ETV Bharat / sports

ಸಿಎಸ್​ಕೆ, 2011ರ ಐಸಿಸಿ ವಿಶ್ವಕಪ್​ ಫೈನಲ್​ನಲ್ಲಿ ಆಡಿದ್ದ​ ಪ್ಲೇಯರ್​ ಇದೀಗ ಬಸ್​ ಡ್ರೈವರ್​!

ಮುತ್ತಯ್ಯ ಮುರಳೀಧರನ್​ ಸೇರಿದಂತೆ ಲಂಕಾದ ದಿಗ್ಗಜ ಆಟಗಾರರೊಂದಿಗೆ ಕ್ರಿಕೆಟ್​ ಆಡಿರುವ ಆಟಗಾರನೋರ್ವ ಇದೀಗ ಬಸ್​ ಡ್ರೈವರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

Suraj Randiv
Suraj Randiv
author img

By

Published : Aug 25, 2021, 4:02 PM IST

ಹೈದರಾಬಾದ್​: ಅಂತಾರಾಷ್ಟ್ರೀಯ ಕ್ರಿಕೆಟ್​​ ಆಟಗಾರರು ಕೇವಲ ಒಂದೆರೆಡು ಪಂದ್ಯಗಳಲ್ಲಿ ದೇಶವನ್ನ ಪ್ರತಿನಿಧಿಸಿದರೆ ಸಾಕು, ಅವರಿಗೆ ಇನ್ನಿಲ್ಲದ ಬೇಡಿಕೆ ಸಿಗಲು ಶುರುವಾಗುತ್ತದೆ. ಆದರೆ ಇಲ್ಲೊಬ್ಬ ಕ್ರಿಕೆಟ್​ ಆಟಗಾರ 2011ರ ಐಸಿಸಿ ವಿಶ್ವಕಪ್​ ಫೈನಲ್​, ಇಂಡಿಯನ್​ ಪ್ರೀಮಿಯರ್ ಲೀಗ್​​ನಂತಹ ಟೂರ್ನಿಗಳಲ್ಲಿ ಆಡಿದ್ದರೂ, ಇದೀಗ ಬಸ್​ ಡ್ರೈವರ್​ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Suraj Randiv
ಮಾಜಿ ಕ್ರಿಕೆಟರ್​ ಸೂರಜ್​ ರಂದೀವ್​

ಶ್ರೀಲಂಕಾದ ದಿಗ್ಗಜ ಆಟಗಾರರಾದ ಮಹೇಲಾ ಜಯವರ್ದನೆ, ಕುಮಾರ್​ ಸಂಗಕ್ಕರ್​, ಮೆಂಡಿಸ್​ ಹಾಗೂ ಸನತ್ ಜಯಸೂರ್ಯನಂತಹ ಆಟಗಾರರೊಂದಿಗೆ ಮೈದಾನ ಹಂಚಿಕೊಂಡಿದ್ದ ಆಟಗಾರನೋರ್ವ ಇದೀಗ ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಬಸ್​ ಡ್ರೈವರ್​ ಆಗಿ ಜೀವನ ಸಾಗಿಸುತ್ತಿದ್ದಾರೆ.

Suraj Randiv
ದಿಗ್ಗಜ ಕ್ರಿಕೆಟರ್​ ಜೊತೆ ಸೂರಜ್​

2011ರಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಫೈನಲ್​ ತಂಡದಲ್ಲಿದ್ದ ಲಂಕಾ ಆಫ್​ ಸ್ಪಿನ್ನರ್​​ ಸೂರಜ್​ ರಂದೀವ್​ ಇದೀಗ ಆಸ್ಟ್ರೇಲಿಯಾದಲ್ಲಿ ಬಸ್​ ಡ್ರೈವರ್​​ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಬರುವ ಹಣದಿಂದಲೇ ಕುಟುಂಬ ನಿರ್ವಹಿಸುತ್ತಿದ್ದಾರೆ.

Suraj Randiv
ಲಂಕಾ ತಂಡದಲ್ಲಿದ್ದ ಸೂರಜ್​ ರಂದೀವ್​

2009ರಿಂದ 2016ರವರೆಗೆ ಲಂಕಾ ತಂಡದಲ್ಲಿದ್ದ ಈ ಪ್ಲೇಯರ್​​ 12 ಟೆಸ್ಟ್​ ಪಂದ್ಯಗಳಿಂದ 43 ವಿಕೆಟ್​, 31 ಏಕದಿನ ಪಂದ್ಯಗಳಿಂದ 36 ವಿಕೆಟ್​ ಹಾಗೂ ಏಳು ಟಿ-20 ಪಂದ್ಯಗಳಿಂದ 7ವಿಕೆಟ್​ ಪಡೆದು ಗಮನ ಸೆಳೆದಿದ್ದರು. ಇದರ ಜೊತೆಗೆ 2011ರಿಂದ 2012ರ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಾಗಿ 8 ಪಂದ್ಯಗಳಿಂದ ಆರು ವಿಕೆಟ್ ಪಡೆದುಕೊಂಡಿದ್ದರು. ಆದರೆ ಇದೀಗ ಬಸ್​ ಡ್ರೈವರ್​ ಆಗಿದ್ದಾರೆ.

Suraj Randiv
ಮಾಜಿ ಕ್ರಿಕೆಟರ್ ಸೂರಜ್​

ಇದನ್ನೂ ಓದಿರಿ: ಆಫ್ಘನ್​ ಸಚಿವನಾಗಿದ್ದ ಸೈಯದ್​ ಅಹ್ಮದ್ ಶಾ ಇದೀಗ ಪಿಜ್ಜಾ ಡೆಲಿವರಿ ಬಾಯ್​!

ಇವರ ಹಾಗೇ ಶ್ರೀಲಂಕಾದ ಮತ್ತೋರ್ವ ಕ್ರಿಕೆಟ್ ಪ್ಲೇಯರ್​ ಚಿಂತಕ್​ ನಮಸ್ತೆ ಹಾಗೂ ಜಿಂಬಾಬ್ವೆ ಮಾಜಿ ಕ್ರಿಕೆಟಿಗ ವಾಡಿಂಗ್ಟನ್ ಮ್ವೇಂಗ್​ ಕೂಡ ಮೆಲ್ಬೋರ್ನ್​ನಲ್ಲಿ ಬಸ್ ಡ್ರೈವರ್​ ಆಗಿ ಕಾರ್ಯನಿರ್ಹಿಸುತ್ತಿದ್ದು, ಅದರಿಂದ ಬರುವ ಹಣದಿಂದಲೇ ಕುಟುಂಬ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.