ETV Bharat / sports

ಪೇಸ್ ಬೌಲಿಂಗ್ ಬ್ಯಾಂಕ್: ಹರ್ಭಜನ್​ ಸಿಂಗ್​ ಸಲಹೆಯಂತೆ ಹಳ್ಳಿ ಪ್ರತಿಭೆಗಳಿಗೆ 'ಓಪನ್ ​ಟ್ರಯಲ್ಸ್‌'

140 ಪ್ಲಸ್ ವೇಗದಲ್ಲಿ ಬೌಲಿಂಗ್​ ಮಾಡುವ ಬೌಲರ್​ಗಳಿಗಾಗಿ ಹಳ್ಳಿಗಾಡಿನಲ್ಲಿ ಹುಡುಕಾಟ ನಡೆಸಲು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್, ಹರ್ಭಜನ್​​ ಸಿಂಗ್​ ಸಲಹೆಯಂತೆ ಹೊಸ ಪೇಸ್ ಬೌಲಿಂಗ್ ಬ್ಯಾಂಕ್ ಎಂಬ ಹೊಸ ಪ್ರಯೋಗ ಮಾಡಿದೆ.

Harbhajan advice PCA conducts open trials to tap village talent
ಪೇಸ್ ಬೌಲಿಂಗ್ ಬ್ಯಾಂಕ್
author img

By

Published : Jun 23, 2023, 6:40 PM IST

ಪಂಜಾಬ್​: ಭಾರತದಲ್ಲಿ ಕ್ರಿಕೆಟ್​ಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಅಭಿಮಾನಿಗಳೂ ಸಂಖ್ಯೆಯೂ ದೊಡ್ಡದಿದೆ. ಕ್ರಿಕೆಟ್ ಅ​ನ್ನು ಬರೀ ಕ್ರೀಡೆಯಾಗಿ ಅಲ್ಲದೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬಹುದಾದಷ್ಟು ಮತ್ತು ಉತ್ತಮ ಸಂಪಾದನೆ ಮಾಡುವಷ್ಟು ಭಾರತದ ಕ್ರಿಕೆಟ್ ಸಂಸ್ಥೆ ಬೆಳೆದಿದೆ. ಹೀಗಿರುವಾಗ ಭಾರತದ ಗ್ರಾಮೀಣ ಪ್ರದೇಶದಲ್ಲಿರುವ ಯುವ ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ (PCA)ಗೆ 'ಪೇಸ್ ಬೌಲಿಂಗ್ ಬ್ಯಾಂಕ್' ಮಾಡುವ ಸಲಹೆ ನೀಡಿದ್ದರು. ಇದನ್ನು ಪಿಸಿಎ ಕಾರ್ಯರೂಪಕ್ಕೆ ತಂದಿದೆ.

"ಹಲವು ರಾಜ್ಯಗಳು ಇದನ್ನು ಮೊದಲು ಮಾಡಿವೆಯೇ ಎಂದು ನನಗೆ ತಿಳಿದಿಲ್ಲ. ವಯಸ್ಸಿನ ಗುಂಪಿಗೆ ಸೀಮಿತಗೊಳಿಸಿ ಆಯ್ಕೆ ಪ್ರಕ್ರಿಯೆಯನ್ನು ಮಾಡುವ ಬದಲು ಮುಕ್ತ ಪ್ರಯೋಗಗಳನ್ನು ನಡೆಸಿ ಕಚ್ಚಾ ವೇಗದ ಬೌಲಿಂಗ್ ಪ್ರತಿಭೆಗಳನ್ನು ಪಿಸಿಎ ಕಂಡುಹಿಡಿಯಬೇಕೆಂದು ನಾನು ಬಯಸುತ್ತೇನೆ" ಎಂದು ಸಂಸದ ಹರ್ಭಜನ್ ಹೇಳಿದ್ದಾರೆ. ಈ ಮೂಲಕ ಕಳೆದುಹೋದ ವೈಭವವನ್ನು ಮರಳಿ ಪಡೆಯಲು ಪಿಸಿಎಗೆ ಸಲಹೆ ನೀಡಿದ್ದಾರೆ.

