ETV Bharat / sports

ಜಟ್ಟಿಗಳ ಕೆಡವಿದ ಕ್ರಿಕೆಟ್​ ಶಿಶುಗಳು.. ವಿಶ್ವಕಪ್​ನಲ್ಲಿ ಅಚ್ಚರಿಯ ಫಲಿತಾಂಶ ನೀಡಿದ ತಂಡಗಳು - T20 world cup

ಟಿ 20 ವಿಶ್ವಕಪ್​ನಲ್ಲಿ ಸಣ್ಣ ತಂಡಗಳು ಬಲಿಷ್ಠ ತಂಡಗಳಿಗೆ ಸೋಲುಣಿಸಿ ಅಚ್ಚರಿಯ ಪಲಿತಾಂಶ ನೀಡಿವೆ. ಇದರಲ್ಲಿ ನೆದರ್​ಲ್ಯಾಂಡ್ಸ್​ 3 ಬಾರಿ ಬಲಿಷ್ಠ ತಂಡಗಳಿಗೆ ಶಾಕ್ ನೀಡಿ ಕ್ರಿಕೆಟ್ ಲೋಕವನ್ನೇ ನಿಬ್ಬರಗಾಗಿಸಿದೆ.

great-teams-upset
ಜಟ್ಟಿಗಳ ಕೆಡವಿದ ಕ್ರಿಕೆಟ್​ ಶಿಶುಗಳು
author img

By

Published : Nov 7, 2022, 6:01 PM IST

ಟಿ 20 ಕ್ರಿಕೆಟ್​ನಲ್ಲಿ ಅಚ್ಚರಿಯ ಫಲಿತಾಂಶಗಳಿಗೆ ಕೊರತೆಯಿಲ್ಲ. ಅದು ಚಾಲ್ತಿಯಲ್ಲಿರುವ ಟಿ20 ವಿಶ್ವಕಪ್​ನಲ್ಲೂ ಸಾಗಿದೆ. ಸೆಮೀಸ್​ ಸೇರುವ ತಂಡಗಳಲ್ಲಿ ಒಂದಾಗಿದ್ದ ದಕ್ಷಿಣ ಆಫ್ರಿಕಾವನ್ನು ಚೆಂಡಾಡಿದ ಕ್ರಿಕೆಟ್​ ಶಿಶು ನೆದರ್​ಲ್ಯಾಂಡ್​ ಹರಿಣಗಳನ್ನು ಟೂರ್ನಿಯಿಂದಲೇ ಹೊರದಬ್ಬಿತು. ದಕ್ಷಿಣ ಆಫ್ರಿಕಾಗೆ ಈ ಸೋಲು ಎಂದಿಗೂ ಮಾಸದ ಗಾಯ. ಇದಕ್ಕೂ ಮೊದಲು ಇಂಗ್ಲೆಂಡ್​ಗೆ ಐರ್ಲೆಂಡ್​ ತಂಡ ಶಾಕ್​ ನೀಡಿತ್ತು. ಪಾಕಿಸ್ತಾನಕ್ಕೆ ಜಿಂಬಾಬ್ವೆ ಸೋಲಿನ ಬರೆ ಎಳೆದಿತ್ತು.

ಅಚ್ಚರಿಯ ಫಲಿತಾಂಶ ನೀಡಿದ ನೆದರ್​ಲ್ಯಾಂಡ್ಸ್​
ಅಚ್ಚರಿಯ ಫಲಿತಾಂಶ ನೀಡಿದ ನೆದರ್​ಲ್ಯಾಂಡ್ಸ್​

ಇದೇ ರೀತಿ ಹಿಂದಿನ ಆವೃತ್ತಿಗಳಲ್ಲೂ ಕ್ರಿಕೆಟ್​ ಶಿಶುಗಳು ಬಲಿಷ್ಠ ತಂಡಗಳನ್ನು ಕೆಡವಿದ ಉದಾಹರಣೆಗಳಿವೆ. ಪ್ರಮುಖ ಘಟ್ಟದಲ್ಲಿ ತಂಡಗಳನ್ನು ಸೋಲಿಸುವ ಮೂಲಕ ಕೆಲ ತಂಡಗಳಿಗೆ ಟೂರ್ನಿಯಿಂದಲೇ ಗೇಟ್​ ಪಾಸ್​ ಕೊಡಿಸಿದರೆ, ಇನ್ನೂ ಕೆಲವಕ್ಕೆ ಅಂಕಪಟ್ಟಿಯಲ್ಲಿ ಅಡ್ಡಿಯುಂಟು ಮಾಡಿವೆ. ವಿಶ್ವಕಪ್​ನಲ್ಲಿ ಯಾವೆಲ್ಲಾ ತಂಡಗಳು ಬಲಿಷ್ಠ ತಂಡಗಳಿಗೆ ಸೋಲುಣಿಸಿವೆ ಎಂಬುದರ ಮಾಹಿತಿ ಇಲ್ಲಿದೆ.

