ಮುಂಬೈ: ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ಮುಂಬೈನ ಡಿ.ವೈ ಪಾಟೀಲ್ ಸ್ಟೇಡಿಂಯನಲ್ಲಿ ನಡೆಯುತ್ತಿದೆ. ಈ ಎರಡೂ ತಂಡಗಳನ್ನು ಪ್ರತಿನಿಧಿಸಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಪಂದ್ಯವನ್ನು ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಹೋಲಿಕೆ ಮಾಡಿದ್ದಾರೆ.
ಐಪಿಎಲ್ನ ಅತ್ಯಂತ ಯಶಸ್ವಿ ತಂಡಗಳಾದ ಮುಂಬೈ ಮತ್ತು ಚೆನ್ನೈ ತಂಡಗಳು 2022ರ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಎಲ್ಲಾ ವಿಭಾಗದಲ್ಲೂ ಸಂಪೂರ್ಣ ವಿಫಲವಾಗಿವೆ. ಮುಂಬೈ ಕೊನೆಯ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ಚೆನ್ನೈ 9ನೇ ಸ್ಥಾನದಲ್ಲಿದೆ.
ಸ್ಟಾರ್ ಸ್ಫೋರ್ಟ್ಸ್ ಲೈವ್ ಕಾರ್ಯಕ್ರಮದ ಸಂವಾದದ ವೇಳೆ, 10 ವರ್ಷಗಳ ಕಾಲ ಮುಂಬೈ ಇಂಡಿಯನ್ಸ್ ಡ್ರೆಸ್ಸಿಂಗ್ನಲ್ಲಿ ಕುಳಿತಿದ್ದ ನನಗೆ, ಮೊದಲ ಬಾರಿಗೆ ಸಿಎಸ್ಕೆ ಜರ್ಸಿ ತೊಟ್ಟ ಸಂದರ್ಭದಲ್ಲಿ ತುಂಬಾ ವಿಚಿತ್ರವೆನಿಸಿತ್ತು. ನನಗೆ ಎರಡೂ ತಂಡಗಳೂ ತುಂಬಾ ವಿಶೇಷ. ಈ ಎರಡು ಐಪಿಎಲ್ ದೈತ್ಯ ತಂಡಗಳ ನಡುವಿನ ಪಂದ್ಯವು ಪೈಪೋಟಿ ಅಂಶ ಮತ್ತು ಸ್ಪರ್ಧೆಯ ಮಟ್ಟದಿಂದಾಗಿ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಭಾವನೆಯನ್ನು ನೀಡುತ್ತವೆ ಎಂದು ಭಜ್ಜಿ ಅಭಿಪ್ರಾಯಪಟ್ಟಿದ್ದಾರೆ.
ನಾನು ಮುಂಬೈ ವಿರುದ್ಧದ ಪಂದ್ಯಕ್ಕಾಗಿ ಮೈದಾನಕ್ಕೆ ಇಳಿದಾಗ, ಈ ಪಂದ್ಯ ಬೇಗ ಮುಕ್ತಾಯವಾಗಲಿ ಎಂದು ಪ್ರಾರ್ಥಿಸುತ್ತಿದ್ದೆ, ಏಕೆಂದರೆ ಆ ಪಂದ್ಯದ ಭಾವನಾತ್ಮ ಮತ್ತು ಸಾಕಷ್ಟು ಒತ್ತಡದಿಂದ ಕೂಡಿತ್ತು. ಅದೃಷ್ಟವಶಾತ್ ಆ ಪಂದ್ಯವನ್ನು ನಾವು ಬೇಗ ಗೆದ್ದುಕೊಂಡೆವು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ:ಪೃಥ್ವಿ ಶಾ ಭೀತಿ, ಸ್ವಾರ್ಥವಿಲ್ಲದ ಆಡುವ ಅಮೂಲ್ಯ ಆಟಗಾರ: ಸಂಜಯ್ ಮಂಜ್ರೇಕರ್