ETV Bharat / sports

ಲಾರ್ಡ್ಸ್​ನಲ್ಲಿ ಬುಮ್ರಾ ನನ್ನನ್ನು ಔಟ್​ ಮಾಡಲು ಪ್ರಯತ್ನಿಸಿದಂತೆ ಕಾಣಲಿಲ್ಲ: ಆ್ಯಂಡರ್ಸನ್​ - James Anderson on Bumrah

ಲಾರ್ಡ್ಸ್​ ಟೆಸ್ಟ್​ ವೇಳೆ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಜೇಮ್ಸ್​ ಆ್ಯಂಡರ್ಸನ್​ಗೆ ಬುಮ್ರಾ 10ಕ್ಕೂ ಹೆಚ್ಚು ಬೌ​ನ್ಸರ್​ಗಳನ್ನು ಎಸೆದಿದ್ದರು. ಇದರಲ್ಲಿ ಒಂದು ಅವರ ಹೆಲ್ಮೆಟ್​ಗೆ ಬಡಿದಿತ್ತು. ಈ ಘಟನೆ ನಡೆದ ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು.

Anderson on Bumrah's barrage of bouncers
http://10.10.50.90//english/20-August-2021/james_2008newsroom_1629428366_536.jpg
author img

By

Published : Aug 24, 2021, 5:58 PM IST

ಲೀಡ್ಸ್​: ಲಾರ್ಡ್ಸ್​ ಟೆಸ್ಟ್​ನಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ನನ್ನನ್ನು ಔಟ್​ ಮಾಡಲು ಪ್ರಯತ್ನಿಸುತ್ತಿದ್ದಂತೆ ಕಾಣಲಿಲ್ಲ ಎಂದು ಇಂಗ್ಲೆಂಡ್​ ಪೇಸರ್​ ಜೇಮ್ಸ್​ ಆ್ಯಂಡರ್ಸನ್ ತಿಳಿಸಿದ್ದಾರೆ. ಆ್ಯಂಡರ್ಸನ್​ ಅವರಿಗೆ ಬೌಲಿಂಗ್ ಮಾಡುವ ವೇಳೆ ಬುಮ್ರಾ ಬೌನ್ಸರ್ ​ದಾಳಿ ನಡೆಸಿದ್ದಕ್ಕೆ ಈ ರೀತಿ ಹೇಳಿದ್ದಾರೆ.

ಲಾರ್ಡ್ಸ್​ ಟೆಸ್ಟ್​ ವೇಳೆ 11ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದಿದ್ದ ಜೇಮ್ಸ್​ ಆ್ಯಂಡರ್ಸನ್​ಗೆ ಬುಮ್ರಾ 10ಕ್ಕೂ ಹೆಚ್ಚು ಬೌ​ನ್ಸರ್​ಗಳನ್ನು ಎಸೆದಿದ್ದರು. ಇದರಲ್ಲಿ ಒಂದು ಅವರ ಹೆಲ್ಮೆಟ್​ಗೆ ಬಡಿದಿತ್ತು. ಈ ಘಟನೆ ನಡೆದ ನಂತರ ಇಬ್ಬರ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಕೊನೆಗೆ ಈ ಬೌನ್ಸರ್​ ಕಾಳಗ ಸೇಡಿನ ರೂಪಕ್ಕೆ ತಿರುಗಿ ಇಂಗ್ಲೆಂಡ್​ ಸೋಲಿಗೂ ಕಾರಣವಾಯಿತು. ಆದರೆ ಬುಮ್ರಾ ಬೌನ್ಸರ್​ ಎಸೆದ ತಂತ್ರಗಾರಿಕೆ ಆ್ಯಂಡರ್ಸನ್​ಗೆ ಅಸಮಾಧಾನ ತಂದಿತ್ತು.

