ETV Bharat / sports

ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಆಯ್ಕೆಯಾಗದ ಸರ್ಫರಾಜ್ ಖಾನ್​: ವೆಂಕಟೇಶ್​ ಪ್ರಸಾದ್​ ಗರಂ - ಆಯ್ಕೆಗಾರರ ಮೇಲೆ ತೀವ್ರವಾಗಿ ವಾಗ್ದಾಳಿ

ಮುಂಬರುವ ಬಾರ್ಡರ್-ಗವಾಸ್ಕರ್ ಕ್ರಿಕೆಟ್‌ ಸರಣಿಗೆ ಈಗಾಗಲೇ ಉತ್ತಮ ಪ್ರದರ್ಶನ ತೋರುತ್ತಿರುವ ಸರ್ಫರಾಜ್ ಖಾನ್​ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಟೀಂ ಇಂಡಿಯಾದ ಮಾಜಿ ವೇಗಿ ವೆಂಕಟೇಶ್​ ಪ್ರಸಾದ್​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Former Indian cricketer Venkatesh Prasad  Venkatesh Prasad comes out in support of Sarfaraz  former Indian bowler Venkatesh Prasad  Ranji Trophy Group B game  four match Test series in Australia  Border Gavaskar Test Series  ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿ  ಸರಣಿಗೆ ಸರ್ಫರಾಜ್ ಖಾನ್​ನನ್ನು ಆಯ್ಕೆ ಮಾಡದ ಆಡಳಿತ ಮಂಡಳಿ  ವೆಂಕಟೇಶ್​ ಪ್ರಸಾದ್​ ಗರಂ  ಆಯ್ಕೆಗಾರರ ಮೇಲೆ ತೀವ್ರವಾಗಿ ವಾಗ್ದಾಳಿ  ರಣಜಿಯಲ್ಲಿ ಸತತ ಶತಕ
ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್​ನನ್ನು ಆಯ್ಕೆ ಮಾಡದ ಆಡಳಿತ ಮಂಡಳಿ
author img

By

Published : Jan 19, 2023, 12:47 PM IST

Updated : Jan 20, 2023, 10:48 AM IST

ಹೈದರಾಬಾದ್ (ತೆಲಂಗಾಣ) : ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆಗಾರರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂಬೈ ತಂಡ ಪ್ರತಿನಿಧಿಸುತ್ತಿರುವ 25ರ ಹರೆಯದ ಸರ್ಫರಾಜ್ ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ರನ್ ಗಳಿಸುತ್ತಿದ್ದಾರೆ. ಇಂಥ ಆಟಗಾರನಿಗೆ ಅವಕಾಶ ಸಿಗದಿರುವುದನ್ನು ಅವರು ಅನ್ಯಾಯ ಎಂದಿದ್ದಾರೆ.

ರಣಜಿಯಲ್ಲಿ ಸತತ ಶತಕ: ಮಂಗಳವಾರ ಸರ್ಫರಾಜ್ ಮತ್ತೊಂದು ಶತಕ ಗಳಿಸಿದ್ದಾರೆ. ಈ ಮೂಲಕ ರಣಜಿ ಟ್ರೋಫಿ ಗುಂಪಿನ ಬಿ ಪಂದ್ಯದಲ್ಲಿ ದೆಹಲಿ ವಿರುದ್ಧ 13ನೇ ಪ್ರಥಮ ದರ್ಜೆ ಶತಕ ದಾಖಲಿಸಿದ್ದಾರೆ. ರಣಜಿ ಟ್ರೋಫಿಯ ಈ ಆವೃತ್ತಿಯಲ್ಲಿ ಸರ್ಫರಾಜ್ ಅವರ 3ನೇ ಶತಕ ಇದಾಗಿದೆ. ಕಳೆದೆರಡು ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಕೇವಲ 12 ಪಂದ್ಯಗಳಿಂದ 1,910 ರನ್ ಗಳಿಸಿದ್ದರು. 136.42 ಸರಾಸರಿಯಲ್ಲಿ ಬ್ಯಾಟ್​ ಬೀಸಿದ್ದರು.

ಮೂರು ದೇಶೀಯ ಟೂರ್ನಿಯಲ್ಲಿ ಸರ್ಫರಾಜ್ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದು ಸರ್ಫರಾಜ್​ಗೆ ಮಾತ್ರವಲ್ಲ, ದೇಶೀಯ ಕ್ರಿಕೆಟ್​ಗೂ ಅನ್ಯಾಯ ಮಾಡಿದಂತೆ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಐಪಿಎಲ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡಗಳಲ್ಲಿ ಸರ್ಫರಾಜ್ ಉತ್ತಮವಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ.