ಪಾಕಿಸ್ತಾನ ಸದೆಬಡಿದ ಜಿಂಬಾಬ್ವೆ
ಪಾಕಿಸ್ತಾನ ಸದೆಬಡಿದ ಜಿಂಬಾಬ್ವೆ

ಆಸ್ಟ್ರೇಲಿಯಾಗೆ ಕಾಡಿದ್ದ ಜಿಂಬಾಬ್ವೆ: 2007 ರ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಜಿಂಬಾಬ್ವೆ ವಿರುದ್ಧ ಸೋಲು ಕಂಡಿತ್ತು. ಎಲ್ಟನ್​ ಚಿಗುಂಬರಾ ದಾಳಿಗೆ ನಲುಗಿದ್ದ ಆಸೀಸ್​ ಪಡೆ 138 ರನ್​​ಗೆ ಆಲೌಟ್ ಆಗಿತ್ತು. ಚಿಗುಂಬರಾ 3 ವಿಕೆಟ್​ ಕಿತ್ತಿದ್ದರು. ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಬ್ರೆಂಡೆನ್​ ಟೈಲರ್​ 45 ಎಸೆತಗಳಲ್ಲಿ 60 ರನ್​ ಮಾಡಿದ್ದರು.

ಗೆದ್ದ ಕ್ಷಣದ ಸಂತಸದಲ್ಲಿ ನಮೀಬಿಯಾ
ಗೆದ್ದ ಕ್ಷಣದ ಸಂತಸದಲ್ಲಿ ನಮೀಬಿಯಾ

ಇಂಗ್ಲೆಂಡ್​ಗೆ ನೆದರ್​ಲ್ಯಾಂಡ್ಸ್ ಸ್ಟ್ರೈಕ್​: 2009 ರ ವಿಶ್ವಪ್​ನಲ್ಲಿ ಮೊದಲ ಬಾರಿಗೆ ವಿಶ್ವಕಪ್​​ನಲ್ಲಿ ಸ್ಥಾನ ಪಡೆದಿದ್ದ ನೆದರ್​ಲ್ಯಾಂಡ್​ ಇಂಗ್ಲೆಂಡ್​ಗೆ ಸೋಲಿನ ಕಹಿ ತೋರಿಸಿತ್ತು. ಮಳೆಯ ಕಾಟದ ಮಧ್ಯೆಯೂ 162 ರನ್​ ಗುರಿಯನ್ನು ನೆದರ್​ಲ್ಯಾಂಡ್ಸ್​ ದಾಟಿತ್ತು. ಇದು ಆ ತಂಡಕ್ಕೆ ವಿಶ್ವಕಪ್​ನಲ್ಲಿ ದಾಖಲಾದ ಮೊದಲ ಜಯವಾಗಿತ್ತು.

ಐರ್ಲೆಂಡ್​ ತಂಡದ ಜಯದ ಖುಷಿ
ಐರ್ಲೆಂಡ್​ ತಂಡದ ಜಯದ ಖುಷಿ

ಐರ್ಲೆಂಡ್​ನಿಂದ ಸೋತಿದ್ದ ಬಾಂಗ್ಲಾ-2009: ವಿಶ್ವಕಪ್​ನಲ್ಲಿ ಅತಿ ಹೆಚ್ಚು ಬಾರಿ ಶಾಕಿಂಗ್​ ಫಲಿತಾಂಶಕ್ಕೆ ಒಳಗಾದ ತಂಡ ಬಾಂಗ್ಲಾದೇಶ. 2009 ರ ಆವೃತ್ತಿಯಲ್ಲಿ ಐರ್ಲೆಂಡ್​ ತಂಡದೆದುರು ಸೋತು ಭಾರಿ ಮುಖಭಂಗಕ್ಕೆ ಒಳಗಾಗಿತ್ತು. ಐರ್ಲೆಂಡ್​ ಪಡೆ ನೀಡಿದ್ದ 137 ರನ್​ ಸಾಧಾರಣ ಮೊತ್ತ ಭೇದಸಲಾಗದೇ 90 ರನ್​ಗೆ ಸೋಲು ಕಂಡಿತ್ತು.

