ETV Bharat / sports

ಕಷ್ಟದ ದಿನಗಳ ಮೆಲುಕು.. ಕ್ರಿಕೆಟಿಗ ಮೊಹಮದ್​ ಸಿರಾಜ್​ ಹೇಳಿದ 60 ರೂಪಾಯಿ ಕಥೆ..

ಐಪಿಎಲ್​, ಭಾರತ ತಂಡದಲ್ಲಿ ಆಡುವ ಮುನ್ನ ನನ್ನ ಬಳಿ ಪ್ಲಾಟಿನಾ ಬೈಕ್​ ಇತ್ತು. ನನ್ನ ಮನೆಯಿಂದ ದೂರವಿದ್ದ ಉಪ್ಪಲ್​ ಕ್ರೀಡಾಂಗಣಕ್ಕೆ ಹೋಗಲು ಭಾರಿ ಕಷ್ಟ ಪಡುತ್ತಿದ್ದೆ. ಆಟೋ ಚಾಲಕರಾಗಿದ್ದ ನನ್ನ ತಂದೆ ನೀಡುತ್ತಿದ್ದ 60 ರೂಪಾಯಿಯಲ್ಲಿ ಪೆಟ್ರೋಲ್​ ಹಾಕಿಸಿಕೊಂಡು ಕ್ರಿಕೆಟ್​ ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ಬರುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ..

author img

By

Published : Feb 18, 2022, 5:28 PM IST

Siraj
ಮೊಹಮದ್​ ಸಿರಾಜ್

ಬೆಂಗಳೂರು : ಮೊಹಮದ್​ ಸಿರಾಜ್​.. ಸದ್ಯ ಭಾರತ ಕ್ರಿಕೆಟ್​ ತಂಡದ ಮುಂಚೂಣಿ ವೇಗದ ಬೌಲರ್. ಐಪಿಎಲ್​ನಲ್ಲಿ ಬೆಂಗಳೂರು ರಾಯಲ್​ ಚಾಲೆಂಜರ್ಸ್​ ತಂಡದ ಪ್ರಮುಖ ಬೌಲರ್​ ಆಗಿರುವ ಸಿರಾಜ್​, ಈ ಬಾರಿಯ ಹರಾಜಿಗೂ ಮುನ್ನವೇ ತಂಡ ಅವರನ್ನು ರೀಟೇನ್​ ಮಾಡಿಕೊಂಡಿದೆ.

ಇಂತಿಪ್ಪ ಮೊಹಮದ್​ ಸಿರಾಜ್​, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ಈ ಹಿಂದೆ ಹೈದರಾಬಾದ್​ನ ಉಪ್ಪಲ್​ ಕ್ರೀಡಾಂಗಣಕ್ಕೆ ಅಭ್ಯಾಸಕ್ಕೆ ಹೋಗುವಾಗ ತಮ್ಮ ತಂದೆ ಕೇವಲ 60 ರೂಪಾಯಿ ಮಾತ್ರ ನೀಡುತ್ತಿದ್ದರು. ಇದರಲ್ಲಿಯೇ ನಾನು ಕ್ರಿಕೆಟ್​ ಅಭ್ಯಾಸ ಮುಗಿಸಿ ಬರಬೇಕಿತ್ತು ಎಂದು ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ.

ಐಪಿಎಲ್​, ಭಾರತ ತಂಡದಲ್ಲಿ ಆಡುವ ಮುನ್ನ ನನ್ನ ಬಳಿ ಪ್ಲಾಟಿನಾ ಬೈಕ್​ ಇತ್ತು. ನನ್ನ ಮನೆಯಿಂದ ದೂರವಿದ್ದ ಉಪ್ಪಲ್​ ಕ್ರೀಡಾಂಗಣಕ್ಕೆ ಹೋಗಲು ಭಾರಿ ಕಷ್ಟ ಪಡುತ್ತಿದ್ದೆ. ಆಟೋ ಚಾಲಕರಾಗಿದ್ದ ನನ್ನ ತಂದೆ ನೀಡುತ್ತಿದ್ದ 60 ರೂಪಾಯಿಯಲ್ಲಿ ಪೆಟ್ರೋಲ್​ ಹಾಕಿಸಿಕೊಂಡು ಕ್ರಿಕೆಟ್​ ಅಭ್ಯಾಸಕ್ಕೆಂದು ಕ್ರೀಡಾಂಗಣಕ್ಕೆ ಬರುತ್ತಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.

