ಮುಂಬೈ: ಬಹುನಿರೀಕ್ಷಿತ ಮಹಿಳಾ ಐಪಿಎಲ್ ಭರ್ಜರಿ ಆರಂಭವಾಗಿದ್ದು, ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ. ಈವರೆಗೆ ನಡೆದ ನಾಲ್ಕು ಪಂದ್ಯಗಳಲ್ಲಿ ಸ್ಟೇಡಿಯಂ ಬಹುತೇಕ ತುಂಬಿದೆ. ಚುಟುಕು ಕ್ರಿಕೆಟ್ನಲ್ಲಿ ವನಿತೆಯರು ಲೀಲಾಜಾಲವಾಗಿ 150+ ರನ್ ಗಳಿಸುತ್ತಿದ್ದು ಸಿಕ್ಸ್, ಫೊರ್ಗಳಿಂದ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುತ್ತಿದೆ.
-
What better way to celebrate Women's Day than witnessing a thrilling game at the #TATAWPL! 🙌 🙌
— Women's Premier League (WPL) (@wplt20) March 7, 2023 " class="align-text-top noRightClick twitterSection" data="
Book your FREE ticket 🎟️ on https://t.co/Dm5YwpqzR0
Entry on first come first serve basis.#GGvRCB pic.twitter.com/reUwX6Pn3P
">What better way to celebrate Women's Day than witnessing a thrilling game at the #TATAWPL! 🙌 🙌
— Women's Premier League (WPL) (@wplt20) March 7, 2023
Book your FREE ticket 🎟️ on https://t.co/Dm5YwpqzR0
Entry on first come first serve basis.#GGvRCB pic.twitter.com/reUwX6Pn3PWhat better way to celebrate Women's Day than witnessing a thrilling game at the #TATAWPL! 🙌 🙌
— Women's Premier League (WPL) (@wplt20) March 7, 2023
Book your FREE ticket 🎟️ on https://t.co/Dm5YwpqzR0
Entry on first come first serve basis.#GGvRCB pic.twitter.com/reUwX6Pn3P
ಮಹಿಳಾ ಪ್ರೀಮಿಯರ್ ಲೀಗ್‌ನ ಆಯೋಜಕರು 2023ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಎಲ್ಲರಿಗೂ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳ ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನಾಳೆ ಮಾರ್ಚ್ 8 ಎಂದು ಮಹಿಳಾ ದಿನಾಚರಣೆ ಇದ್ದು, ಈ ದಿನ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫೈಟ್ ಏರ್ಪಡಲಿದೆ.
ಮಾರ್ಚ್ 8 ರಂದು ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿರುವ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಎಲ್ಲರಿಗೂ ಉಚಿತ ಪ್ರವೇಶವನ್ನು ಮಾಡಲಾಗಿದೆ. ಈ ಬಗ್ಗೆ ನಿನ್ನೆ ಸಂಜೆ ಬ್ರಬೋರ್ನ್ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಮುಂಬೈ ಪಂದ್ಯದ ವೇಳೆ ಮಾಹಿತಿ ನೀಡಲಾಗಿದೆ. ಆಯೋಜಕರು ನೀಡಿರುವ ಮಾಹಿತಿಯಲ್ಲಿ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗುಜರಾತ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆಯಲಿರುವ ಪಂದ್ಯದಲ್ಲಿ ಪ್ರೇಕ್ಷಕರ ಪ್ರವೇಶ ಉಚಿತ ಎಂದು ಹೇಳಲಾಗಿದೆ.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಕಾರ್ಯಕ್ರಮ ವೀಕ್ಷಣೆ ಮತ್ತು ಪಂದ್ಯಕ್ಕೆ ಯುವತಿಯರಿಗೆ ಮತ್ತು ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಆದರೆ ಮಹಿಳಾ ದಿನಾಚರಣೆ ಪ್ರಯುಕ್ತ ಎಲ್ಲರಿಗೂ ಉಚಿತ ನೀಡುವುದಾಗಿ ವುಮೆನ್ಸ್ ಪ್ರೀಮಿಯರ್ ಲೀಗ್‌ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಎರಡು ಸೋಲನುಭವಿಸಿರುವ ಗುಜರಾತ್ ಮತ್ತು ಬೆಂಗಳೂರು ತಂಡದಲ್ಲಿ ಯಾವುದು ಗೆಲುವಿನ ಲಯಕ್ಕೆ ಮರಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಆಚರಿಸಲು ಮಾರ್ಚ್ 8 ರಂದು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸುತ್ತದೆ. ಹೀಗಾಗಿ ಮಹಿಳೆಯರಿಗೆ ಒಗ್ಗಟ್ಟು ಪ್ರದರ್ಶಿಸಲು ಡಬ್ಲ್ಯುಪಿಎಲ್ ವಿಶೇಷ ದಿನದಂದು ಯೋಜನೆ ರೂಪಿಸಿದೆ.