ಹಾಂಕಾಂಗ್​ ಜಯಭೇರಿ
ಹಾಂಕಾಂಗ್​ ಜಯಭೇರಿ

ಇಂಗ್ಲೆಂಡ್​ ಗರ್ವ ಮುರಿದಿದ್ದ ನೆದರ್​ಲ್ಯಾಂಡ್ಸ್​-2014: 2009 ರ ವಿಶ್ವಕಪ್​ನಲ್ಲಿ ಇಂಗ್ಲೆಂಡ್​ಗೆ ಸೋಲುಣಿಸಿದ್ದ ನೆದರ್​ಲ್ಯಾಂಡ್ಸ್​ ತಂಡ 5 ವರ್ಷಗಳ ಬಳಿಕ 2014 ರ ಚುಟುಕು ವಿಶ್ವಕಪ್​ನಕಲ್ಲೂ ಶಾಕ್​ ನೀಡಿತು. ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದ್ದ ಇಂಗ್ಲೆಂಡ್​ ಆಡಿದ ಔಪಚಾರಿಕ ಪಂದ್ಯದಲ್ಲೂ ಸೋಲು ಕಾಣುವಂತಾಯಿತು. 133 ರನ್​ಗೆ ಡಚ್​ ಪಡೆಯನ್ನು ಕಟ್ಟಿಹಾಕಿದ್ದರೂ, 110 ರನ್​ ಗಳಿಸಲು ಮಾತ್ರ ಶಕ್ತವಾಗಿ ಬ್ರಿಟಿಷರು ಸೋತಿದ್ದರು.

ಹಾಂಕಾಂಗ್​ ಕೈಯಲ್ಲಿ ಬಾಂಗ್ಲಾಗೆ ಮುಖಭಂಗ: 2014 ರ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ನೀಡಿದ್ದು ಕ್ರಿಕೆಟ್​ ಶಿಶು ಹಾಂಕಾಂಗ್​ ಪಡೆ. ಬಾಂಗ್ಲಾದೇಶವನ್ನು 108 ರನ್​ಗೆ ತಡೆದಿದ್ದ ಹಾಂಕಾಂಗ್​ ಕೊನೆಯ ಓವರ್​ನಲ್ಲಿ ವಿಕ್ಟರಿ ಸಾಧಿಸಿತ್ತು. ಈ ಸೋಲು ಬಾಂಗ್ಲಾಗೆ ಮುಳ್ಳಾಗಿ ಕಾಡಿತ್ತು.

ವಿಂಡೀಸ್​ ದೈತ್ಯರಿಗೆ ಆಫ್ಘನ್​ ಗುಮ್ಮ: 2016 ರಲ್ಲಿ ಗುಂಪು ಹಂತದಲ್ಲಿನ ಪಂದ್ಯದಲ್ಲಿ ಕ್ರಿಕೆಟ್​ನಲ್ಲಿ ಬೆಳೆಯುತ್ತಿದ್ದ ಆಫ್ಘಾನಿಸ್ತಾನ ತಂಡ ದೈತ್ಯ ಬ್ಯಾಟರ್​ಗಳನ್ನು ಹೊಂದಿದ್ದ ವೆಸ್ಟ್​ ಇಂಡೀಸ್​ಗೆ ಕೊನೆ ಓವರ್​ನಲ್ಲಿ ಸೋಲುಣಿಸಿತ್ತು. ಇದು ವಿಂಡೀಸ್ ತಂಡಕ್ಕೆ ಮುಂದಿನ ಹಂತಕ್ಕೆ ತೆರಳಲು ಅಡ್ಡಿ ಉಂಟು ಮಾಡಿತ್ತು. ಪಂದ್ಯದಲ್ಲಿ ರಶೀದ್​ ಖಾನ್​ ಸ್ಪಿನ್​ ದಾಳಿ ನಡೆಸಿದ್ದರು.

ಬಾಂಗ್ಲಾದೇಶಕ್ಕೆ ಸ್ಕಾಟ್ಲೆಂಡ್​ ಬಿಗ್ ಶಾಕ್​-2021: ಕಳೆದ ವರ್ಷದ ವಿಶ್ವಕಪ್​ನಲ್ಲಿ ಅಚ್ಚರಿಯ ಫಲಿತಾಂಶ ನೀಡಿದ ಪಂದ್ಯವೆಂದರೆ ಅದು ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್​ ನಡುವಿನ ಸೆಣಸಾಟ. 140 ರನ್​ಗೆ ಪತನಗೊಂಡಿದ್ದ ಸ್ಕಾಟ್ಲೆಂಡ್​​ ಮರು ಹೋರಾಟ ಮಾಡಿ ಬಾಂಗ್ಲಾದೇಶವನ್ನು 134 ರನ್​ಗಳಿಗೆ ಕಟ್ಟಿಹಾಕಿ ವಿಜಯ ಸಾಧಿಸಿತ್ತು.