ಬಳಿಕ ಐಪಿಎಲ್​ ಸೇರಿದ ಮೇಲೆ ನನ್ನೆಲ್ಲಾ ಕಷ್ಟಗಳು ಕರಗುತ್ತಾ ಬಂದವು. ತಂದೆ ಆಟೋ ಓಡಿಸುವುದು, ತಾಯಿ ಮನೆಗೆಲಸ ಮಾಡುವುದನ್ನು ನಿಲ್ಲಿಸಿದರು. ಬಾಡಿಗೆ ಮನೆ ಬಿಟ್ಟು ಸ್ವಂತ ಮನೆ ಮಾಡಿಕೊಂಡೆವು. ನನ್ನ ಕುಟುಂಬವನ್ನು ಖುಷಿಯಾಗಿಡಬೇಕೆಂಬ ನನ್ನ ಆಸೆಗೆ ಐಪಿಎಲ್​ ನೀರೆರೆಯಿತು. ಐಪಿಎಲ್​ನಿಂದ ನಾನು ಎಲ್ಲವನ್ನೂ ಕಲಿತಿದ್ದೇನೆ. ಹಲವಾರು ಗೆಳೆಯರನ್ನೂ ನೀಡಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.

ಸಿರಾಜ್​ಗೆ ಶಾಕ್​ ನೀಡಿದ್ದ ವಿರಾಟ್​ ಕೊಹ್ಲಿ : ಆರ್​ಸಿಬಿ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ ತಮಗೆ ಶಾಕ್ ನೀಡಿದ ಬಗ್ಗೆಯೂ ಮಾತನಾಡಿರುವ ಸಿರಾಜ್​, ನನ್ನ ಮನೆಯಲ್ಲಿ ಔತಣಕೂಟ ನೀಡಲು ಇಚ್ಚಿಸಿ ತಂಡದ ಆಟಗಾರರನ್ನುಆಹ್ವಾನಿಸಿದ್ದೆ.

ಅದರಂತೆ ವಿರಾಟ್​ ಕೊಹ್ಲಿಯನ್ನು ಕರೆದಾಗ, ನನಗೆ ಬೆನ್ನು ನೋವಿದೆ ಬರಲಾಗಲ್ಲ ಎಂದಿದ್ದರು. ಪಾರ್ಥಿವ್​ ಪಟೇಲ್​, ಯಜ್ವೇಂದ್ರ ಚಾಹಲ್​ ಸೇರಿದಂತೆ ಎಲ್ಲರೂ ಬಂದಿದ್ದರು. ಈ ವೇಳೆ ವಿರಾಟ್​ ಕೊಹ್ಲಿ ಕೂಡ ದಿಢೀರನೇ ಕಾರಿಳಿದು ಬಂದಿದ್ದು, ಎಲ್ಲರಲ್ಲೂ ಅತ್ಯಾಶ್ಚರ್ಯ ಮೂಡಿಸಿತ್ತು ಎಂದು ಸ್ಮರಿಸಿಕೊಂಡಿದ್ದಾರೆ.

ಓದಿ: ಜೊಕೊವಿಕ್ ಕೊರೊನಾ ಲಸಿಕೆ ಪಡೆಯುವಂತೆ ಒತ್ತಾಯಿಸಿದ ಪೂನಾವಾಲ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.