ETV Bharat / sports

ಭಾರತ ತಂಡದ ವಿರುದ್ಧ ಆಡಲು ಉತ್ಸುಕ: ಕೇನ್ ವಿಲಿಯಮ್ಸನ್ - ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್

ಜೂನ್ 2 ರಂದು ಲಂಡನ್​ನಲ್ಲಿ ಮೊದಲ ಟೆಸ್ಟ್​ ಆರಂಭವಾಗಲಿದೆ. ಜೂನ್ 10ರಂದು ಬರ್ಮಿಂಗ್​ಹ್ಯಾಮ್​ನಲ್ಲಿ 2ನೇ ಟೆಸ್ಟ್​ ಪಂದ್ಯ ನಡೆಯಲಿದೆ. ಈ ಸರಣಿ ಮುಗಿಯುತ್ತಿದ್ದಂತೆ ಜೂನ್​ 18 ರಿಂದ ಭಾರತದ ವಿರುದ್ಧ ಸೌತಾಂಪ್ಟನ್​ನಲ್ಲಿ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿದೆ.

ಕೇನ್ ವಿಲಿಯಮ್ಸನ್
ಕೇನ್ ವಿಲಿಯಮ್ಸನ್
author img

By

Published : May 18, 2021, 2:27 PM IST

ಲಂಡನ್: ಭಾರತದ ವಿರುದ್ಧದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್ ಮತ್ತು ಇಂಗ್ಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯನ್ನಾಡುವ ಸಲುವಾಗಿ ನ್ಯೂಜಿಲ್ಯಾಂಡ್​ ತಂಡದ ಆಟಗಾರರು ಲಂಡನ್​ಗೆ ಬಂದಿಳಿದಿದ್ದಾರೆ.

ಇದೇ ವೇಳೆ ಮಾತನಾಡಿದ ನ್ಯೂಜಿಲ್ಯಾಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ನಲ್ಲಿ ಭಾರತ ತಂಡದ ವಿರುದ್ಧ ಆಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ.

"ಫೈನಲ್‌ನಲ್ಲಿ ವಿರಾಟ್​ ಪಡೆಯ ವಿರುದ್ಧ ಸೆಣಸಾಡುವುದು ನಿಜಕ್ಕೂ ರೋಮಾಂಚನಕಾರಿ ಅನುಭವ. ನಿಸ್ಸಂಶಯವಾಗಿ ನಾವು ಈ ಪಂದ್ಯ ಗೆಲ್ಲುವುದಕ್ಕಾಗಿ ಹೋರಾಟ ನಡೆಸುತ್ತೇವೆ. ಭಾರತವು ಸಾಕಷ್ಟು ಗುಣಮಟ್ಟದ ವೇಗದ ಬೌಲರ್‌ಗಳನ್ನು ಹೊಂದಿದ್ದು, ಅವರು ವಿಭಿನ್ನ ಪರಿಸ್ಥಿತಿಗಳಲ್ಲಿ ಉತ್ತಮವಾಗಿ ಆಡಿದ್ದಾರೆ. ಅದಕ್ಕೆ ತಕ್ಕ ಹಾಗೆ ನಾವು ಆಡುವ ಅನಿವಾರ್ಯತೆ ಇದೆ" ಎಂದು ವಿಲಿಯಮ್ಸನ್‌ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.