ETV Bharat / sports

ಇಂಗ್ಲೆಂಡ್​ ಕ್ರಿಕೆಟ್ ತಂಡದ ಮಾಜಿ ನಾಯಕ ಟೆಡ್​ ಡೆಕ್ಸ್ಟರ್​ ನಿಧನ - ಇಂಗ್ಲೆಂಡ್ ತಂಡದ ಮಾಜಿ ನಾಯಕ

ಟೆಡ್​ 1989 ರಿಂದ 1993ರವರೆಗೆ ಇಂಗ್ಲೆಂಡ್ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2003 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಔಪಚಾರಿಕವಾಗಿ ಅಳವಡಿಸಿಕೊಂಡ ಟೆಸ್ಟ್ ಪ್ಲೇಯರ್ ಶ್ರೇಯಾಂಕ ವ್ಯವಸ್ಥೆಯನ್ನು ಟೆಡ್​ ಅವರೇ ಅಭಿವೃದ್ಧಿಪಡಿಸಿದ್ದಾರೆ.

Former England captain Ted Dexter dies
ಟೆಡ್​ ಡೆಕ್ಸ್ಟರ್​ ನಿಧನ
author img

By

Published : Aug 26, 2021, 4:11 PM IST

ಲಂಡನ್: ಇಂಗ್ಲೆಂಡ್​ ತಂಡದ ಮಾಜಿ ನಾಯಕ ಟೆಡ್​ ಡೆಕ್ಸ್ಟರ್​ ತಮ್ಮ 86ನೇ ವಯಸ್ಸಿನಲ್ಲಿ ವಯೋ ಸಹಜ ಅನಾರೋಗ್ಯದ ಕಾರಣ ಗುರುವಾರ ನಿಧನರಾಗಿದ್ದಾರೆಂದು ಮರಿಲೆಬೋನ್​ ಕ್ರಿಕೆಟ್ ಕ್ಲಬ್(ಎಂಸಿಸಿ) ಖಚಿತಪಡಿಸಿದೆ.

ಲಾರ್ಡ್​ ಟೆಡ್​ ಎಂದು ಅಡ್ಡ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ಡಿಕ್ಸ್ಟೆರ್ ಸ್ಫೋಟಕ ಬ್ಯಾಟ್ಸ್​ಮನ್ ಮತ್ತು ಅರೆಕಾಲಿಕ ವೇಗಿಯಾಗಿದ್ದರು. ಅವರು ಇಂಗ್ಲೆಂಡ್ ಪರ 62 ಟೆಸ್ಟ್​ ಪಂದ್ಯಗಳನ್ನಾಡಿದ್ದು. 9 ಶತಕ ಮತ್ತು 27 ಅರ್ಧಶತಕಗಳ ಸಹಿತ 4,502 ರನ್​ಗಳಿಸಿದ್ದರು. 66 ವಿಕೆಟ್​ ಕೂಡ ಪಡೆದಿದ್ದರು. ​ ಟೆಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1956 ರಿಂದ 1968ರ ವರೆಗೆ ಆಡಿದ್ದು, 21,000ಕ್ಕೂ ಹೆಚ್ಚು ರನ್, 419 ವಿಕೆಟ್ ದಾಖಲೆ ಹೊಂದಿದ್ದಾರೆ.

ಇಂಗ್ಲೆಂಡ್​ ಮತ್ತು ಸಸೆಕ್ಸ್​ ತಂಡಗಳಿಗೆ ನಾಯಕರಾಗಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರು ಕಾಂಪ್ಟನ್​ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆ ಎಂದು ಎಂಸಿಸಿ ಹೇಳಿಕೆ ಬಿಡುಗಡೆ ಮಾಡಿದೆ.

ಟೆಡ್​ ಉತ್ತಮ ಪತಿ, ತಂದೆ ಮತ್ತು ಅಜ್ಜ ಮತ್ತು ಇಂಗ್ಲೆಂಡ್​ ತಂಡ ಶ್ರೇಷ್ಠ ಕ್ರಿಕೆಟಿಗನಾಗಿದ್ದರು. ಅವರು ಆಡಿದ 62 ಟೆಸ್ಟ್ ಪಂದ್ಯಗಳಲ್ಲಿನ 30ಕ್ಕೆ ನಾಯಕರಾಗಿದ್ದರು ಎಂದು ಎಂಸಿಸಿ ತಿಳಿಸಿದೆ.

ಟೆಡ್​ 1989ರಿಂದ 1993ರವರೆಗೆ ಇಂಗ್ಲೆಂಡ್ ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 2003 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಔಪಚಾರಿಕವಾಗಿ ಅಳವಡಿಸಿಕೊಂಡ ಟೆಸ್ಟ್ ಪ್ಲೇಯರ್ ಶ್ರೇಯಾಂಕ ವ್ಯವಸ್ಥೆಯನ್ನು ಟೆಡ್​ ಅವರೇ ಅಭಿವೃದ್ಧಿಪಡಿಸಿದ್ದಾರೆ.

ಇದನ್ನು ಓದಿ: ಲಾರ್ಡ್ಸ್‌ ಬಳಿಕ ಲೀಡ್ಸ್‌ನಲ್ಲೂ ಇಂಗ್ಲಿಷ್‌ ಅಭಿಮಾನಿಗಳ ಆಟಾಟೋಪ: ಸಿರಾಜ್‌ ಮೇಲೆ ಚೆಂಡು ಎಸೆದು ವಿಕೃತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.