  • Not having him in the Test Team despite 3 blockbuster domestic seasons is not only unfair on Sarfaraz Khan, but it’s an abuse to domestic cricket,almost as if this platform doesn’t matter. And he is FIT to score those runs. As far as body weight goes, there are many with more kgs https://t.co/kenO5uOlSp

    — Venkatesh Prasad (@venkateshprasad) January 17, 2023 " class="align-text-top noRightClick twitterSection" data=" ">

ಸರ್ಫರಾಜ್ ರನ್ ಗಳಿಸಲು ಫಿಟ್ ಆಗಿದ್ದಾರೆ. ಅವರ ದೇಹದ ತೂಕಕ್ಕಿಂತ ಹೆಚ್ಚು ಕೆಜಿ ಹೊಂದಿರುವ ಅನೇಕರಿದ್ದಾರೆ ಎಂದು ಹೇಳಿರುವ ವೆಂಕಟೇಶ್​ ಪ್ರಸಾದ್, ಫಿಟ್ ಇಲ್ಲ ಎಂದು ಕಾರಣ ನೀಡಿ ಸರ್ಫರಾಜ್​ಅವರನ್ನು ಹೊರಗಿಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವೆಂಕಿ ಈ ಹಿಂದೆ ಭಾರತಕ್ಕೆ ಬೌಲಿಂಗ್​ ಕೋಚ್​ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ ತಂಡಗಳಿಗೂ ಕೋಚಿಂಗ್​ ಮಾಡಿದ್ದರು.

ಪ್ರಸಕ್ತ ರಣಜಿ ಟೂರ್ನಿಯಲ್ಲಿ ಮೂರನೇ ಶತಕ ದಾಖಲಿಸಿದ ಸರ್ಫರಾಜ್ ಅಗ್ರೆಸ್ಸಿವ್​ ಆಟಗಾರ. ಈ ವೇಳೆ ಆಯ್ಕೆಗಾರರಿಗೆ ಸನ್ನೆಯ ಮೂಲಕವೇ ಪ್ರಶ್ನೆ ಮಾಡಿದಂತಿತ್ತು ಅವರ ಸಂಭ್ರಮಾಚರಣೆ. ಶತಕ ಗಳಿಸುತ್ತಿದ್ದಂತೆ ಹೆಲ್ಮೆಟ್ ತೆಗೆದು, ತೊಡೆಯನ್ನು ಐದು ಬಾರಿ ತಟ್ಟಿದ್ದರು. ನಂತರ ಬೌಂಡರಿ ಲೈನ್‌ನಲ್ಲಿ ಕುಳಿತಿದ್ದ ಸಹಆಟಗಾರರ ಕಡೆಗೆ ಸನ್ನೆ ಮಾಡುವ ಮೂಲಕ ತಾನು ಎಷ್ಟು ಸಮರ್ಥ ಎಂಬ ಸಂದೇಶವನ್ನು ಆಯ್ಕೆಗಾರರಿಗೆ ರವಾನಿಸಿದ್ದರು.

ಸರ್ಫರಾಜ್ ರಣಜಿ ಟ್ರೋಫಿಯಲ್ಲಿ ತಮ್ಮ ಕೊನೆಯ 25 ಇನ್ನಿಂಗ್ಸ್‌ ಮೂಲಕ 10 ಶತಕ ಮತ್ತು ಐದು ಅರ್ಧಶತಕ ಬಾರಿಸಿದ್ದಾರೆ. ಪ್ರಥಮ ದರ್ಜೆಯ ಕ್ರಿಕೆಟ್‌ನಲ್ಲಿ ಸರ್ ಡೊನಾಲ್ಡ್ ಬ್ರಾಡ್ಮನ್ ನಂತರ ಉತ್ತಮ ಸರಾಸರಿ ಹೊಂದಿರುವ ಆಟಗಾರ ಎನಿಸಿಕೊಂಡಿದ್ದರೂ ಆಸ್ಟ್ರೇಲಿಯಾ ವಿರುದ್ಧದ ಎರಡು ಟೆಸ್ಟ್‌ಗಳಿಗೆ ಸ್ಥಾನ ಪಡೆಯುವಲ್ಲಿ ಸರ್ಫರಾಜ್‌ ವಿಫಲರಾಗಿದ್ದರು. ತಂಡದಲ್ಲಿ ಸ್ಥಾನ ಸಿಗದೇ ಇರುವುದಕ್ಕೆ ನಾನು ಕಣ್ಣೀರಿಟ್ಟಿದ್ದೇನೆ ಎಂದು ಅವರು ಇತ್ತೀಚೆಗೆ ಹೇಳಿದ್ದರು.

25 ವರ್ಷ ವಯಸ್ಸಿನ ಸರ್ಫರಾಜ್‌ ಈ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡಿದವರಲ್ಲಿ ಪ್ರಮುಖರು. ಮುಂಬೈ ಪರ ಐದು ಪಂದ್ಯಗಳಲ್ಲಿ 431 ರನ್ ಗಳಿಸಿದ್ದಾರೆ. ಕಳೆದ ಬೇಸಿಗೆಯಲ್ಲಿ, ಸರ್ಫರಾಜ್ ಆರು ಪಂದ್ಯಗಳಲ್ಲಿ 122.75 ಸರಾಸರಿಯಲ್ಲಿ ನಾಲ್ಕು ಶತಕಗಳನ್ನು ಒಳಗೊಂಡಂತೆ 982 ರನ್ ಗಳಿಸಿದ್ದಾರೆ.

ಇದನ್ನೂ ಓದಿ: ಗೆಲುವಿನ ದಡದಲ್ಲಿ ಎಡವಿದ ಶತಕವೀರ ಬ್ರೇಸ್ವೆಲ್.. ಕಿವೀಸ್​ ವಿರುದ್ಧ ಭಾರತಕ್ಕೆ 12 ರನ್​ಗಳ ಜಯ

Last Updated : Jan 20, 2023, 10:48 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.