ETV Bharat / sports

ಚಹಾಲ್​ರನ್ನು ವಿಶ್ವಕಪ್​ ತಂಡಕ್ಕೆ ಸೇರಿಸಿಕೊಳ್ಳಿ: ಅಭಿಮಾನಿಗಳಿಂದ ಬಿಸಿಸಿಐಗೆ ಮನವಿ

author img

By

Published : Sep 27, 2021, 5:14 PM IST

ಇದೀಗ ಚಹಲ್ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸೆಹ್ವಾಗ್, ಹರ್ಭಜನ್​ ಸಿಂಗ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐಗೆ ವಿಶ್ವಕಪ್​ ತಂಡದಲ್ಲಿ ಬದಲಾವಣೆ ಮಾಡಲು ಮನವಿ ಮಾಡಿದ್ದಾರೆ.ಚಹಾಲ್ ಇಂತಹ ಪ್ರದರ್ಶನವನ್ನು ಕೇವಲ ಕಳೆದ ಎರಡು ಪಂದ್ಯಗಳಲ್ಲಿ ಮಾಡಿಲ್ಲ. ಅವರು ಇಂತಹದನ್ನು ಎಲ್ಲಾ ಸಮಯದಲ್ಲೂ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲೂ ಇದೇ ಪ್ರದರ್ಶನ ನೀಡಿದ್ದರು. ಅವರು ಚುಟುಕು ಮಾದರಿಯಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿದ್ದಾರೆ..

T20 world cup squad
ಯುಜ್ವೇಂದ್ರ ಚಹಾಲ್

ದುಬೈ : ಮುಂದಿನ ತಿಂಗಳು ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ತಂಡದಲ್ಲಿ ಭಾರತದ ಅನುಭವಿ ಸ್ಪಿನ್ನರ್ ಆಗಿರುವ ಯುಜ್ವೇಂದ್ರ ಚಹಾಲ್​ಗೆ ಅವಕಾಶ ನೀಡಬೇಕೆಂದು ಭಾರತೀಯ ಅಭಿಮಾನಿಗಳು ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಇದೇ ತಿಂಗಳ ಆರಂಭದಲ್ಲಿ ಬಿಸಿಸಿಐ ವಿಶ್ವಕಪ್​ಗಾಗಿ ಕೊಹ್ಲಿ ನೇತೃತ್ವದಲ್ಲಿ 15 ಸದಸ್ಯರ ತಂಡವನ್ನ ಪ್ರಕಟಿಸಿತ್ತು. ಆದರೆ, ಕೆಲವು ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟಿರೋದು ಅಚ್ಚರಿ ತಂದಿತ್ತು. ರಿಸ್ಟ್​ ಬೌಲರ್​ ಯುಜ್ವೇಂದ್ರ ಚಹಾಲ್ ಮತ್ತು ಅನುಭವಿ ಆರಂಭಿಕ ಬ್ಯಾಟ್ಸ್​ಮನ್​ ಶಿಖರ್​ ಧವನ್​ರನ್ನು ತಂಡದಿಂದ ಕೈಬಿಟ್ಟಿದ್ದು, ಮಾಜಿ ಕ್ರಿಕೆಟಿಗರ ಸಹಿತ ಕ್ರಿಕೆಟ್​ ಅಭಿಮಾನಿಗಳಿಂದ ಸಾಕಷ್ಟು ಟೀಕೆ ಕೂಡ ಕೇಳಿ ಬಂದಿತ್ತು.

ಇದೀಗ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್​ನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಚಹಲ್ ಬಲಿಷ್ಠ ಮುಂಬೈ ವಿರುದ್ಧ ಕೇವಲ 11 ರನ್​ ನೀಡಿ 3 ವಿಕೆಟ್ ಪಡೆದು ಮಿಂಚಿದ್ದರು. ಇದೇ ಪಂದ್ಯದಲ್ಲಿ ಚಹಲ್​ಗಿಂತ ಉತ್ತಮ ಎಂದು ವಿಶ್ವಕಪ್​ ತಂಡದಲ್ಲಿ ಅವಕಾಶ ಪಡೆದಿದ್ದ ರಾಹುಲ್​ ಚಹರ್ 33 ರನ್​ ಬಿಟ್ಟುಕೊಟ್ಟಿದ್ದರು. ಹಿಂದಿನ ಎರಡೂ ಪಂದ್ಯಗಳಲ್ಲಿ 22 ಮತ್ತು 33 ರನ್​ ನೀಡಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದರು.

