ನಾಟಿಂಗ್ಹ್ಯಾಮ್: ಟ್ರೆಂಟ್ಬ್ರಿಡ್ಜ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 'ಗೋಲ್ಡನ್ ಡಕ್'ಗೆ ನೆಟ್ಟಿಗರು ತಹರೇವಾರಿ ಪೋಸ್ಟ್ ಮೂಲಕ ವಿರಾಟ್ ಕಾಲೆಳೆದಿದ್ದಾರೆ.
ಭಾರತ ತಂಡವು ಪೂಜಾರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆ, ಕ್ರೀಸ್ ಬಂದ ಕೊಹ್ಲಿ ಆ್ಯಂಡರ್ಸನ್ ಎಸೆದ ಹೊರ ಹೋಗುತ್ತಿದ್ದ ಬೌಲ್ ಆಡುವ ಪ್ರಯತ್ನದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿ 'ಗೋಲ್ಡನ್ ಡಕ್'ಗೆ ಪೆವಿಲಿಯನ್ಗೆ ಮರಳಿದ್ದರು. ವಿರಾಟ್ ಮೇಲೆ ಭಾರಿ ನಿರೀಕ್ಷೆ ಹೊಂದಿದ್ದ ಅಭಿಮಾನಿಗಳಿಗೆ ಇದು ಬೇಸರ ತರಿಸಿದೆ.
-
Oh Jimmy Jimmy 😜😜
— Michael Vaughan (@MichaelVaughan) August 5, 2021 " class="align-text-top noRightClick twitterSection" data="
">Oh Jimmy Jimmy 😜😜
— Michael Vaughan (@MichaelVaughan) August 5, 2021Oh Jimmy Jimmy 😜😜
— Michael Vaughan (@MichaelVaughan) August 5, 2021
ಬಳಿಕ ಕೊಹ್ಲಿಯ ಗೋಲ್ಡನ್ ಡಕ್ ಔಟ್ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ಗೆ ಗುರಿಯಾಗಿದೆ. 'ಕೊನೆಗೂ ಭಾರತಕ್ಕೆ ಗೋಲ್ಡ್ ಸಿಕ್ಕಿದೆ. ಟೋಕಿಯೊ ಒಲಿಂಪಿಕ್ಸ್ನಲ್ಲಿ ಗೋಲ್ಡ್ ಪದಕ ಸಿಗದಿದ್ದರೂ, ಕೊಹ್ಲಿ ಅದನ್ನು ಪಡೆದಿದ್ದಾರೆ' ಎಂದು ಟೀಕಿಸಿದ್ದಾರೆ. ಅಲ್ಲದೆ, ಗೋಲ್ಡನ್ ಅಂದರೇನು ಅಂತ ಗೊತ್ತಿರಲಿಲ್ಲ, ತಿಳಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್' ಎಂದು ಕೂಡ ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ಮಾಜಿ ಆಟಗಾರರಾದ ಮೈಕಲ್ ವಾನ್ ಹಾಗೂ ಇಯಾನ್ ಬೆಲ್ ಕೂಡ, ಪ್ರತಿಕ್ರಿಯಿಸಿದ್ದು, 'ಓಹ್ ಜಿಮ್ಮಿ ಜಿಮ್ಮಿ' ಎಂದು ಟ್ವೀಟ್ ಮಾಡಿದ್ದಾರೆ.
-
Oh Jimmy Jimmy 😜😜
— Michael Vaughan (@MichaelVaughan) August 5, 2021 " class="align-text-top noRightClick twitterSection" data="
">Oh Jimmy Jimmy 😜😜
— Michael Vaughan (@MichaelVaughan) August 5, 2021Oh Jimmy Jimmy 😜😜
— Michael Vaughan (@MichaelVaughan) August 5, 2021
'ಇಂಗ್ಲೆಂಡ್ನ ವಿಂಟೇಜ್ ಕೊಹ್ಲಿ ಮತ್ತೆ ಬಂದಿದ್ದಾರೆ' ಎಂದು ಈ ಹಿಂದಿನ 2014ರ ಇಂಗ್ಲೆಂಡ್ ಪ್ರವಾಸದಲ್ಲಿನ ಕೊಹ್ಲಿ ವೈಫಲ್ಯತೆಯನ್ನು ಅಭಿಮಾನಿಗಳು ಮರಳಿ ನೆನಪಿಸಿದ್ದಾರೆ.
-
Vintage Kohli of England is back...#IndvsEng
— Vinay Kumar Dokania (@VinayDokania) August 5, 2021 " class="align-text-top noRightClick twitterSection" data="
">Vintage Kohli of England is back...#IndvsEng
— Vinay Kumar Dokania (@VinayDokania) August 5, 2021Vintage Kohli of England is back...#IndvsEng
— Vinay Kumar Dokania (@VinayDokania) August 5, 2021
2014ರ ಇಂಗ್ಲೆಂಡ್ ಸರಣಿಯಲ್ಲಿ ಭಾರಿ ವೈಫಲ್ಯ ಕಂಡಿದ್ದ ವಿರಾಟ್ ಆ್ಯಂಡರ್ಸನ್ ಎದುರು ತಿಣಕಾಡಿದ್ದರು. ಬಳಿಕ 2018ರ ಟೂರ್ನಲ್ಲಿ 2 ಶತಕ ಸೇರಿದಂತೆ 593 ರನ್ ಗಳಿಸಿದ್ದ ವಿರಾಟ್ ಆ್ಯಂಡರ್ಸನ್ ಸೇರಿದಂತೆ ಇಂಗ್ಲೆಂಡ್ ಬೌಲರ್ಗಳ ಬೆವರಿಳಿಸಿದ್ದರು.
ಇದನ್ನೂ ಓದಿ: ಧೋನಿ ಹಿಂದಿಕ್ಕಿ ಟೆಸ್ಟ್ ಕ್ರಿಕೆಟ್ನಲ್ಲಿ ಕೆಟ್ಟ ದಾಖಲೆಗೆ ಪಾತ್ರರಾದ ವಿರಾಟ್ ಕೊಹ್ಲಿ