ನವದೆಹಲಿ: ವಿಶ್ವಕಪ್ ಆರಂಭಕ್ಕೆ ಇನ್ನು ಬೆರಳೆಣಿಕೆಯ ದಿನಗಳು ಬಾಕಿ ಇರುವಾಗ ಯಾವ ಆಟಗಾರ ಉತ್ತಮ ಪ್ರದರ್ಶನ ನೀಡುವರು ಎಂಬ ನಿರೀಕ್ಷೆ ಎಲ್ಲರಲ್ಲಿದೆ. ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್ ಮತ್ತು ಜೋ ರೂಟ್ ಅವರನ್ನು ಕ್ರಿಕೆಟ್‌ನ ಫ್ಯಾಬ್ ಫೋರ್ ಎಂದು ಕರೆಯಲಾಗುತ್ತಿದೆ. ಈ ನಾಲ್ವರು ಬ್ಯಾಟರ್ಗಳ ಮೇಲೆ ಹೆಚ್ಚಿನ ನಿರೀಕ್ಷೆ ಜಗತ್ತೇ ಇಟ್ಟಿದೆ. ಅಲ್ಲದೇ ವಿರಾಟ್ ತವರಿನಲ್ಲಿ ಆಡುತ್ತಿರುವುದರಿಂದ ಅವರ ಬ್ಯಾಟಿಂಗ್ ಮೇಲೆ ಎಲ್ಲರು ಕಣ್ಣಿಟ್ಟಿದ್ದಾರೆ. ಏಷ್ಯಾಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಗಳಿಸಿದ ಶತಕ ಅವರ ಮೇಲಿನ ಭರವಸೆಯನ್ನು ಇನ್ನಷ್ಟೂ ಹೆಚ್ಚಿಸಿದೆ.
ಹೀಗಿರುವಾಗ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಈ ನಾಲ್ವರು ಆಟಗಾರರ ಹೊರತಾಗಿ, 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಶ್ರೇಷ್ಠ ಬ್ಯಾಟ್ಸ್‌ಮನ್ ಆಗುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಸಿಸಿ ನಂ.1 ಶ್ರೇಯಾಂಕಿತ ಬ್ಯಾಟರ್ ಕಳೆದ ಒಂದು ವರ್ಷದಿಂದ ಏಕದಿನ ಮಾದರಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಅವರು ಏಷ್ಯಾಕಪ್ನಲ್ಲಿ ಬಲಿಷ್ಠ ತಂಡಗಳ ಮುಂದೆ ಮಂಕಾದರೂ ನೇಪಾಳದ ವಿರುದ್ಧ ಗಮನಾರ್ಹ 151 ರನ್ನ ಇನ್ನಿಂಗ್ಸ್ ಕಟ್ಟಿದ್ದಾರೆ. ನಾಯಕತ್ವ ಜವಾಬ್ದಾರಿಯ ಜೊತೆಗೆ ಬಾಬರ್ ಯಾವಾಗ ಬೇಕಾದರೂ ತಂಡಕ್ಕೆ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ.
-
Gambhir said "Babar Azam can set this World Cup on fire. I have seen a lot of players with so much time to bat. I think that Rohit, Kohli, Williamson, Root are there but Babar Azam has a different level of capability". [Star Sports] pic.twitter.com/kDwsEA8G3A
— Johns. (@CricCrazyJohns) September 23, 2023 " class="align-text-top noRightClick twitterSection" data="
">Gambhir said "Babar Azam can set this World Cup on fire. I have seen a lot of players with so much time to bat. I think that Rohit, Kohli, Williamson, Root are there but Babar Azam has a different level of capability". [Star Sports] pic.twitter.com/kDwsEA8G3A
— Johns. (@CricCrazyJohns) September 23, 2023Gambhir said "Babar Azam can set this World Cup on fire. I have seen a lot of players with so much time to bat. I think that Rohit, Kohli, Williamson, Root are there but Babar Azam has a different level of capability". [Star Sports] pic.twitter.com/kDwsEA8G3A
— Johns. (@CricCrazyJohns) September 23, 2023
ಏಷ್ಯನ್ ರಾಷ್ಟ್ರಗಳ ವಿಶ್ವಕಪ್ ಎಂದೇ ಕರೆಯಬಹುದಾದ ಏಷ್ಯಾಕಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಭಾರತವು ಪಾಕಿಸ್ತಾನ ಮತ್ತು ಶ್ರೀಲಂಕಾ ಎರಡನ್ನೂ ಸೋಲಿಸಿ ಏಷ್ಯಾಕಪ್ ಫೈನಲ್ ತಲುಪಿತು ಮತ್ತು ನಂತರ ಶ್ರೀಲಂಕಾವನ್ನು ಸೋಲಿಸಿ ದಾಖಲೆಯ 8 ನೇ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತು. ಭಾರತದ ಯುವ ಬ್ಯಾಟರ್ಗಳು ಏಷ್ಯಾಕಪ್ನಲ್ಲಿ ತಮ್ಮ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ.
