ETV Bharat / sports

King ಕೊಹ್ಲಿ ಸ್ಮರಣೀಯ ಐದು ಪಂದ್ಯಗಳ ಕಿರುನೋಟ ಇಲ್ಲಿದೆ..!

ಕೊಹ್ಲಿ 45 ಟಿ-20 ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದಾರೆ. ಅದರಲ್ಲಿ 27 ಪಂದ್ಯಗಳನ್ನು ಗೆದ್ದಿದ್ದಾರೆ. ಕೊಹ್ಲಿ ನಾಯಕತ್ವದಲ್ಲಿ ಭಾರತ ಕೇವಲ 14 ಟಿ-20 ಪಂದ್ಯಗಳನ್ನು ಸೋತಿದ್ದು, ಎರಡು ಪಂದ್ಯಗಳು ಸಮಬಲವಾಗಿವೆ. ಇನ್ನು ಎರಡು ಪಂದ್ಯಗಳು ಫಲಿತಾಂಶ ನೀಡಿಲ್ಲ.

Virat Kohli
ವಿರಾಟ್​ ಕೊಹ್ಲಿ
author img

By

Published : Sep 17, 2021, 11:32 AM IST

ನವದೆಹಲಿ: ದುಬೈನಲ್ಲಿ ಆಯೋಜನೆಗೊಂಡಿರುವ ಐಸಿಸಿ ಟಿ-20 ವಿಶ್ವಕಪ್ ನಂತರ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್​ ಕೊಹ್ಲಿ ನಾಯಕ ಸ್ಥಾನದಿಂದ ಕೆಳಗಿಳಿಯುವ ಘೋಷಣೆ ಮಾಡಿದ್ದಾರೆ. ಆದರೆ, ಅಲ್ಪ ಅವಧಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೊಹ್ಲಿ ಅನೇಕ ಸ್ಮರಣೀಯ ಗೆಲುವಿಗೆ ಕಾರಣರಾಗಿದ್ದಾರೆ. ಅವುಗಳ ಕಿರುನೋಟ ಇಂತಿದೆ.

  • ಭಾರತ vs ಆಸ್ಟ್ರೇಲಿಯಾ: 2020ರಲ್ಲಿ 2ನೇ ಟಿ-20 (ಸಿಡ್ನಿ)

ಭಾರತವು ಆಸ್ಟ್ರೇಲಿಯಾವನ್ನು ಆರು ವಿಕೆಟ್‌ಗಳಿಂದ ಸೋಲಿಸಿ ಟಿ-20 ಸರಣಿಯನ್ನು ವಶಪಡಿಸಿಕೊಂಡಿತ್ತು. ಇನ್ನು ಈ ಪಂದ್ಯದಲ್ಲಿ ಕೊಹ್ಲಿ 24 ಎಸೆತಗಳಲ್ಲಿ 40 ರನ್ ಸಿಡಿಸಿ ಗೆಲುವಿಗೆ ಕಾರಣರಾಗಿದ್ದರು. ಆಸ್ಟ್ರೇಲಿಯಾ 195 ರನ್​ಗಳ ಗುರಿಯನ್ನು ನೀಡಿತ್ತು. ಭಾರತ ಪ್ರಾರಂಭದಲ್ಲಿ ನಿಧಾನಗತಿಯಿಂದ ಆಡಿದರೂ ನಾಯಕ ಕೊಹ್ಲಿ ಫೀಲ್ಡ್​ಗಿಳಿದ ಬಳಿಕ ರನ್​ಗಳ ಸುರಿಮಳೆ ಹರಿಸಿದ್ದರು. ಈ ಮೂಲಕ ಟೀಂ ಇಂಡಿಯಾ ಮುನ್ನಡೆ ಸಾಧಿಸಿತ್ತು.

  • ಭಾರತ vs ನ್ಯೂಜಿಲ್ಯಾಂಡ್: 2020ರಲ್ಲಿ 3ನೇ ಟಿ-20 (ಹ್ಯಾಮಿಲ್ಟನ್)

ಬ್ಯಾಟಿಂಗ್ ಆಯ್ದುಕೊಂಡ ಭಾರತ 11 ಓವರ್​ಗಳಲ್ಲಿ 96ರನ್​ಗೆ 3 ವಿಕೆಟ್ ಕಳೆದುಕೊಂಡಿತು. ಆದರೆ, ಕೊಹ್ಲಿ 27 ಎಸೆತಗಳಲ್ಲಿ 38 ರನ್ ಗಳಿಸಿ ಭಾರತ 179 ರನ್ ತಲುಪುವಂತೆ ಮಾಡಿದರು. ಇನ್ನು ಈ ಸಂದರ್ಭದಲ್ಲಿ ನ್ಯೂಜಿಲ್ಯಾಂಡ್​ ಸಹ 20 ಓವರ್‌ಗಳಲ್ಲಿ 179 ರನ್ ಗಳಿಸಿತ್ತು. ಬಳಿಕ ಆಟವು ಸೂಪರ್ ಓವರ್‌ಗೆ ಹೋಯಿತು. ಇದರಲ್ಲಿ ಗೆದ್ದ ಭಾರತವು ವಿಜಯ ಶಾಲಿಯಾಗಿ ಹೊರಹೊಮ್ಮಿತು.

