್ರ ಜಡೇಜಾ, ಎದುರಾಳಿ ತಂಡವನ್ನು ಸುಲಭವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.