ಮುಂಬೈ: ಟೀಮ್ ಇಂಡಿಯಾದ ದಿಗ್ಗಜ ಆಟಗಾರ ವಿರಾಟ್ ಕೊಹ್ಲಿ 50ನೇ ಏಕದಿನ ಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಕೊಹ್ಲಿ, ವಿಶ್ವದಾಖಲೆಯ ಶತಕ ಸಿಡಿಸಿ ಅಬ್ಬರಿಸಿದರು. ವಿರಾಟ್ ಶ್ರೇಷ್ಠ ಸಾಧನೆಯನ್ನು ವಿಶ್ವದೆಲ್ಲೆಡೆ ಕೊಂಡಾಡಲಾಗುತ್ತಿದೆ.
ನ್ಯೂಜಿಲೆಂಡ್ ವಿರುದ್ಧ ವಿಶ್ವಕಪ್ 2023 ರ ಸೆಮಿ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ ಏಕದಿನ ಕ್ರಿಕೆಟ್ನ ಐವತ್ತನೇ ಶತಕ ಸಿಡಿಸುವ ಮೂಲಕ ಶ್ರೇಷ್ಠ ಕ್ರಿಕೆಟ್ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು. ಕೊಹ್ಲಿಯ ಈ ಅಸಾಮಾನ್ಯ ಸಾಧನೆ ಮತ್ತು ವಿಶೇಷ ಉತ್ಸಾಹವನ್ನು ಟೆನಿಸ್ ದಿಗ್ಗಜ ನೊವಾಕ್ ಜೊಕೊವಿಕ್ ಸೇರಿದಂತೆ ಕ್ರಿಕೆಟ್ ಜಗತ್ತು ಒಗ್ಗಟ್ಟಿನಿಂದ ಶ್ಲಾಘಿಸಿದೆ.
-
Congratulations @imVkohli 🎊 Legendary https://t.co/3TgMXkbWcx
— Novak Djokovic (@DjokerNole) November 15, 2023 " class="align-text-top noRightClick twitterSection" data="
">Congratulations @imVkohli 🎊 Legendary https://t.co/3TgMXkbWcx
— Novak Djokovic (@DjokerNole) November 15, 2023Congratulations @imVkohli 🎊 Legendary https://t.co/3TgMXkbWcx
— Novak Djokovic (@DjokerNole) November 15, 2023
ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡ ನೊವಾಕ್ ಜೊಕೊವಿಕ್ ಅವರು ಕೊಹ್ಲಿಗೆ ಅಭಿನಂದನೆಯ ಸಂದೇಶ ರವಾನಿಸಿದ್ದಾರೆ. "ಅಭಿನಂದನೆಗಳು ವಿರಾಟ್, ಲೆಜೆಂಡರಿ" ಎಂದು ಬರೆದುಕೊಂಡಿದ್ದಾರೆ. ಲಿಟಲ್ ಮಾಸ್ಟರ್ ಸುನಿಲ್ ಗವಾಸ್ಕರ್ ಕೂಡ ಸೂಪರ್ ಹ್ಯೂಮನ್ ವಿರಾಟ್ ಕೊಹ್ಲಿಯನ್ನು ಶ್ಲಾಘಿಸಿದ್ದಾರೆ.
ಟೀಮ್ ಇಂಡಿಯಾದ ದಿಗ್ಗಜ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಕೂಡ ವಿರಾಟ್ ಕೊಹ್ಲಿ ಸಾಧನೆಯ ಬಗ್ಗೆ ಭಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ಸಂದರ್ಭದಲ್ಲಿ ಕೊಹ್ಲಿಯ ಅಗಲಿದ ತಂದೆ ಈ ಸಾಧನೆಯಿಂದ ಸಂತೋಷಗೊಂಡಿರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: 'ನಿಜವಾಗಿಯೂ ನೀವು ದೇವರ ಮಗು': ಪತಿ ವಿರಾಟ್ ಕೊಹ್ಲಿಯನ್ನು ಮನಸಾರೆ ಹೊಗಳಿದ ಅನುಷ್ಕಾ ಶರ್ಮಾ
"ವಿರಾಟ್ ಕೊಹ್ಲಿ ಅವರ ದಿವಂಗತ ತಂದೆ ಇಂದು ತುಂಬಾ ಹೆಮ್ಮೆಪಡುತ್ತಾರೆ ಮತ್ತು ಅವರು ಆಕಾಶದ ಮೇಲಿರುವ ಮೋಡಗಳ ಮರೆಯಲ್ಲಿ ನಿಂತು ತಮ್ಮ ಮಗನನ್ನು ನೋಡಿ ಸಂತಸ ಪಡುವರೆಂದು ನನಗೆ ಖಾತ್ರಿಯಿದೆ, ಈ ಪೀಳಿಗೆಯ ಅತ್ಯಂತ ಶ್ರೇಷ್ಠ ಆಟಗಾರ" ಎಂದು ಯುವರಾಜ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : Sachin Tendulkar: ನಿಮ್ಮ ಆಟ ಹೃದಯ ಮುಟ್ಟಿದೆ; "ವಿರಾಟ" ಶತಕಕ್ಕೆ ತಲೆಬಾಗಿದ ಕ್ರಿಕೆಟ್ ದೇವರು
"ಕೊಹ್ಲಿ ಈಗ ತಮ್ಮದೇ ಆದ ಲೀಗ್‌ನಲ್ಲಿದ್ದಾರೆ" ಎಂದು ಭಾರತದ ಮಾಜಿ ಬ್ಯಾಟರ್ ವಿ.ವಿ.ಎಸ್.ಲಕ್ಷ್ಮಣ್ ಹೇಳಿದ್ದಾರೆ. ವಿಶ್ವಕಪ್ ಸೆಮಿಸ್‌ನಲ್ಲಿ ಅವರು ಈ ಸಾಧನೆ ಮಾಡಿರುವುದು ವಿಶೇಷವಾಗಿದೆ ಎಂದು ಸಾಮಾಜಿಕ ಜಾಲತಾಣ ಮಾಧ್ಯಮ ಎಕ್ಸ್ ಆ್ಯಪ್ನಲ್ಲಿ ಲಕ್ಷ್ಮಣ್ ಬರೆದುಕೊಂಡಿದ್ದಾರೆ. ಜೊತೆಗೆ, ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೊಹ್ಲಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಕೊಠಡಿ ಎಂದು ಬಣ್ಣಿಸಿದ್ದಾರೆ. ಇಂಗ್ಲೆಂಡಿನ ಶ್ರೇಷ್ಠ ಆಟಗಾರ ಕೆವಿನ್ ಪೀಟರ್ಸನ್ ಕೂಡ ಕೊಹ್ಲಿಯ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿಶ್ವಕಪ್ ಕ್ರಿಕೆಟ್ : ನ್ಯೂಜಿಲೆಂಡ್ ಮಣಿಸಿ ಫೈನಲ್ಗೇರಿದ ಭಾರತ ; ಸಪ್ತ ವಿಕೆಟ್ ಪಡೆದು ಮಿಂಚಿದ ಶಮಿ