ಹರಿಣಗಳಿಗೆ ಗುದ್ದಿದ ಡಚ್​ ಪಡೆ-2022: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್​ ಕೂಡ ಅಚ್ಚರಿಯ ಫಲಿತಾಂಶಗಳಿಗೆ ಕಾರಣವಾಗಿದೆ. ಸೆಮೀಸ್​ ಸೇರುವ ಹಾದಿಯಲ್ಲಿದ್ದ ದಕ್ಷಿಣ ಆಫ್ರಿಕಾ ನೆದರ್​ಲ್ಯಾಂಡ್ಸ್​ ವಿರುದ್ಧ ಹೀನಾಯ ಸೋಲು ಕಂಡು ಮನೆಯ ಹಾದಿ ಹಿಡಿಯಿತು. ಡಚ್ಚರು ನೀಡಿದ 158 ರನ್​ಗಳನ್ನು ಮೀರಲಾಗದ ಹರಿಣಗಳು 145 ರನ್​ಗೆ ಗಂಟುಮೂಟೆ ಕಟ್ಟಿದ್ದವು.

ಶ್ರೀಲಂಕಾಗೆ ನಮೀಬಿಯಾ ಪೆಟ್ಟು-2022: ಏಷ್ಯಾಕಪ್ ವಿಜೇತ ತಂಡವಾದ ಶ್ರೀಲಂಕಾ ವಿಶ್ವಕಪ್​ನಲ್ಲಿ ಆಡಿದ ಅರ್ಹತಾ ಪಂದ್ಯದಲ್ಲಿ ಕ್ರಿಕೆಟ್​ ಅಕ್ಷರ ಕಲಿಯುತ್ತಿರುವ ನಮೀಬಿಯಾ ವಿರುದ್ಧ ಮುಖಭಂಗ ಅನುಭವಿಸಿತ್ತು. ನಮೀಬಿಯಾ ನೀಡಿದ್ದ 164 ರನ್​ಗಳ ಗುರಿಗೆ ಲಂಕಾ ಪಡೆ ಕೇವಲ 108 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲು ಅನುಭವಿಸಿತು.

ಪಾಕಿಸ್ತಾನಕ್ಕೆ ಜಿಂಬಾಬ್ವೆ ಮರ್ಮಾಘಾತ-2022: ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ತಾನಾಡಿದ 2 ನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತು ಭಾರಿ ಟೀಕೆಗೆ ಗುರಿಯಾಗಿತ್ತು. ಇದು ಆ ತಂಡದ ಸೆಮೀಸ್​ಗೂ ಮುಳ್ಳಾಗಿತ್ತು. ಜಿಂಬಾಬ್ವೆ 1 ರನ್ನಿಂದ ಕೊನೆಯ ಓವರ್​ನಲ್ಲಿ ಗೆದ್ದು ಇತಿಹಾಸ ನಿರ್ಮಿಸಿತ್ತು.

ಐರ್ಲೆಂಡ್​ಗೆ ಶರಣಾದ ಇಂಗ್ಲೆಂಡ್​-2022: ಸೆಮಿಫೈನಲ್​ ತಲುಪಿರುವ ಇಂಗ್ಲೆಂಡ್​ ಪಡೆ ಗುಂಪು ಹಂತದಲ್ಲಿ ಐರ್ಲೆಂಡ್​ ಎದುರು ಡಕ್ವರ್ಥ್​ ಲೂಯಿಸ್​ ನಿಯಮದಡಿ 5 ರನ್​ಗಳ ಸೋಲು ಕಂಡಿತ್ತು. ಐರ್ಲೆಂಡ್​ ಪಡೆ 157 ರನ್​ ಗುರಿ ನೀಡಿತ್ತು. ಇಂಗ್ಲೆಂಡ್​ ಇನ್ನಿಂಗ್ಸ್​ ವೇಳೆ ಮಳೆ ಬಂದು ಆಟ ನಿಂತಿತು. ನಿಗದಿಗಿಂತ 5 ರನ್​ ಹಿಂದಿದ್ದ ಇಂಗ್ಲೆಂಡ್​ಗೆ ಸೋಲು ಉಂಟಾಯಿತು.

ಓದಿ: ವಿರಾಟ್​ ಕೊಹ್ಲಿಗೆ ಐಸಿಸಿ ಅಕ್ಟೋಬರ್​ ತಿಂಗಳ ಅತ್ಯುತ್ತಮ ಕ್ರಿಕೆಟರ್​ ಪ್ರಶಸ್ತಿ.. ಮಹಿಳೆಯರಲ್ಲಿ ಯಾರಿಗೆ ಅವಾರ್ಡ್​?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.