ನವದೆಹಲಿ: ಸುರೇಶ್ ರೈನಾ ಮಗಳು ಗ್ರೇಸಿಯಾಗಾಗಿ ಹಾಡು ಹಾಡಿದ್ದಾರೆ. ಮೈದಾನದಲ್ಲಿ ಆಡುವುದರ ಜೊತೆಗೆ ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಗಾಯನದಲ್ಲೂ ನಿಪುಣರು. ರೈನಾ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ತಮ್ಮ ಮಗಳಿಗಾಗಿ ಹಾಡನ್ನು ಹಾಡಿದ್ದಾರೆ. ಜನರು ಈ ವಿಡಿಯೋವನ್ನು ತುಂಬಾ ಇಷ್ಟಪಡುತ್ತಿದ್ದಾರೆ.
-
This song always puts me in the best mood, this one will always be special to my heart!❤️
— Suresh Raina🇮🇳 (@ImRaina) March 1, 2023 " class="align-text-top noRightClick twitterSection" data="
Where does this song take you back to? #Throwback #Peaceful #Memories 🎶 @PriyankaCRaina pic.twitter.com/MMbI9OGHRs
">This song always puts me in the best mood, this one will always be special to my heart!❤️
— Suresh Raina🇮🇳 (@ImRaina) March 1, 2023
Where does this song take you back to? #Throwback #Peaceful #Memories 🎶 @PriyankaCRaina pic.twitter.com/MMbI9OGHRsThis song always puts me in the best mood, this one will always be special to my heart!❤️
— Suresh Raina🇮🇳 (@ImRaina) March 1, 2023
Where does this song take you back to? #Throwback #Peaceful #Memories 🎶 @PriyankaCRaina pic.twitter.com/MMbI9OGHRs
ಅನೇಕ ಹಾಡುಗಳನ್ನು ಹಾಡಿದ್ದ ರೈನಾ: ಭಾರತದ ಮಾಜಿ ಸ್ಟಾರ್ ಆಟಗಾರ ಸುರೇಶ್ ರೈನಾ ಅವರಿಗೆ ಹಾಡುವುದೆಂದರೆ ತುಂಬಾ ಇಷ್ಟ. ಹೌದು, ಇತ್ತೀಚಿಗೆ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಟ್ರೆಂಡಿಂಗ್ನಲ್ಲಿದೆ. ಇದರಲ್ಲಿ ರೈನಾ ತಮ್ಮ ಮಗಳು ಗ್ರೇಸಿಯಾಗಾಗಿ ವಿಶಿಷ್ಟವಾದ ಹಾಡನ್ನು ಹಾಡಿದ್ದಾರೆ. ಇದಕ್ಕೂ ಮುನ್ನ ರೈನಾ ಹಲವು ಬಾರಿ ತಮ್ಮ ಪ್ರತಿಭೆ ತೋರಿದ್ದಾರೆ. ಕ್ರಿಕೆಟ್ ಆಡುವುದರ ಹೊರತಾಗಿ, ಅವರು ಅನೇಕ ಹಾಡುಗಳನ್ನು ಹಾಡಿದ್ದಾರೆ. ಅವರ ಒಂದಿಲ್ಲೊಂದು ವೀಡಿಯೊಗಳನ್ನು ರೈನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ತಮ್ಮ ಮಗಳಿಗಾಗಿ ಹಾಡಿರುವ ಹಾಡು ರೈನಾ ಅವರ ಹೃದಯಕ್ಕೆ ತುಂಬಾ ಹತ್ತಿರವಾಗಿದೆ. ಅವರು ಈ ಹಾಡನ್ನು 2018ರಲ್ಲಿ ಹಾಡಿದ್ದಾರೆ.