ಎರಡು ಸೋತ ತಂಡಗಳ ನಡುವಣ ಹಣಾಹಣಿ: ಆರ್ಸಿಬಿ ಮತ್ತು ಜಿಜಿ ಎರಡು ಸೋಲನುಭವಿಸಿ ಅಂಕಪಟ್ಟಿಯಲ್ಲಿ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದೆ. ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ 143 ರನ್ಗಳ ಸೋಲನುಭವಿಸಿತ್ತು. ಯುಪಿ ವಾರಿಯರ್ಸ್ ಎದುರು ಉತ್ತಮ ಪೈಪೋಟಿ ನೀಡಿದ ಗುಜರಾತ್ ಗ್ರೇಸ್ ಹ್ಯಾರಿಸ್ ಅವರ ಬ್ಯಾಟಿಂಗ್ನಿಂದ 3 ವಿಕೆಟ್ಗಳ ಸೋಲನುಭವಿಸಿತು.
ಆರ್ಸಿಬಿ ತಂಡ ಡೆಲ್ಲಿ ಕ್ಯಾಪ್ಟಲ್ಸ್ ಮೇಲೆ ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡಿತಾದರೂ ರನ್ ನಿಯಂತ್ರಿಸುವಲ್ಲಿ ವಿಫಲವಾಯಿತು. 223 ರನ್ ಗುರಿ ಎದುರಿಸಿದ ಆರ್ಸಿಬಿ 60 ರನ್ಗಳ ಸೋಲು ಕಂಡಿತು. ನಿನ್ನೆ ಅದೇ ಸ್ಟೇಡಿಯಂನಲ್ಲಿ ಮುಂಬೈ ಜೊತೆ ಮುಖಾಮುಖಿಯಾದ ಆರ್ಸಿಬಿ ಟಾಸ್ ನಿರ್ಣಯ ಬದಲಾಯಿಸಿ ಬ್ಯಾಟಿಂಗ್ ತೆಗೆದುಕೊಂಡರೂ ಬೃಹತ್ ರನ್ ಕಲೆ ಹಾಕುವಲ್ಲಿ ಎಡವಿತು. 155ಕ್ಕೆ ಔಟ್ ಆದ ಮಂಧಾನ ಪಡೆ ಬೌಲಿಂಗ್ನಲ್ಲೂ ನಿಯಂತ್ರಣ ಸಾಧಿಸಲಾಗದೇ 9 ವಿಕೆಟ್ಗಳ ಅಪಜಯ ಕಂಡಿತು.
ಇದನ್ನೂ ಓದಿ: ಬಣ್ಣದಲ್ಲಿ ಮಿಂದೆದ್ದ ರಾಯಲ್ ಬೆಡಗಿಯರು: ವುಮೆನ್ಸ್ ಐಪಿಎಲ್ನ ಹೋಳಿ ಸಂಭ್ರಮ