ETV Bharat / sports

ದ್ರಾವಿಡ್​ ಬ್ಯಾಟಿಂಗ್​​ನಂತೆಯೇ ಅವರ ಕೋಚಿಂಗ್ ಕೂಡ ಸುರಕ್ಷಿತ ಮತ್ತ ಸದೃಢವಾಗಿರಲಿದೆ : ಗವಾಸ್ಕರ್​ - ಭಾರತದ ಮುಖ್ಯ ಕೋಚ್

ರೋಹಿತ್ ಶರ್ಮಾ(Rohit Sharm) ಮತ್ತು ದ್ರಾವಿಡ್ ಇಬ್ಬರ ನಡುವೆ ಸಾಮ್ಯತೆಯಿದೆ ಎನ್ನುವುದನ್ನು ಹೈಲೈಟ್ ಮಾಡಿದ ಲೆಜೆಂಡರಿ ಬ್ಯಾಟರ್​, ಇಬ್ಬರು ಒಂದುಗೂಡಿ ತುಂಬಾ ಸುಲಭವಾಗಿ ಕೆಲಸ ಮಾಡಲಿದ್ದಾರೆ. ರೋಹಿತ್​ ಅವರಲ್ಲೂ ದ್ರಾವಿಡ್​ ಅವರಲ್ಲಿದ್ದ ಕೆಲವು ಲಕ್ಷಣಗಳಿವೆ..

Gavaskar says Dravid will handle coaching like his safe and strong batting
ಸುನೀಲ್ ಗವಾಸ್ಕರ್ ರಾಹುಲ್ ದ್ರಾವಿಡ್​
author img

By

Published : Nov 17, 2021, 3:50 PM IST

Updated : Nov 17, 2021, 4:00 PM IST

ನವದೆಹಲಿ : ಹೊಸದಾಗಿ ಭಾರತ ತಂಡದ ಮುಖ್ಯ ಕೋಚ್(head coach of the Indian team )​ ಆಗಿ ನೇಮಕಗೊಂಡಿರುವ ರಾಹುಲ್​ ದ್ರಾವಿಡ್(Rahul Dravid) ತಮ್ಮ ಸುರಕ್ಷಿತ ಮತ್ತು ಸದೃಢ ಬ್ಯಾಟಿಂಗ್​ನಂತೆಯೇ ತಮ್ಮ ಕೋಚ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ ಎಂದು ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್(Sunil Gavaskar)​ ಅಭಿಪ್ರಾಯಪಟ್ಟಿದ್ದಾರೆ.

ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ರವಿ ಶಾಸ್ತ್ರಿ(Ravi Shastri) ಅವರ ಕೋಚಿಂಗ್ ಅವಧಿ ಮುಕ್ತಾಯವಾಗಿದೆ. ಆ ಸ್ಥಾನಕ್ಕೆ ಕಳೆದ ತಿಂಗಳು ಕನ್ನಡಿಗ ರಾಹುಲ್ ದ್ರಾವಿಡ್​ ಆಯ್ಕೆಯಾಗಿದ್ದರು.

ರಾಹುಲ್ ದ್ರಾವಿಡ್​ ಆಡುತ್ತಿದ್ದಾಗ, ನಾವೆಲ್ಲಾ ಆತ ಕ್ರೀಸ್​ನಲ್ಲಿ ಇರುವವರೆಗೂ ಭಾರತದ ಬ್ಯಾಟಿಂಗ್ ಸುರಕ್ಷಿತ ಮತ್ತು ಬಲಿಷ್ಠವಾಗಿರಲಿದೆ ಎಂದು ಚಿಂತಿಸುತ್ತಿದ್ದೆವು.

ಇದೇ ಕಾರಣದಿಂದ ನಾನು ಅವರು ತಮ್ಮ ಹೊಸ ಮುಖ್ಯ ಕೋಚ್​ ಜವಾಬ್ದಾರಿಯನ್ನು ತಮ್ಮ ಬ್ಯಾಟಿಂಗ್​ ಮಾದರಿಯಲ್ಲೇ ನಿರ್ವಹಿಸಿಕೊಂಡು ಹೋಗಲಿದ್ದಾರೆ ಎಂದು ನಂಬಿದ್ದೇನೆ ಎಂದು ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ 10 ಸಾವಿರ ರನ್​ಗಳಿಸಿದ ಬ್ಯಾಟರ್ ಗವಾಸ್ಕರ್​ ಸ್ಟಾರ್​ ಸ್ಪೋರ್ಟ್ಸ್​ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ರೋಹಿತ್ ಶರ್ಮಾ(Rohit Sharma) ಮತ್ತು ದ್ರಾವಿಡ್ ಇಬ್ಬರ ನಡುವೆ ಸಾಮ್ಯತೆಯಿದೆ ಎನ್ನುವುದನ್ನು ಹೈಲೈಟ್ ಮಾಡಿದ ಲೆಜೆಂಡರಿ ಬ್ಯಾಟರ್​, ಇಬ್ಬರು ಒಂದು ಗೂಡಿ ತುಂಬಾ ಸುಲಭವಾಗಿ ಕೆಲಸ ಮಾಡಲಿದ್ದಾರೆ. ರೋಹಿತ್​ ಅವರಲ್ಲೂ ದ್ರಾವಿಡ್​ ಅವರಲ್ಲಿದ್ದ ಕೆಲವು ಲಕ್ಷಣಗಳಿವೆ.

ಹಾಗಾಗಿ, ಅವರಿಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯಲಿದೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಅವರಿಬ್ಬರು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಗವಾಸ್ಕರ್ ಹೇಳಿದ್ದಾರೆ.

ಭಾರತ ಮತ್ತು ನ್ಯೂಜಿಲ್ಯಾಂಡ್( India vs New Zealand​) ತಂಡಗಳ ನಡುವೆ ನವೆಂಬರ್​ 17,19 ಮತ್ತು 21ರಂದು ಟಿ20 ಮತ್ತು ನವೆಂಬರ್ 25ರಿಂದ 29 ಹಾಗೂ ಡಿಸೆಂಬರ್ 3ರಿಂದ 7ರವರೆಗೆ ಕಾನ್ಪುರ ಮತ್ತು ಮುಂಬೈನಲ್ಲಿ ಎರಡು ಟೆಸ್ಟ್​ ಪಂದ್ಯಗಳು ನಡೆಯಲಿವೆ.

ಇದನ್ನು ಓದಿ:ಮುಂಬರುವ ICC ಟೂರ್ನಮೆಂಟ್​ಗಾಗಿ ರಣತಂತ್ರ.. ಹೊಸ ಕೋಚ್​, ಹೊಸ ನಾಯಕ ಹೇಳಿದ್ದೇನು!?

Last Updated : Nov 17, 2021, 4:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.