ETV Bharat / sports

ಬಾಂಬೆ ಹೈಕೋರ್ಟ್​​ ಮೆಟ್ಟಿಲೇರಿದ ಗಂಗೂಲಿ... ಯಾವ ಕಾರಣಕ್ಕಾಗಿ? - ಬಾಂಬೆ ಹೈಕೋರ್ಟ್​​ ಮೆಟ್ಟಿಲೇರಿದ ಗಂಗೂಲಿ

ಬಡ್ಡಿ ಸಮೇತವಾಗಿ ತಮಗೆ 36 ಕೋಟಿ ರೂ. ಬರಬೇಕಾಗಿದ್ದು, ಎರಡು ಕಂಪನಿಗಳು ಈ ಹಣ ಪಾವತಿ ಮಾಡುವವರೆಗೆ ಯಾವುದೇ ರೀತಿಯ ವಹಿವಾಟು ನಡೆಸದಂತೆ ನಿರ್ಬಂಧ ಹಾಕಬೇಕೆಂದು ಗಂಗೂಲಿ ಮನವಿ ಮಾಡಿದ್ದಾರೆ.

Ganguly
Ganguly
author img

By

Published : Jul 13, 2021, 3:57 AM IST

ನವದೆಹಲಿ: ಭಾರತೀಯ ಕ್ರಿಕೆಟ್​ ಮಂಡಳಿ(ಬಿಸಿಸಿಐ) ಅಧ್ಯಕ್ಷ ಸೌರವ್​ ಗಂಗೂಲಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವ್ಯವಸ್ಥಾಪನಾ ಕಂಪನಿಗಳು ನೀಡಬೇಕಾಗಿರುವ ಪರಿಹಾರ ಮೊತ್ತ ಬಿಡುಗಡೆ ಮಾಡುವಂತೆ ಅವರು ಕೇಳಿಕೊಂಡಿದ್ದಾರೆ.

ಈ ಹಿಂದೆ ಅವರು ತಮ್ಮ ನಿರ್ವಹಣಾ ಕಂಪನಿಗಳಾಗಿದ್ದ ಪರ್ಸೆಪ್ಟ್​​ ಟ್ಯಾಲೆಂಟ್​ ಮ್ಯಾನೇಜ್​ಮೆಂಟ್​ ಮತ್ತು ಪರ್ಸೆಪ್ಟ್​ ಡಿ ಮಾರ್ಕ್​ ಇಂಡಿಯಾ ಲಿಮಿಟೆಡ್​​​ ಗಂಗೂಲಿಗೆ ಪರಿಹಾರ ನೀಡುವಂತೆ ನ್ಯಾಯಮಂಡಳಿ 2018ರಲ್ಲಿ ಆದೇಶ ನೀಡಿತ್ತು. ಆದರೆ ಇಲ್ಲಿಯವರೆಗೆ ಪರಿಹಾರ ಸಿಗದ ಕಾರಣ ಇದೀಗ ಬಾಂಬೆ ಹೈಕೋರ್ಟ್ ಮೊರೆಹೋಗಿದ್ದಾರೆ. ಜೊತೆಗೆ ಎರಡು ಕಂಪನಿಗಳು ತಮ್ಮ ಆಸ್ತಿ ಬಹಿರಂಗಪಡಿಸುವಂತೆ ಕೋರಿದ್ದಾರೆ.

ಇದನ್ನೂ ಓದಿರಿ: ಓರ್ವ ಯುವತಿಗೋಸ್ಕರ ಇಬ್ಬರು ಸಾವು, ಆಸ್ಪತ್ರೆ ಸೇರಿದ ಮತ್ತಿಬ್ಬರು... ಏನಿದು ಲವ್​ ಕಹಾನಿ?

ಎರಡು ಕಂಪನಿಗಳಿಂದ ತಮಗೆ ಬಡ್ಡಿ ಸಮೇತವಾಗಿ 36 ಕೋಟಿ ರೂ ಬರಬೇಕಾಗಿದ್ದು, ಒಟ್ಟು ಪರಿಹಾರದ ಮೊತ್ತ ನೀಡುವಂತೆ ಸೂಚಿಸಬೇಕು ಎಂದು ತಿಳಿಸಿದ್ದಾರೆ. ಬಿಸಿಸಿಐ ಅಧ್ಯಕ್ಷರು ಸಲ್ಲಿಕೆ ಮಾಡಿರುವ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್​​ ಜುಲೈ 26ರಂದು ಕೈಗೆತ್ತಿಕೊಳ್ಳಲಿದೆ. ಇದರ ಬೆನ್ನಲ್ಲೇ ಮಾತನಾಡಿರುವ ಕಂಪನಿಗಳ ಪರ ವಕೀಲ ಶಾರ್ದೂಲ್​ ಸಿಂಗ್​, ಇದೇ 20ರೊಳಗಾಗಿ ಎರಡು ಕಂಪನಿ ತಮ್ಮ ಆಸ್ತಿ ಬಹಿರಂಗಪಡಿಸಲಿವೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.