ETV Bharat / sports

ವಿಶ್ವಕಪ್​ನಲ್ಲಿ ವೇಗದ ಶತಕ ದಾಖಲಿಸಿದ ಫಖರ್ ಜಮಾನ್: ಹಸನ್ ಅಲಿಗೆ ಶತಕ ವಿಕೆಟ್​ ಸಂಭ್ರಮ

author img

By ETV Bharat Karnataka Team

Published : Nov 4, 2023, 8:18 PM IST

ನ್ಯೂಜಿಲೆಂಡ್​ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಿ ಆರಂಭಿಕ ಆಟಗಾರ ಫಖರ್ ಜಮಾನ್ ವಿಶ್ವಕಪ್​ನಲ್ಲಿ ಪಾಕ್​ ಪರ ವೇಗದ ಶತಕ ದಾಖಲಿಸಿದ್ದಾರೆ.

Fakhar Zaman
Fakhar Zaman

ಬೆಂಗಳೂರು : ಪಾಕಿಸ್ತಾನದ ಆರಂಭಿಕ ಆಟಗಾರ ಫಖರ್ ಜಮಾನ್ ಅವರು ವಿಶ್ವಕಪ್ ಇತಿಹಾಸದಲ್ಲಿ ತಮ್ಮ ದೇಶದ ಪರ ವೇಗದ ಶತಕ ಸಿಡಿಸುವ ಮೂಲಕ ಶನಿವಾರ ಇತಿಹಾಸ ನಿರ್ಮಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಜಮಾನ್ ಈ ಸಾಧನೆಯನ್ನು ಮಾಡಿದ್ದಾರೆ.

2007ರ ವಿಶ್ವಕಪ್‌ನಲ್ಲಿ ಇಮ್ರಾನ್ ನಜೀರ್ ಅವರ 95 ಬಾಲ್​ ಆಡಿ ಶತಕ ಗಳಿಸಿದ್ದು, ಪಾಕ್​ ಪರ ವಿಶ್ವಕಪ್​ನ ವೇಗದ ಶತಕವಾಗಿತ್ತು. ಕೀವೀಸ್​ ವಿರುದ್ಧ ಪಾಕ್​ ಆರಂಭಿಕ ಆಟಗಾರ ಫಖರ್ ಜಮಾನ್ ಕೆವಲ 63 ಬಾಲ್​ಗಳನ್ನು ಎದುರಿಸಿ ಶತಕ ಪೂರೈಸಿಕೊಂಡರು. ಕಳೆದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ 81 ರನ್​ಗೆ ಔಟ್​ ಆಗಿ 29 ರನ್​ನಿಂದ ಶತಕ ವಂಚಿತರಾಗಿದ್ದ ಜಮಾನ್​ ಇಂದು ಅದೇ ಫಾರ್ಮ್​ ಮುಂದುವರೆಸಿ ದಾಖಲೆಯ ಶತಕ ಮಾಡಿಕೊಂಡಿದ್ದಾರೆ.

160 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 155 ಇನ್ನಿಂಗ್ಸ್‌ ಆಡಿರುವ ಜಮಾನ್ 34.90ರ ಸರಾಸರಿಯಲ್ಲಿ 5,096 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ 210 ರನ್ ಗಳಿಸಿರುವುದು ಅವರ ಬೆಸ್ಟ್​ ಸ್ಕೋರ್ ಆಗಿದೆ. ಮೂರು ಟೆಸ್ಟ್​ ಪಂದ್ಯದಲ್ಲಿ ಎರಡು ಅರ್ಧಶತಕದಿಂದ 32.00 ಸರಾಸರಿಯಲ್ಲಿ 192 ರನ್ ಗಳಿಸಿದ್ದಾರೆ. 81 ಏಕದಿನ ಪಂದ್ಯ ಆಡಿದ್ದು, 46.90ರ ಸರಾಸರಿಯಲ್ಲಿ 3,471 ರನ್‌ಗಳನ್ನು ಗಳಿಸಿದ್ದಾರೆ. ಇದರಲ್ಲಿ 11 ಶತಕ, 16 ಅರ್ಧಶತಕ ಒಳಗೊಂಡಿದೆ. 76 ಟಿ -20 ಆಡಿರುವ ಅವರು 128.17 ರ ಸ್ಟ್ರೈಕ್ ರೇಟ್‌ನಲ್ಲಿ 1,433 ರನ್‌ ಕಲೆಹಾಕಿದ್ದಾರೆ.