"ನಾನು ಬ್ಯಾಟಿಂಗ್ ಬಂದಾಗ ಆತನ ಅನಿರೀಕ್ಷಿತ ಬೌಲಿಂಗ್​ನಿಂದ ತುಂಬಾ ಆಶ್ಚರ್ಯಕ್ಕೆ ಒಳಗಾದೆ. ಏಕೆಂದರೆ ನಮ್ಮ ಬ್ಯಾಟ್ಸ್​ಮನ್​ಗಳು ಈ ಪಿಚ್​ ನಿಧಾನವಾಗಿದೆ ಎಂದಿದ್ದರು. ಆದರೆ ನಿಧಾನಗತಿ ವಿಕೆಟ್​ನಲ್ಲೂ ಶಾರ್ಟ್​ ಬಾಲ್​ಗಳನ್ನು ಎಸೆಯಲಾಗಿತ್ತು. ಅಲ್ಲದೆ ನಾನು ಬ್ಯಾಟಿಂಗ್ ಬಂದಾಗ ಬುಮ್ರಾ ತಮ್ಮ ಸಾಮಾನ್ಯ ವೇಗದಲ್ಲಿ ಬೌಲಿಂಗ್ ಮಾಡುತ್ತಿಲ್ಲ" ಎಂದು ಹೇಳಿದರು ಎಂದು ರೂಟ್​ ನನಗೆ ತಿಳಿಸಿದರು ಅಂತಾ ಬಿಬಿಸಿ ಪೋಡ್​ಕಾಸ್ಟ್​ ಕಾರ್ಯಕ್ರಮದ ವೇಳೆ ಆ್ಯಂಡರ್ಸನ್​ ತಿಳಿಸಿದ್ದಾರೆ.

"ನಾನೆದುರಿಸಿದ ಮೊದಲ ಎಸೆತವೇ ಗಂಟೆಗೆ 90 ಮೈಲಿ ಇತ್ತು. ಅದು ಬೇಕಂತೆ ಮಾಡಿದಂತಿತ್ತು. ಹೌದಲ್ಲವೇ? ಅವರು ನನ್ನನ್ನು ಔಟ್ ಮಾಡಲು ಪ್ರಯತ್ನಿಸುತ್ತಿಲ್ಲ ಎಂದು ನನಗನ್ನಿಸಿತು. ಇದು ನನ್ನ ವೃತ್ತಿ ಜೀವನದಲ್ಲೇ ಎಂದೂ ಆ ರೀತಿ ಆಲೋಚಿಸಿರಲಿಲ್ಲ. ಅವರು ನನಗೆ 11 - 12 ಎಸೆತಗಳನ್ನು ಬೌಲಿಂಗ್ ಮಾಡಿದರು. ಶಾರ್ಟ್​ ಬಾಲ್​ ಎಸೆಯುವ ಪ್ರಯತ್ನದಲ್ಲಿ ಬ್ಯಾಕ್​ ಟು ಬ್ಯಾಕ್ ನೋ ಬಾಲ್​ ಮಾಡಿದ್ದರು" ಎಂದು ಟೆಸ್ಟ್​​ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಪಡೆದಿರುವ ವೇಗಿ ಹೇಳಿದ್ದಾರೆ.

ಬುಮ್ರಾ ತಾವೂ ಆ್ಯಂಡರ್ಸನ್​ಗೆ ನೀಡಿದ ಚಿಕಿತ್ಸೆ ತಾವು ಬ್ಯಾಟಿಂಗ್ ಬಂದಾಗ ಇಂಗ್ಲಿಷ್ ಬೌಲರ್​ಗಳಿಂದ ಸ್ವೀಕರಿಸಬೇಕಾಯಿತು. ಆದರೂ ಶಮಿ ಜೊತೆ ಸೇರಿ 89 ರನ್​ಗಳ ಅಮೂಲ್ಯ ಜೊತೆಯಾಟವನ್ನು ನೀಡಿ ಪಂದ್ಯದ ಗತಿಯನ್ನೇ ಬದಲಾಯಿಸಿದರು.

ಇದನ್ನು ಓದಿ:Ind Vs Eng​: 53 ವರ್ಷಗಳಿಂದ ಸೋಲೇ ಕಾಣದ ಲೀಡ್ಸ್​ನಲ್ಲಿ ಭಾರತಕ್ಕೆ ಮತ್ತೊಂದು ಗೆಲುವಿನ ಕನಸು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.