ಏಷ್ಯಾಕಪ್ನಲ್ಲಿ ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಆಟವನ್ನು ಕಂಡಿರುವ ಗೌತಮ್ ಬಳಿ ವಿಶ್ವಕಪ್‌ನಲ್ಲಿ ಯಾವ ಬ್ಯಾಟರ್ನ್ನು ನೋಡಲು ಹೆಚ್ಚು ಇಷ್ಟ ಪಡುತ್ತೀರಿ ಎಂದು ಕೇಳಲಾಯಿತು. ಅದಕ್ಕೆ ಅವರು'ಬಾಬರ್ ಅಜಮ್ ಈ ವಿಶ್ವಕಪ್‌ನಲ್ಲಿ ಸಿಡಿದೇಳಬಹುದು. ಬ್ಯಾಟಿಂಗ್ ಮಾಡಲು ಸಾಕಷ್ಟು ಸಮಯವನ್ನು ಹೊಂದಿರುವ ಅನೇಕ ಆಟಗಾರರನ್ನು ನಾನು ನೋಡಿದ್ದೇನೆ. ನನ್ನ ಪ್ರಕಾರ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್ ಮತ್ತು ಜೋ ರೂಟ್ ಇದ್ದಾರೆ. ಆದರೆ ಬಾಬರ್ ಅಜಮ್ ಅವರ ಸಾಮರ್ಥ್ಯವು ವಿಭಿನ್ನ ಮಟ್ಟದಲ್ಲಿದೆ" ಎಂದಿದ್ದಾರೆ.
ನಂ.1 ಬ್ಯಾಟರ್ ಬಾಬರ್: ಕ್ರಿಕೆಟ್‌ನ ಏಕದಿನ ಸ್ವರೂಪದಲ್ಲಿ ನಂಬರ್ 1 ಸ್ಥಾನದಲ್ಲಿರುವ ಬಾಬರ್, 2023 ರಲ್ಲಿ 15 ಇನ್ನಿಂಗ್ಸ್‌ಗಳಲ್ಲಿ 49.66 ರ ಅದ್ಭುತ ಸರಾಸರಿಯೊಂದಿಗೆ 745 ರನ್ ಗಳಿಸಿದ್ದಾರೆ. ಇದರಲ್ಲಿ 2 ಶತಕ ಮತ್ತು 6 ಅರ್ಧ ಶತಕಗಳು ಸೇರಿವೆ. ಅಜಮ್ ಟಿ20 ಯಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ರಿಜ್ವಾನ್ ನಂತರ ಮೂರನೇ ಸ್ಥಾನದಲ್ಲಿದ್ದಾರೆ.
ಅಕ್ಟೋಬರ್ 6 ರಂದು ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ನ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ ಆಡಲಿದೆ. ಈ ಪಂದ್ಯಕ್ಕೂ ಮುನ್ನ ಪಾಕ್ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಎರಡು ಅಭ್ಯಾಸ ಪಂದ್ಯಗಳಲ್ಲಿ ಕಾಣಿಸಿಕೊಳ್ಳಲಿದೆ. 2019ರ ವಿಶ್ವಕಪ್ ಫೈನಲಿಸ್ಟ್ಗಳಾದ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಅಕ್ಟೋಬರ್ 5 ರಂದು ಉದ್ಘಾಟನಾ ಪಂದ್ಯವನ್ನು ಆಡಲಿದೆ.