ಸೇಂಟ್ ಕಿಟ್ಸ್: 9ನೇ ಆವೃತ್ತಿ ಕೆರಿಬಿಯನ್ ಪ್ರೀಮಿಯರ್ ಲೀಗ್(CPL) ಆರಂಭಗೊಂಡಿದ್ದು, ಪಂದ್ಯವೊಂದರಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಸಿಡಿಸಿರುವ ಸಿಕ್ಸ್ವೊಂದು ನೇರವಾಗಿ ಮೈದಾನದ ಹೊರಗಿದ್ದ ಕಿಟಕಿಯ ಗ್ಲಾಸ್ಗೆ ಹೋಗಿ ಬಡೆದಿರುವ ಕಾರಣ ಅದು ಪುಡಿಪುಡಿಯಾಗಿದೆ. ಸೇಂಟ್ ಕಿಟ್ಸ್ ಹಾಗೂ ಬಾರ್ಡೊಡ್ಸ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಈ ಪಂದ್ಯದಲ್ಲಿ ಸೇಂಟ್ ಕಿಟ್ಸ್ 21ರನ್ಗಳ ಗೆಲುವು ದಾಖಲು ಮಾಡಿದೆ.
-
A SMASHING HIT by the Universe Boss @henrygayle sees him with the @OmegaXL hit from match 2. #CPL21 #BRvSKNP #CricketPlayedLouder #OmegaXL pic.twitter.com/8001dFwNWQ
— CPL T20 (@CPL) August 27, 2021 " class="align-text-top noRightClick twitterSection" data="
">A SMASHING HIT by the Universe Boss @henrygayle sees him with the @OmegaXL hit from match 2. #CPL21 #BRvSKNP #CricketPlayedLouder #OmegaXL pic.twitter.com/8001dFwNWQ
— CPL T20 (@CPL) August 27, 2021A SMASHING HIT by the Universe Boss @henrygayle sees him with the @OmegaXL hit from match 2. #CPL21 #BRvSKNP #CricketPlayedLouder #OmegaXL pic.twitter.com/8001dFwNWQ
— CPL T20 (@CPL) August 27, 2021
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸೇಂಟ್ ಕಿಟ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ನಷ್ಟಕ್ಕೆ 175ರನ್ಗಳಿಕೆ ಮಾಡಿತು. ತಂಡದ ಪರ ರುದರ್ಪೋರ್ಡ್ 53ರನ್, ಬ್ರಾವೋ 47ರನ್ಗಳಿಕೆ ಮಾಡಿದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಕಣಕ್ಕಿಳಿದ ಗೇಲ್ ಕೇವಲ 12ರನ್ಗಳಿಕೆ ಮಾಡಿದ್ರೂ ಸಿಕ್ಸರ್ ಸಿಡಿಸಿ ಅಭಿಮಾನಿಗಳ ಗಮನ ಸೆಳೆದರು. ಪಂದ್ಯದ 5ನೇ ಓವರ್ನಲ್ಲೇ ಗೇಲ್ ಭರ್ಜರಿ ಸಿಕ್ಸರ್ ಸಿಡಿಸಿದರು.
ಇದನ್ನೂ ಓದಿರಿ: 3ನೇ ಟೆಸ್ಟ್: 432ರನ್ಗಳಿಗೆ ಆಲೌಟ್ ಆದ ಇಂಗ್ಲೆಂಡ್.. 354ರನ್ಗಳ ಭರ್ಜರಿ ಮುನ್ನಡೆ
176 ರನ್ಗಳ ಗುರಿ ಬೆನ್ನತ್ತಿದ್ದ ಬಾರ್ಡೊಡ್ಸ್ ತಂಡ 20 ಓವರ್ಗಳಲ್ಲಿ 7 ವಿಕೆಟ್ನಷ್ಟಕ್ಕೆ 154ರನ್ಗಳಿಕೆ ಮಾಡಲು ಮಾತ್ರ ಶಕ್ತವಾಗಿ, 21 ರನ್ಗಳ ಸೋಲು ಕಂಡಿದೆ.