ಕಚ್ಚಾ ಬೌಲಿಂಗ್​ ಪ್ರತಿಭೆಗಳನ್ನು ಹುಡುಕುವ ಬಜ್ಜಿ ಸಲಹೆಯನ್ನು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಜಾರಿಗೆ ತಂದು 'ಪೇಸ್ ಬೌಲಿಂಗ್ ಬ್ಯಾಂಕ್' ಮಾಡಲು ಯೋಜಿಸಿತು. ಅದರಂತೆ, ಜೂನ್ 10-21ರ ವರೆಗೆ 1000ಕ್ಕೂ ಹೆಚ್ಚು ಬೌಲರ್​ಗಳನ್ನು ಪರೀಕ್ಷೆ ಮಾಡಿ, 93 ಜನರನ್ನು ಶಾರ್ಟ್​ ಲಿಸ್ಟ್​​ ಮಾಡಿದೆ. ಇದಕ್ಕಾಗಿ ಕಾರ್ಯದರ್ಶಿ ದಿಲ್ಶರ್ ಖನ್ನಾ ಅವರ ನೇತೃತ್ವದ ಪಿಸಿಎ ತಂಡವನ್ನು ರಚಿಸಿತ್ತು. ಮಾಜಿ ರಾಷ್ಟ್ರೀಯ ಆಯ್ಕೆಗಾರ ಹರ್ವಿಂದರ್ ಸಿಂಗ್, ಭಾರತದ ಮಾಜಿ ವೇಗಿಗಳಾದ ಮನ್‌ಪ್ರೀತ್ ಸಿಂಗ್ ಗೋನಿ ಮತ್ತು ಗಗನ್‌ದೀಪ್ ಸಿಂಗ್ ಅವರು ಯುವ ಗ್ರಾಮೀಣ ಪ್ರತಿಭೆಗಳನ್ನು ಪಂಜಾಬ್​ನ ಹಳ್ಳಿಗಳಲ್ಲಿ ಹುಡುಕಲು ಪ್ರಯಾಣ ಮಾಡಿದ್ದರು.

ಅದರಂತೆ, ಪಿಸಿಎ ಸ್ಥಳೀಯ ಪತ್ರಿಕೆಗಳಲ್ಲಿ ಮತ್ತು ಸ್ಥಳೀಯ ಕೇಬಲ್ ಚಾನೆಲ್‌ಗಳಲ್ಲಿ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡದ ಆಟಗಾರರಿಗೆ ಓಪನ್ ಟ್ರಯಲ್ಸ್‌ನಲ್ಲಿ ಭಾಗವಹಿಸುವಂತೆ ಜಾಹೀರಾತು ನೀಡಲಾಗಿತ್ತು. ಅದರಂತೆ ಪ್ರತಿಭೆಗಳ ಹುಡುಕಾಟದಲ್ಲಿ ತಂಡ ಅಮೃತಸರ, ಜಲಂಧರ್, ಬರ್ನಾಲಾ, ಮುಕ್ತಸರ ಸಾಹಿಬ್‌ ಹೀಗೆ ಪಂಜಾಬ್​ನ ಹವಲು ಪ್ರದೇಶಗಳಲ್ಲಿ ಟ್ರಯಲ್ಸ್‌ ನಡೆಸಿತು. ಇದರಲ್ಲಿ ಈಗ 93 ಜನರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಮಾಜಿ ಟೆಸ್ಟ್ ವೇಗಿ ಹರ್ವಿಂದರ್, "16ಕ್ಕಿಂತ ಮೇಲ್ಪಟ್ಟ ವಯಸ್ಕರನ್ನು ಮಾತ್ರ ತಂಡಕ್ಕೆ ತೆಗೆದುಕೊಳ್ಳುವ ನಿರ್ಧಾರ ಆಗಿತ್ತು. 16 ರಿಂದ 18 ನೇ ವಯಸ್ಸಿನಲ್ಲಿ ಹೆಚ್ಚು ಟ್ರೈನ್​ ಮಾಡುವುದು ಸೂಕ್ತ ಎಂಬುದು ಲೆಕ್ಕಾಚಾರ. 18ಕ್ಕಿಂತ ಮೇಲ್ಪಟ್ಟು 24ರ ವರೆಗೂ ಟ್ರಯಲ್ಸ್​ ನೋಡಿದ್ದೇವೆ. ಪಂಜಾಬ್​ನಲ್ಲಿ ಒರ್ವ 6 ಅಡಿ 8 ಇಂಚಿನ 19 ವರ್ಷದ ಯುವಕ ಬೌಲಿಂಗ್​ ಮಾಡಲು ಬಂದಿದ್ದ. ಅವನಿಗೆ ಸರಿಯಾದ ಕಲಿಕೆಯ ಅಗತ್ಯ ಇತ್ತು ಅಂತಹವರನ್ನು ಗುರುತಿಸುವುದು ನಮ್ಮ ಕಾರ್ಯವಾಗಿತ್ತು. ಆದರೆ ನಾವು ತೂಕ ಮತ್ತು ದೇಹದಾರ್ಢ್ಯತೆ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಏಕೆಂದರೆ ಅವರಿಗೆ ಟೈನಿಂಗ್​ನಲ್ಲಿ ಅದಕ್ಕೆ ಹೆಚ್ಚು ಒತ್ತನ್ನು ಕೊಟ್ಟರೆ ಸಧೃಡವಾಗಿ ಮಾಡಲು ಸಾಧ್ಯವಾಗುತ್ತದೆ. ನಮ್ಮ ಗುರಿ ಇದ್ದದ್ದು ವೇಗದ ಬೌಲಿಂಗ್​ ಪಡೆಯ ಆಯ್ಕೆ" ಎಂದಿದ್ದಾರೆ.