ಶತಕ ವಿಕೆಟ್​ ಪಡೆದ ಹಸನ್​ ಅಲಿ: ಕಿವೀಸ್ ವಿರುದ್ಧದ ಪಂದ್ಯದಲ್ಲಿ ಪಾಕ್​ ಬೌಲರ್​ಗಳು ದಂಡಿಸಿಕೊಂಡರೂ ದಾಖಲೆಗಳನ್ನು ಮಾಡಿದ್ದಾರೆ. ಪಾಕಿಸ್ತಾನದ ವೇಗಿ ಹಸನ್ ಅಲಿ ಇಂದು 100 ಏಕದಿನ ವಿಕೆಟ್‌ಗಳನ್ನು ಪೂರೈಸಿದ್ದಾರೆ. ಕಿವೀಸ್​ ವಿರುದ್ಧದ ವಿಶ್ವಕಪ್​ ಪಂದ್ಯದಲ್ಲಿ ಅಲಿ ಈ ಮೈಲಿಗಲ್ಲು ತಲುಪಿದರು.

ಪಂದ್ಯದಲ್ಲಿ ಹಸನ್ ಅಲಿ 10 ಓವರ್‌ ಮಾಡಿ 8.2 ಎಕಾನಮಿ ರೇಟ್‌ನಲ್ಲಿ 82 ರನ್ ನೀಡಿ ಒಂದು ವಿಕೆಟ್ ಪಡೆದರು. ಪಂದ್ಯದ ಮಟ್ಟಿಗೆ ಅವರು ದುಬಾರಿ ಆದರೂ ಡೆವೊನ್ ಕಾನ್ವೇ ಅವರ ವಿಕೆಟ್ ಪಡೆಯುವ ಮೂಲಕ ಶತಕದ ವಿಕೆಟ್​ ಸಾಧನೆ ಮಾಡಿದರು. ಪಾಕಿಸ್ತಾನಿ ಬೌಲರ್‌ ಪೈಕಿ ಶತಕ ವಿಕೆಟ್​ ಪಡೆದ ಐದನೇ ವೇಗದ ಬೌಲರ್​ ಆಗಿದ್ದಾರೆ. ಬಾಂಗ್ಲಾ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದ ಶಾಹೀನ್ ಅಫ್ರಿದಿ 50 ಪಂದ್ಯಗಳಲ್ಲಿ ಈ ಮೈಲಿಗಲ್ಲು ಸಾಧಿಸಿ ಪಾಕ್​ ಪರ ಮೊದಲಿಗರಾಗಿದ್ದಾರೆ.

150ನೇ ವಿಕೆಟ್​ ಪಡೆದ ರೌಫ್​: ಇದೇ ಪಂದ್ಯದಲ್ಲಿ ಕಿವೀಸ್ ಬ್ಯಾಟರ್​ಗಳ ಕೈಯಿಂದ ಸರಿಯಾಗಿ ಚಚ್ಚಿಸಿಕೊಂಡರೂ ಹ್ಯಾರಿಸ್​ ರೌಫ್​ 150ನೇ ಅಂತಾರಾಷ್ಟ್ರೀಯ ವಿಕೆಟ್​ ಪಡೆದ ಸಾಧನೆ ಮಾಡಿದ್ದಾರೆ. ಕಿವೀಸ್ ಬ್ಯಾಟರ್​ ಡೆರಿಲ್ ಮಿಚೆಲ್ ಅವರ ವಿಕೆಟ್ ಪಡೆದ ರೌಫ್​ ಈ ಮೈಲಿಗಲ್ಲನ್ನು ತಲುಪಿದ್ದಾರೆ. 99 ಪಂದ್ಯಗಳಲ್ಲಿ, ರೌಫ್ 150 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು 24 ಕ್ಕಿಂತ ಹೆಚ್ಚು ಸರಾಸರಿ ಬೌಲಿಂಗ್​​ ಮಾಡಿ ಪಡೆದಿದ್ದಾರೆ. 18 ರನ್​ ಬಿಟ್ಟುಕೊಟ್ಟು 5 ವಿಕೆಟ್​ ಕಬಳಿಸಿದ್ದು, ಅವರ ಬೆಸ್ಟ್​ ಅಂಕಿ- ಅಂಶವಾಗಿದೆ.

ಇದನ್ನೂ ಓದಿ: ವಿಶ್ವಕಪ್​ ಕ್ರಿಕೆಟ್​: ಕಿವೀಸ್​ ವಿರುದ್ಧ 21 ರನ್​ಗಳ ಜಯ ದಾಖಲಿಸಿದ ಪಾಕ್..​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.