ಈ ವಿಡಿಯೋಗೆ 6 ಸಾವಿರಕ್ಕೂ ಹೆಚ್ಚು ಲೈಕ್‌ಗಳು: ಭಾರತದ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ ಟ್ವಿಟರ್ ಹ್ಯಾಂಡಲ್‌ನಿಂದ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೈನಾ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಅವರ ಈ ಪ್ರತಿಭೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಹಾಡಿಗೆ ಅಭಿಮಾನಿಗಳು ತಲೆದೂಗುತ್ತಿದ್ದಾರೆ. ಜನರು ರೈನಾ ಅವರ ವಿಡಿಯೋಗೆ ನಿರಂತರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋಗೆ 6 ಸಾವಿರಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
''ಈ ಹಾಡು ನನ್ನನ್ನು ಯಾವಾಗಲೂ ಉತ್ತಮ ಮನಸ್ಥಿತಿಯಲ್ಲಿ ಇರುವಂತೆ ಮಾಡುತ್ತದೆ. ಯಾವಾಗಲೂ ನನ್ನ ಹೃದಯಕ್ಕೆ ವಿಶೇಷವಾಗಿರುತ್ತದೆ'' ಎಂದು ಸುರೇಶ್ ರೈನಾ ವೀಡಿಯೊದ ಶೀರ್ಷಿಕೆಯಲ್ಲಿ ಬರದಿದ್ದಾರೆ.
ರೈನಾ ಹಾಡಿನ ಗುಂಗಿನಲ್ಲಿರುವ ಜನರು: 2018ರಲ್ಲಿ ರೈನಾ 'ಬಿಟಿಯಾ ರಾಣಿ' ಹಾಡು ರೆಕಾರ್ಡ್ ಮಾಡಿದ್ದರು. ಆ ಸಮಯದಲ್ಲಿ ರೈನಾ ಅವರ ಈ ಹಾಡು ಭಾರಿ ವೈರಲ್ ಆಗಿತ್ತು. ಅವರು ತಮ್ಮ ಮಗಳಿಗಾಗಿ ಈ ಹಾಡನ್ನು ವಿಶೇಷವಾಗಿ ಹಾಡಿದ್ದಾರೆ. ಆ ಸಮಯದಲ್ಲಿ ಈ ಹಾಡಿಗೆ ಹಲವು ಮಾಜಿ ಕ್ರಿಕೆಟಿಗರು ರೈನಾ ಅವರನ್ನು ಅಭಿನಂದಿಸಿದ್ದರು. ಅದೇ ವಿಡಿಯೋವನ್ನು ಸುರೇಶ್ ರೈನಾ ಮತ್ತೊಮ್ಮೆ ಟ್ವೀಟ್ ಮಾಡಿದ್ದಾರೆ.
ಕೆಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ರೈನಾ ಉತ್ತಮ ಆಟ: ಸುರೇಶ್ ರೈನ್ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಇದಾದ ನಂತರವೂ ಮೈದಾನದಲ್ಲಿ ಆಡುವಾಗ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ, ರೈನಾ ಕೆಸಿಸಿ ಟೂರ್ನಮೆಂಟ್ ಫೈನಲ್‌ನಲ್ಲಿ ಆಡುತ್ತಿದ್ದರು. ಈ ಪಂದ್ಯದಲ್ಲಿ ರೈನಾ 29 ಎಸೆತಗಳಲ್ಲಿ 54 ರನ್ ಸಿಡಿಸಿದ್ದರು. ಇದಲ್ಲದೇ, ಬೌಲಿಂಗ್ನಲ್ಲಿ ಕೂಡ ಅಮೋಘ ಪ್ರದರ್ಶನ ನೀಡಿದ್ದರು. ಈ ಇನ್ನಿಂಗ್ಸ್‌ನಲ್ಲಿ ಅವರು 2 ವಿಕೆಟ್‌ಗಳನ್ನು ಪಡೆದಿದ್ದರು. ಜೊತೆಗೆ ಫೀಲ್ಡಿಂಗ್‌ನಲ್ಲಿ ಪರಿಣತಿ ಹೊಂದಿರುವ ರೈನಾ ಒಬ್ಬ ಆಟಗಾರನನ್ನು ರನೌಟ್ ಮಾಡಿದ್ದರು. ಇದಕ್ಕಾಗಿ ರೈನಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.
ಇದನ್ನೂ ಓದಿ: ಮೂರನೇ ಟೆಸ್ಟ್ ಪಂದ್ಯ: ಎರಡನೇ ಇನ್ನಿಂಗ್ಸ್‌ನಲ್ಲಿ 163 ರನ್ಗಳಿಗೆ ರೋಹಿತ್ ಪಡೆ ಆಲೌಟ್