ಇದೀಗ ಚಹಲ್ ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಂತೆ ಮಾಜಿ ಕ್ರಿಕೆಟಿಗ ಸೆಹ್ವಾಗ್, ಹರ್ಭಜನ್​ ಸಿಂಗ್ ಸೇರಿದಂತೆ ಕ್ರಿಕೆಟ್ ಅಭಿಮಾನಿಗಳು ಬಿಸಿಸಿಐಗೆ ವಿಶ್ವಕಪ್​ ತಂಡದಲ್ಲಿ ಬದಲಾವಣೆ ಮಾಡಲು ಮನವಿ ಮಾಡಿದ್ದಾರೆ.

ಚಹಾಲ್ ಇಂತಹ ಪ್ರದರ್ಶನವನ್ನು ಕೇವಲ ಕಳೆದ ಎರಡು ಪಂದ್ಯಗಳಲ್ಲಿ ಮಾಡಿಲ್ಲ. ಅವರು ಇಂತಹದನ್ನು ಎಲ್ಲಾ ಸಮಯದಲ್ಲೂ ಮಾಡಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲೂ ಇದೇ ಪ್ರದರ್ಶನ ನೀಡಿದ್ದರು. ಅವರು ಚುಟುಕು ಮಾದರಿಯಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಚೆನ್ನಾಗಿ ಅರಿತಿದ್ದಾರೆ.

ಆದರೆ, ವಿಶ್ವಕಪ್​ ತಂಡಕ್ಕೆ ಅವರನ್ನು ಏಕೆ ಆಯ್ಕೆ ಮಾಡಲಿಲ್ಲ ಎನ್ನುವುದ ಅರ್ಥವಾಗುತ್ತಿಲ್ಲ. ಅವರು(ಚಹಾಲ್​) ಫಾರ್ಮ್​ನಲ್ಲಿಲ್ಲದಿದ್ದರೆ ಅಥವಾ ಅವರಿಗಿಂತ ಉತ್ತಮ ಮತ್ತು ಅಸಾಧಾರಣ ಬೌಲರ್​ರನ್ನು ಆಯ್ಕೆ ಮಾಡಿದ್ದರೆ ಸಮಂಜಸವಾಗುತ್ತಿತ್ತು. ಆದರೆ, ರಾಹುಲ್​ ಚಹರ್​ರಲ್ಲಿ ನಾವು ಅಂತಹ ಪ್ರದರ್ಶನವನ್ನು ಕಾಣುವುದಕ್ಕಾಗುವುದಿಲ್ಲ. ಯಾವುದೇ ತಂಡಕ್ಕಾದರೂ ಫಿಟ್​ ಎನಿಸುವ ಚಹಾಲ್​ರನ್ನು ಕೈಬಿಟ್ಟಿರುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

ಹರ್ಭಜನ್​ ಸಿಂಗ್ ಕೂಡ ಟ್ವೀಟರ್​ನಲ್ಲಿ ಚಹಲ್​ ಆಯ್ಕೆ ಮಾಡದಿರೋದನ್ನು ವಿಡಂಬನಾತ್ಮಕ ಟ್ವೀಟ್ ಮಾಡಿ ಆಯ್ಕೆ ಸಮಿತಿಯನ್ನು ಟ್ರೋಲ್ ಮಾಡಿದ್ದಾರೆ. " ಇಂದಿನ ಪಂದ್ಯದಲ್ಲಿ ಚಹಾಲ್​ ವೇಗವಾಗಿ ಅಥವಾ ನಿಧಾನವಾಗಿ ಬೌಲಿಂಗ್ ಮಾಡಿದ್ರ? 4-0-11-3 ಎಂತಹ ಅದ್ಭುತ ಸ್ಪೆಲ್ ಚಾಂಪಿಯನ್" ಎಂದು ಟ್ವೀಟ್ ಮಾಡಿ ಚಹಾಲ್ ಬೌಲಿಂಗ್​ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಟಿ20 ವಿಶ್ವಕಪ್​ ತಂಡದ ಘೋಷಣೆ ವೇಳೆ ಆಯ್ಕೆ ಸಮಿತಿ ಚಹಾಲ್​ರನ್ನು ತಂಡದಿಂದ ಕೈಬಿಟ್ಟಿದ್ದಕ್ಕೆ ಕಾರಣವೇನು ಎಂದು ಕೇಳಿದ್ದಕ್ಕೆ, ಚಹಲ್​ಗಿಂತ ರಾಹುಲ್ ಚಹರ್ ವೇಗವಾಗಿ ಬೌಲಿಂಗ್ ಮಾಡುತ್ತಾರೆ, ಇದು ಯುಎಇ ಪಿಚ್​ನಲ್ಲಿ ಹೆಚ್ಚು ಅನುಕೂಲವಾಗಲಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ಸಮರ್ಥನೆ ನೀಡಿದ್ದರು.

ಇದನ್ನೂ ಓದಿ:ಗಂಭೀರ ಗಾಯ : ಯುಎಇಯಿಂದ ಭಾರತಕ್ಕೆ ಮರಳಿದ ಕುಲ್ದೀಪ್ ಯಾದವ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.