  • ಭಾರತ vs ನ್ಯೂಜಿಲ್ಯಾಂಡ್: 2020ರಲ್ಲಿ 3ನೇ ಟಿ 20 (ವೆಲ್ಲಿಂಗ್ಟನ್‌)

ಮೂರು ದಿನಗಳ ನಂತರ ಭಾರತ ಮತ್ತು ನ್ಯೂಜಿಲ್ಯಾಂಡ್ ಮತ್ತೆ T-2Oನಲ್ಲಿ ಮುಖಾಮುಖಿಯಾದವು. ಇದರಲ್ಲಿ ನ್ಯೂಜಿಲ್ಯಾಂಡ್ 20 ಓವರ್​ಗಳಲ್ಲಿ 165 ರನ್ ಗಳಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಕೊಹ್ಲಿ ಉತ್ತಮವಾಗಿ ರನ್​ ಗಳಿಸದಿದ್ದರೂ ಅವರ ಆಟ ಎಲ್ಲರಿಗೂ ರೋಮಾಂಚನ ಮೂಡುವಂತೆ ಮಾಡಿತ್ತು. ಇನ್ನು ಈ ಪಂದ್ಯ ಸಹ ಸೂಪರ್​ ಓವರ್​ಗೆ ತಲುಪಿ ಭಾರತ ಗೆಲುವು ಸಾಧಿಸಿತು.

  • ಭಾರತ vs ಇಂಗ್ಲೆಂಡ್: 2018 ರಲ್ಲಿ 3ನೇ ಟಿ 20 (ಬ್ರಿಸ್ಟಲ್‌)

ಕೊಹ್ಲಿ ನಾಯಕತ್ವದ ಟಿ-20 ಪಂದ್ಯಗಳಲ್ಲಿ ಇದು ಮರೆಯಲಾಗದ ಆಟ. 199 ರನ್​ಗಳ ಗುರಿ ಬೆನ್ನಟ್ಟಿದ ಕೊಹ್ಲಿ ತಂಡಕ್ಕೆ ಆರನೇ ಓವರ್​ನಲ್ಲಿ 62ರನ್​ಗೆ 2 ವಿಕೆಟ್​ ಕಳೆದು ಕೊಳ್ಳುವಂತಾಯಿತು. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ ಸಿಡಿಸಿದರೆ, ಕೊಹ್ಲಿ ಔಟಾಗುವ ಮುನ್ನ 29 ಎಸೆತಗಳಲ್ಲಿ 43 ರನ್ ಗಳಿಸಿ ಆರಂಭಿಕ ಬ್ಯಾಟ್ಸ್‌ಮನ್‌ಗೆ ಜೊತೆಯಾದರು. ಇನ್ನು 8 ಎಸೆತಗಳು ಬಾಕಿ ಇರುವಾಗ ಭಾರತ ಗುರಿ ಮುಟ್ಟಿತ್ತು.

  • ಭಾರತ vs ಇಂಗ್ಲೆಂಡ್: 2017ರಲ್ಲಿ 2ನೇ ಟಿ 20 ( ನಾಗ್ಪುರ)

ಈ ಪಂದ್ಯದಲ್ಲಿ ಕೊಹ್ಲಿ ಕೇವಲ 15 ಬಾಲ್​ಗೆ 21 ರನ್​ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು 20 ಓವರ್​ನಲ್ಲಿ ಇಂಗ್ಲೆಂಡ್​ 144 ರನ್​ ಬಾರಿಸಿ ಭಾರತಕ್ಕೆ 145 ರನ್​ಗಳ ಸವಾಲನ್ನು ನೀಡಿತು. ಈ ಸಂದರ್ಭ ಜಾಣ್ಮೆ ತೋರಿದ ಕೊಹ್ಲಿ ಮಧ್ಯ ಓವರ್​ನಲ್ಲಿ ಜಸ್ಪ್ರೀತ್ ಬುಮ್ರಾಗೆ ಬೌಲಿಂಗ್​ಗೆ ಅವಕಾಶ ನೀಡದೇ 2 ಓವರ್​ಗಳನ್ನು ಅಂತಿಮ ಹಂತದವರೆಗೆ ಕಾಪಾಡಿಕೊಂಡರು.

​ಬಳಿಕ ಕೊನೆಯ 2 ಓವರ್​ನ್ನು ಬುಮ್ರಾಗೆ ನೀಡಿದರು. ಇದರಲ್ಲಿ ಬುಮ್ರಾ 2 ಓವರ್​ನಲ್ಲಿ ಕೇವಲ ಐದು ರನ್ ನೀಡಿ ಭಾರತವನ್ನು ಸೋಲಿನ ದವಡೆಯಿಂದ ಪಾರು ಮಾಡಿದ್ದರು. ಇನ್ನು ಇಂಗ್ಲೆಂಡ್ 20ನೇ ಓವರ್‌ನಲ್ಲಿ 8 ರನ್ ಚೇಸ್ ಮಾಡಲು ವಿಫಲವಾಯಿತು. ಒಟ್ಟಾರೆ ಈ ಪಂದ್ಯದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡದಿದ್ದರೂ ಅವರ ನಾಯಕತ್ವ ಎಲ್ಲರ ಗಮನ ಸೆಳೆಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.