ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವಿನ ಟಿ20 ವಿಶ್ವಕಪ್ ಮೊದಲ ಸೂಪರ್ 12 ಪಂದ್ಯದಲ್ಲಿ ಗ್ಲೆನ್ ಫಿಲಿಪ್ಸ್ "ಸೂಪರ್ ಮ್ಯಾನ್" ಕ್ಯಾಚ್ ಹಿಡಿದು ಕ್ರೀಡಾಂಗಣವನ್ನೇ ದಂಗು ಬಡಿಸಿದ್ದಾರೆ.
ವಿಶ್ವಕಪ್ನ ಮೊದಲ ಪಂದ್ಯವೇ ಅಚ್ಚರಿಯ ಕಾರಣಗಳಿಗೆ ಸಾಕ್ಷಿಯಾಗಿದೆ. ಆಸ್ಟ್ರೇಲಿಯಾ ಬ್ಯಾಟರ್ಗಳ ಕಳಪೆ ಆಟದಿಂದ ನ್ಯೂಜಿಲೆಂಡ್ ಎದುರು 89 ರನ್ಗಳ ಹೀನಾಯ ಸೋಲು ಕಂಡಿದೆ. ಡಾರ್ಕ್ಹಾರ್ಸ್ ಕುಖ್ಯಾತಿಯ ನ್ಯೂಜಿಲೆಂಡ್ ಮಾತ್ರ ಎಲ್ಲರೂ ಕಣ್ಣರಳಿಸುವ ಸಾಧನೆ ಮಾಡಿದೆ.
-
Superhuman Phillips!
— T20 World Cup (@T20WorldCup) October 22, 2022 " class="align-text-top noRightClick twitterSection" data="
We can reveal that this catch from Glenn Phillips is one of the moments that could be featured in your @0xFanCraze Crictos of the Game packs from Australia v New Zealand.
Grab your pack from https://t.co/EaGDgPxPzl to own iconic moments from every game. pic.twitter.com/ozTLvGNzZR
">Superhuman Phillips!
— T20 World Cup (@T20WorldCup) October 22, 2022
We can reveal that this catch from Glenn Phillips is one of the moments that could be featured in your @0xFanCraze Crictos of the Game packs from Australia v New Zealand.
Grab your pack from https://t.co/EaGDgPxPzl to own iconic moments from every game. pic.twitter.com/ozTLvGNzZRSuperhuman Phillips!
— T20 World Cup (@T20WorldCup) October 22, 2022
We can reveal that this catch from Glenn Phillips is one of the moments that could be featured in your @0xFanCraze Crictos of the Game packs from Australia v New Zealand.
Grab your pack from https://t.co/EaGDgPxPzl to own iconic moments from every game. pic.twitter.com/ozTLvGNzZR
ಸೂಪರ್ಮ್ಯಾನ್ ಫಿಲಿಪ್ಸ್: ಬ್ಲ್ಯಾಕ್ಸ್ಕ್ಯಾಪ್ಸ್ ನೀಡಿದ 201 ರನ್ಗಳ ಗುರಿ ಬೆನ್ನತ್ತಿದ ಆಸೀಸ್ ಪಡೆ 34 ರನ್ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಮೈದಾನಕ್ಕಿಳಿದ ಫಿನಿಶರ್ ಖ್ಯಾತಿಯ ಮಾರ್ಕಸ್ ಸ್ಟೊಯಿನೀಸ್ ಬಿರುಸಿನ ಆಟವಾಡಲು ಮುಂದಾದರು. ನ್ಯೂಜಿಲೆಂಡ್ನ ಮಿಚೆಲ್ ಸ್ಯಾಂಟ್ನರ್ ಓವರ್‌ನಲ್ಲಿ ಸಿಕ್ಸರ್ ಬಾರಿಸಲು ಸ್ಟೊಯಿನೀಸ್ ಮುನ್ನುಗ್ಗಿ ಬಂದು ಹೊಡೆದಾಗ ಚೆಂಡು ಆಕಾಶದೆತ್ತರಕ್ಕೆ ಹಾರಿತು.
- — Vaishnavi Iyer (@Vaishnaviiyer14) October 22, 2022 " class="align-text-top noRightClick twitterSection" data="
— Vaishnavi Iyer (@Vaishnaviiyer14) October 22, 2022
">— Vaishnavi Iyer (@Vaishnaviiyer14) October 22, 2022
ಕವರ್ ಓವರ್‌ನಲ್ಲಿ ಪುಟಿದ ಚೆಂಡನ್ನು ಮಾರುದ್ದ ದೂರವಿದ್ದ ಗ್ಲೆನ್ ಫಿಲಿಪ್ಸ್ ಕಂಡ ತಕ್ಷಣವೇ ಮಿಂಚಿನ ವೇಗದಲ್ಲಿ ಓಡಿಬಂದರು. ಚೆಂಡು ಇನ್ನೇನು ನೆಲ ತಾಕಬೇಕು ಎನ್ನುವಷ್ಟರಲ್ಲಿ ಸೂಪರ್ಮ್ಯಾನ್ ರೀತಿ ಡೈ ಹಾಕಿ ಕ್ಯಾಚ್ ಪಡೆದರು. ಈ ಕ್ಷಣ ಇಡೀ ಕ್ರೀಡಾಂಗಣವೇ ಒಂದು ಕ್ಷಣ ದಂಗಾಯಿತು.
ಫಿಲಿಕ್ಸ್ ಹಿಡಿದ ಕ್ಯಾಚ್ ಸೆಂಚುರಿ ಆಫ್ ದಿ ಕ್ಯಾಚ್ ಎಂದೇ ಹೇಳಬಹುದು. ದೇಹವನ್ನು ಗಾಳಿಯಲ್ಲಿ ತೇಳಿಸಿ ಬಾಲ್ ಹಿಡಿದಿದ್ದು, ಬ್ಯಾಟರ್ ಸ್ಟೊಯಿನೀಸ್ಗೆ ನಂಬಲಾಗದೇ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು. ಗ್ಲೆನ್ ಫಿಲಿಪ್ಸ್‌ರ ಅತಿಮಾನುಷ ಪ್ರಯತ್ನಕ್ಕೆ ನ್ಯೂಜಿಲ್ಯಾಂಡ್ ಭರ್ಜರಿ ಯಶಸ್ಸು ಕಂಡಿತು.
ಓದಿ: ಸಿಡ್ನಿಯಲ್ಲಿ ಸಿಡಿದ ನ್ಯೂಜಿಲೆಂಡ್.. ಆಸ್ಟ್ರೇಲಿಯಾ ವಿರುದ್ಧ 89 ರನ್ಗಳ 'ಸೂಪರ್' ಗೆಲುವು