ಢಾಕಾ: ನ್ಯೂಜಿಲ್ಯಾಂಡ್ ಬ್ಯಾಟ್ಸ್ಮನ್ ಫಿನ್ ಅಲೆನ್ ಬಾಂಗ್ಲಾದೇಶಕ್ಕೆ ಆಗಮಿಸುತ್ತಿದ್ದಂತೆ ನಡೆಸಿದ ಕೋವಿಡ್ 19 ಪರೀಕ್ಷೆಯಲ್ಲಿ ಪಾಸಿಟಿವ್ ಪಡೆದಿದ್ದಾರೆ ಎಂದು ಅವರ ದೇಶದ ಕ್ರಿಕೆಟ್ ಮಂಡಳಿ ಮಂಗಳವಾರ ತಿಳಿಸಿದೆ.
ಅಲೆನ್ ಇತ್ತೀಚೆಗೆ ಇಂಗ್ಲೆಂಡ್ನಲ್ಲಿ ಮುಕ್ತಾಯಗೊಂಡ ದಿ ಹಂಡ್ರೆಂಡ್ ಲೀಗ್ನಲ್ಲಿ ಬರ್ಮಿಂಗ್ಹ್ಯಾಮ್ ತಂಡದ ಪರ ಆಡಿದ್ದರು. ಅವರು ಅಲ್ಲಿ ಸಂಪೂರ್ಣ ಲಸಿಕೆ ಪಡೆದುಕೊಂಡಿದ್ದಲ್ಲದೇ, ಬಾಂಗ್ಲಾದೇಶಕ್ಕೆ ಬರುವ 48 ಗಂಟೆಗಳ ಹಿಂದೆ ನಡೆಸಿದ ಎಲ್ಲ ಪರೀಕ್ಷೆಗಳಲ್ಲಿ ನೆಗೆಟಿವ್ ಪಡೆದಿದ್ದರು.
"ಕೆಲವು ಕೋವಿಡ್ ಸಾಂಕ್ರಾಮಿಕದ ಲಕ್ಷಣಗಳು ಕಂಡು ಬಂದಿರುವುದರಿಂದ ವೈದ್ಯರ ಸಲಹೆಯ ಮೇರೆಗೆ ಅವರನ್ನು ತಂಡದ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ ಎಂದು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.
"ಅಲೆನ್ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಮುಖ್ಯ ವೈದ್ಯಾಧಿಕಾರಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೊತೆಗೆ NZC ಮುಖ್ಯ ವೈದ್ಯಾಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಕ್ವಾರಂಟೈನ್ ವೇಳೆ ತಂಡದ ವೈದ್ಯ ಪ್ಯಾಟ್ ಮೆಕ್‌ಹ್ಯೂಗ್ ಅವರ ಮೇಲ್ವಿಚಾರಣೆಯಲ್ಲಿರಲಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅವರು ಕ್ವಾರಂಟೈನ್ ಅವದಿ ಮುಗಿದು, ನಂತರ ಸತತ ಎರಡು ಕೋವಿಡ್ 19 ಟೆಸ್ಟ್ಗಳಲ್ಲಿ ನೆಗೆಟಿವ್ ಪಡೆದರೆ ಮತ್ತೆ ತಂಡವನ್ನು ಸೇರಿಕೊಳ್ಳಬಹುದಾಗಿದೆ. ನ್ಯೂಜಿಲ್ಯಾಂಡ್ ಬಾಂಗ್ಲಾದೇಶದ ವಿರುದ್ಧ 5 ಪಂದ್ಯಗಳ ಟಿ-20 ಸರಣಿಯನ್ನಾಡಲಿದೆ. ಸೆಪ್ಟೆಂಬರ್ 1 ರಿಂದ ಸರಣಿ ಆರಂಭವಾಗಲಿದೆ.
ಇದನ್ನು ಓದಿ:ಲಾರ್ಡ್ಸ್ನಲ್ಲಿ ಬುಮ್ರಾ ನನ್ನನ್ನು ಔಟ್ ಮಾಡಲು ಪ್ರಯತ್ನಿಸಿದಂತೆ ಕಾಣಲಿಲ್ಲ: ಆ್ಯಂಡರ್ಸನ್