ETV Bharat / sports

Gautam Gambhir: ಕಪಿಲ್ ದೇವ್ ಕಿಡ್ನಾಪ್..! ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದ ಅಸಲಿಯತ್ತೇನು? - ETV Bharath Kannada news

ಸಾಮಾಜಿಕ ಜಾಲತಾಣದಲ್ಲಿ ಭಾರತದ ಮಾಜಿ ನಾಯಕ ಕಪಿಲ್ ದೇವ್ ಅವರಂತೆ ಕಾಣುವ ವ್ಯಕ್ತಿ ಕಿಡ್ನಾಪ್ ಆಗುತ್ತಿರುವ ವಿಡಿಯೋ ವೈರಲ್​ ಆಗಿದೆ.

gautam gambhir
gautam gambhir
author img

By ETV Bharat Karnataka Team

Published : Sep 25, 2023, 8:49 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಭಾರತ ತಂಡದ ಮಾಜಿ ಎಡಗೈ ಬ್ಯಾಟ್ಸ್‌ಮನ್ ಮತ್ತು ಬಿಜೆಪಿ ಸಂಸದ ಗೌತಮ್ ಗಂಭೀರ್ ಕೂಡ ತಮ್ಮ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಇಬ್ಬರು ವ್ಯಕ್ತಿಗಳು ಕಪಿಲ್ ದೇವ್ ಅವರ ಬಾಯಿಗೆ ಬಟ್ಟೆ ಕಟ್ಟಿ ಕೋಣೆಗೆ ಕರೆದೊಯ್ದಿದ್ದಾರೆ. ಈ ವಿಡಿಯೋ ನೋಡಿದರೆ ಯಾರೋ ಕಪಿಲ್ ದೇವ್ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಅನಿಸುತ್ತಿದೆ.

ಗೌತಮ್ ಗಂಭೀರ ವಿಡಿಯೋವನ್ನು ಹಂಚಿಕೊಂಡಿದ್ದಾರೆ: ಎಕ್ಸ್​ ಆ್ಯಪ್​ನಲ್ಲಿ ಗೌತಮ್ ಗಂಭೀರ್ ಹಂಚಿಕೊಂಡು, ಬೇರೆ ಯಾರಾದರೂ ಈ ಕ್ಲಿಪ್ ಅನ್ನು ಸ್ವೀಕರಿಸಿದ್ದಾರೆಯೇ? ಇದು ನಿಜವಾಗಿಯೂ ಸಂಭವಿಸುವುದಿಲ್ಲ ಎಂದು ಭಾವಿಸುತ್ತೇವೆ ಮತ್ತು ಕಪಿಲ್ ಪಾಜಿ ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಮೂಲದ ಬಗ್ಗೆ ಯಾರಿಗೂ ಇನ್ನೂ ಮಾಹಿತಿ ತಿಳಿದು ಬಂದಿಲ್ಲ. ಮಾಜಿ ಕ್ರಿಕೆಟಿಗರಾಗಿ ಗಂಭೀರ್​ ವಿಡಿಯೋ ಶೇರ್​ ಮಾಡಿದ ನಂತರ ಟ್ವಿಟರ್​ನಲ್ಲಿ ಇನ್ನಷ್ಟೂ ವೈರಲ್ ಆಯಿತು.

ಇದಕ್ಕೆ ಹಲವರು ಜಾಹೀರಾತಿಗಾಗಿ ಮಾಡಿರುವ ವಿಡಿಯೋದಂತಿದೆ ಎಂದಿದ್ದಾರೆ. ನೀಲಂ ಚೌಧರಿ ಎಂಬುವವರು, ನೀವು ಕೂಡ ಈ ವಿಡಿಯೋವನ್ನು ಯಾವುದೇ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ನೋಡುತ್ತಿದ್ದರೆ, ಈ ಕ್ರಿಕೆಟಿಗ ಕಪಿಲ್ ಅಲ್ಲ ಎಂದು ನಾನು ನಿಮಗೆ ಹೇಳುತ್ತೇನೆ, ಆದ್ದರಿಂದ ದಯವಿಟ್ಟು ವಿಡಿಯೋವನ್ನು ತಪ್ಪಾಗಿ ವೈರಲ್ ಮಾಡಬೇಡಿ? ಎಂದಿದ್ದಾರೆ. ಅಜೀಂ ಕಾಶಿ ಎಂಬುವವರು, ಲಾಲ್ಸಲಾಮ್ ಶೂಟಿಂಗ್ ಸ್ಪಾಟ್ ವಿಡಿಯೋ ಲೀಕ್! ಮೊಯ್ದೀನ್ ಭಾಯ್ ಅವರು ಕಪಿಲ್‌ದೇವ್ ಅವರನ್ನು ರಕ್ಷಿಸಲಿದ್ದಾರೆ ಎಂದು ಕಮೆಂಟ್​ ಮಾಡಿದ್ದಾರೆ.

ಫೆರ್ರಿ ಎಂಬ ಎಕ್ಸ್​ ಆ್ಯಪ್​ ಬಳಕೆದಾರ ಹರ್ಷ ಭೋಗ್ಲೆ ಮತ್ತು ಗೌತಮ್ ಗಂಭೀರ್ ಅವರು ಕಪಿಲ್ ದೇವ್ ಅವರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಲ್ಲವನ್ನು ಗೇಲಿ ಮಾಡುವ ಇಂತಹ ಜಾಹೀರಾತು ಪ್ರಚಾರಗಳನ್ನು ನಿಲ್ಲಿಸಬೇಕು. ಜನರು ಗಂಭೀರ ಅಪಘಾತಗಳನ್ನು ಹಾಸ್ಯದ ಘಟನೆಗಳೆಂದು ಪರಿಗಣಿಸಲು ಪ್ರಾರಂಭಿಸುವ ಮೊದಲು ಎಂದು ಪೋಸ್ಟ್​ ಮಾಡಿದ್ದಾರೆ.

  • Earlier Harsha Bhogle and today Gautam Gambhir along with Kapil Dev,
    Such ad campaigns making mockery of everything should be stopped before people start taking even serious mishap like jokes. pic.twitter.com/i57KdtQd0P

    — feryy (@ffspari) September 25, 2023 " class="align-text-top noRightClick twitterSection" data=" ">

ಇದು ಕಪಿಲ್ ದೇವ್ ಅವರದೇ ವಿಡಿಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಇದು ಕಪಿಲ್ ದೇವ್ ಆಗಿದ್ದರೂ, ಬಹುಶಃ ಅವರು ಯಾವುದೋ ಜಾಹೀರಾತಿಗಾಗಿ ಚಿತ್ರೀಕರಣ ಮಾಡುತ್ತಿದ್ದಾರೆ. ಇಂತಹ ಊಹಾಪೋಹಗಳನ್ನೆಲ್ಲ ಜನ ಮಾಡುತ್ತಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಕಪಿಲ್ ದೇವ್ ಅವರ ಮ್ಯಾನೇಜರ್ ರಾಜೇಶ್ ಪುರಿ ಈ ವಿಷಯದ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಈ ವಿಡಿಯೋ ಜಾಹೀರಾತಿನ ಭಾಗವಾಗಿದೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Asian Games 2023: ಚಿನ್ನಕ್ಕೆ ಗುರಿ ಇಟ್ಟಿದ್ದ ಭಾರತದ ರೋಹನ್‌ ಬೋಪಣ್ಣ, ಯೂಕಿ ಭಾಂಬ್ರಿಗೆ ನಿರಾಸೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.