"ಮೊಹಾಲಿಯಲ್ಲಿ 15 ದಿನಗಳ ಶಿಬಿರವನ್ನು ಆಯೋಜಿಸಿ 93 ಜನರ ಗುಂಪನ್ನು 50ಕ್ಕೆ ಇಳಿಸಲಾಗುತ್ತದೆ. ಕನಿಷ್ಠ 15 ರಿಂದ 20 ಹಳ್ಳಿಯುವಕರು ತಂಡಕ್ಕೆ ಆಯ್ಕೆ ಮಟ್ಟದಲ್ಲಿದ್ದಾರೆ. ನಾಲ್ಕು ತಿಂಗಳ ಅವಧಿಯಲ್ಲಿ ಬಿಸಿಸಿಐ ಅಂಡರ್​ 19 ರಾಷ್ಟ್ರೀಯ ಕೂಟಕ್ಕೆ ಸಿದ್ಧವಾಗುತ್ತಾರೆ" ಎಂದು ಹರ್ವಿಂದರ್ ಹೇಳಿದರು.

ಈ ಬಗ್ಗೆ ಮಾತನಾಡಿದ್ದ ಹರ್ಭಜನ್ ಸಿಂಗ್​, "ಪಂಜಾಬ್ ರಾಜ್ಯ ತಂಡವು ಹಲವು ವರ್ಷಗಳಿಂದ ಮಧ್ಯಮ ವೇಗಿಗಳಾದ ಸಿದ್ದಾರ್ಥ್ ಕೌಲ್, ಸಂದೀಪ್ ಶರ್ಮಾ, ಬಲ್ತೇಜ್ ಧಂಡಾ ಅವರನ್ನು ಹೊಂದಿದೆ. ಅವರ ಬೌಲಿಂಗ್ ವೇಗ ಗಂಟೆಗೆ 125 ಕಿಮೀ ನಿಂದ 135 ಕಿಮೀ ವ್ಯಾಪ್ತಿಯಲ್ಲಿದೆ. ಆದರೆ ವಿಕ್ರಮ್ ರಾಜ್ ವೀರ್ ಸಿಂಗ್ ನಂತರ ಪಂಜಾಬ್ ವೇಗದ ಪಡೆಯಲ್ಲಿ 140 ರಿಂದ 145 kmph ವೇಗದಲ್ಲಿ ಬೌಲಿಂಗ್​ ಮಾಡುವ ಬೌಲರ್​ ಕಂಡಿಲ್ಲ. ಹೀಗಾಗಿ ವೇಗವಾಗಿ ಬೌಲಿಂಗ್ ಮಾಡುವ ಪ್ರತಿಭೆಯಲ್ಲಿ ಹಳ್ಳಿಗಳಿಂದ ಹುಡುಕ ಬೇಕಾಗಿದೆ" ಎಂದರು.

"ಹಳ್ಳಿಯಿಂದ ಬರುವವರು ರಬ್ಬರ್​ ಅಥವಾ ಟೆನಿಸ್​ ಬಾಲ್​ನಲ್ಲಿ ಆಡುರುತ್ತಾರೆ. ಹೀಗಾಗಿ ಅವರ ಲೈನ್​ ಮತ್ತು ಲೆಂತ್​ ಬಗ್ಗೆ ಹೆಚ್ಚು ಕೇಂದ್ರೀಕರಿಸದೇ ವೇಗಕ್ಕೆ ಮಾತ್ರ ಒತ್ತು ಕೊಡ ಬೇಕು ನಂತರ ಅವರಿಗೆ ಬೌಲಿಂಗ್​ ಬಗ್ಗೆ ಸರಿಯಾದ ಟ್ರೈನಿಂಗ್​ ಕೊಟ್ಟು ಕಲಿಸಬಹುದು. ಬಿಸಿಸಿಐ ರಾಜ್ಯ ಘಟಕಗಳಿಗೆ ಸಾಕಷ್ಟು ಹಣವನ್ನು ನೀಡುತ್ತದೆ. ಅದನ್ನು ಕ್ರಿಕೆಟಿಗರ ಮೇಲೆ ಹೂಡಿಕೆ ಮಾಡಬೇಕು ಎಂಬುದು ನನ್ನ ಆಲೋಚನೆಯಾಗಿದೆ ಮತ್ತು ನಾನು ಪಿಸಿಎಗೆ ಹೇಳಿದ್ದೇನೆ. ಪಂಜಾಬ್ ಕ್ರಿಕೆಟ್‌ನ ವೈಭವದ ದಿನಗಳು ಹಿಂತಿರುಗುತ್ತವೆ ಮತ್ತು ನಾವು ಭಾರತೀಯ ಕ್ರಿಕೆಟ್​ಗೆ ಉತ್ತಮ ವೇಗದ ಪಡೆಯನ್ನು ನೀಡುತ್ತೇವೆ" ಎಂದು ಹರ್ಭಜನ್ ಭರವಸೆ ವ್ಯಕ್ತಪಡಿಸಿದರು.

ಇದನ್ನೂ ಓದಿ: ವೆಸ್ಟ್‌ ಇಂಡೀಸ್ ಪ್ರವಾಸ: ಏಕದಿನ, ಟೆಸ್ಟ್‌ಗೆ ಟೀಂ ಇಂಡಿಯಾ ಪ್ರಕಟ- ಜೈಸ್ವಾಲ್, ರುತುರಾಜ್‌ ಇನ್, ಪೂಜಾರಾ ಔಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.