ETV Bharat / sports

ಶ್ರೀಲಂಕಾದಲ್ಲಿ ಯುವಕರಿಂದ ಅತ್ಯುತ್ತಮ ಪ್ರದರ್ಶನ ಹೊರತರುವುದೇ ನಾಯಕನಾಗಿ ನನ್ನ ಗುರಿ : ಶಿಖರ್ ಧವನ್ - ಭಾರತ ತಂಡದಲ್ಲಿ ಯುವಕರಿಗೆ ಅವಕಾಶ

ನಾನು ದ್ರಾವಿಡ್ ಅವರ ಕೋಚಿಂಗ್​ನಲ್ಲಿ ಭಾರತ ಎ ತಂಡದಲ್ಲಿ ಒಮ್ಮೆ ಆಡಿದ್ದೇನೆ. ಅಲ್ಲೂ ನಾನೂ ನಾಯಕನಾಗಿದ್ದೆ. ಹಾಗಾಗಿ, ಮತ್ತೆ ನಾವು ಒಂದಾಗಿ ಸೇರುವುದು ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಹಾಯಕ ಸಿಬ್ಬಂದಿ ಮತ್ತು ತಂಡ ಈ ಸರಣಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ..

ಶ್ರೀಲಂಕಾ ಪ್ರವಾಸ ಶಿಖರ್ ಧವನ್
ಶ್ರೀಲಂಕಾ ಪ್ರವಾಸ ಶಿಖರ್ ಧವನ್
author img

By

Published : Jun 27, 2021, 9:06 PM IST

ಮುಂಬೈ : ಮುಂಬರುವ ಶ್ರೀಲಂಕಾ ಪ್ರವಾಸದಲ್ಲಿ ರಾಹುಲ್​ ದ್ರಾವಿಡ್​ ಅವರಂತಹ ಕೋಚಿಂಗ್​ನಲ್ಲಿ ಯುವ ಆಟಗಾರರಿಂದ ಒಳ್ಳೆಯ ಆಟವನ್ನು ಹೊರತರಲು ಗಮನ ಹರಿಸುವೆ ಎಂದು ಭಾರತ ತಂಡದ ನಾಯಕ ಶಿಖರ್ ಧವನ್ ಹೇಳಿದ್ದಾರೆ. ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು 3 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಶಿಖರ್ ಧವನ್​ ಮುನ್ನಡೆಸಲಿದ್ದಾರೆ.

ಈ ತಂಡಕ್ಕೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ಹಾಗೂ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್​ ಮುಖ್ಯ ಕೋಚ್ ಆಗಿ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ತಂಡದಲ್ಲಿ ಧವನ್​, ಭುವನೇಶ್ವರ್​, ಹಾರ್ದಿಕ್ ಪಾಂಡ್ಯ, ಚಹಾಲ್, ಕುಲ್ದೀಪ್‌ರಂತಹ ಅನುಭವಿಗಳ ಜೊತೆಗೆ ಹಲವಾರು ಯುವ ಆಟಗಾರರು ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಈ ಯುವ ಆಟಗಾರರಿಂದ ಅತ್ಯುತ್ತಮ ಆಟವನ್ನು ಹೊರ ತರುವುದುಕ್ಕೆ ತಾವೂ ಸಾಧ್ಯವಾದಷ್ಟು ಗಮನ ಹರಿಸುವುದಾಗಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

"ಭಾರತ ತಂಡದ ನಾಯಕನಾಗಿರುವುದು ನನಗೆ ದೊಡ್ಡ ಗೌರವ ಮತ್ತು ಈ ತಂಡವನ್ನು ಮುನ್ನಡೆಸುವುದಕ್ಕೆ ಎದುರು ನೋಡುತ್ತಿದ್ದೇನೆ. ನಾವು ಒಂದು ತಂಡವಾಗಿ ರಾಹುಲ್​ ಭಯ್ಯಾ ಜೊತೆ ಕೆಲಸ ಮಾಡಲಿದ್ದೇವೆ" ಎಂದು ಧವನ್​ ಗೋಷ್ಠಿಯಲ್ಲಿ ಹೇಳಿದ್ದಾರೆ.

ನಾನು ದ್ರಾವಿಡ್ ಅವರ ಕೋಚಿಂಗ್​ನಲ್ಲಿ ಭಾರತ ಎ ತಂಡದಲ್ಲಿ ಒಮ್ಮೆ ಆಡಿದ್ದೇನೆ. ಅಲ್ಲೂ ನಾನೂ ನಾಯಕನಾಗಿದ್ದೆ. ಹಾಗಾಗಿ, ಮತ್ತೆ ನಾವು ಒಂದಾಗಿ ಸೇರುವುದು ಉತ್ತಮ ರೀತಿಯಲ್ಲಿ ಹೊಂದಿಕೊಳ್ಳುತ್ತದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಹಾಯಕ ಸಿಬ್ಬಂದಿ ಮತ್ತು ತಂಡ ಈ ಸರಣಿಗಾಗಿ ಎದುರು ನೋಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಯುವಕರಿಂದ ಅತ್ಯುತ್ತಮ ಆಟವನ್ನು ಹೊರತರುತ್ತೇವೆ

ಹುಡುಗರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿಕೊಳ್ಳುವಂತಹ ಅತ್ಯಂತ ಸಂತೋಷದ ವಾತಾವರಣ ಇರಬೇಕು. ಆಗ ನಾವು ಅವರಿಂದ ಉತ್ತಮವಾದದ್ದನ್ನು ಪಡೆಯುತ್ತೇವೆ. ಆದ್ದರಿಂದ ಅದು ನಮ್ಮ ಗಮನ ಯುವಕರಿಂದ ಉತ್ತಮವಾದದ್ದನ್ನು ಹೊರತಗೆಯುವುದರ ಕಡೆಗಿದೆ. ನಾವು ಕ್ವಾರಂಟೈನ್​ನಲ್ಲಿ ಉತ್ತಮ ತಯಾರಿ ನಡೆಸಿದ್ದೇವೆ. ಹಾಗಾಗಿ, ಶ್ರೀಲಂಕಾಗೆ ಹೋಗಲು ನಾವು ಎದುರು ನೋಡುತ್ತಿದ್ದೇವೆ ಎಂದು ಗಬ್ಬರ್​ ಖ್ಯಾತಿಯ ಧವನ್ ತಿಳಿಸಿದ್ದಾರೆ.

ಇದನ್ನು ಓದಿ:ಸರಣಿ ಗೆಲ್ಲುವುದು ಮುಖ್ಯ.. ಶ್ರೀಲಂಕಾ ಪ್ರವಾಸದಲ್ಲಿ ಎಲ್ಲಾ ಯುವಕರಿಗೆ ಅವಕಾಶ ಕಷ್ಟ : ರಾಹುಲ್ ದ್ರಾವಿಡ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.