ಹೈದರಾಬಾದ್(ಡೆಸ್ಕ್): ಕಳೆದ ಮೂರು ದಿನಗಳಿಂದ ರಷ್ಯಾ ಸೇನೆ ಉಕ್ರೇನ್ ಮೇಲೆ ದಾಳಿ ಮಾಡುತ್ತಿದೆ. ಭಾರತದ ಪ್ಯಾರಾಲಿಂಪಿಯನ್ ಶರದ್ ಕುಮಾರ್ ಅವರು ತಮ್ಮ ಕೋಚ್ ಉಕ್ರೇನ್ನ ನಿಕಿಟಿನ್ ಯೆವ್ಹೆನ್ ಅವರ ಪರಿಸ್ಥಿತಿಯನ್ನು ನೆನೆದು ಚಿಂತಾಕ್ರಾಂತನಾಗಿದ್ದೇನೆ ಎಂದು ತಿಳಿಸಿದ್ದಾರೆ.
2020ರ ಟೋಕಿಯೋ ಪ್ಯಾರಾಲಿಂಪಿಕ್ಸ್ ಹೈ ಜಂಪನ್ನಲ್ಲಿ ನಿಕಿಟಿನ್ ಅವರ ಮಾರ್ಗದರ್ಶನದಲ್ಲಿ ಕಂಚಿನ ಪದಕ ಗೆದ್ದಿದ್ದರು. 2017ರಿಂದ 2020ರ ವರೆಗೆ ಉಕ್ರೇನ್ ಕೋಚ್ ಗರಡಿಯಲ್ಲಿ ಹೈ ಜಂಪ್ನ ಸೂಕ್ಷ್ಮ ವ್ಯತ್ಯಾಸಗಳನ್ನು ಅವರು ಕಲಿತಿದ್ದರು. ಈ ಟಿವಿ ಭಾರತ್ ಸಂಪರ್ಕಿಸಿದಾಗ ಆತಂಕದಲ್ಲೇ ಮಾತನಾಡಿದ ಶರದ್ ಕುಮಾರ್," ನಾನು ಕೋಚ್ ಜೊತೆಗೆ ನಿನ್ನೆ ಸಂಜೆ ಮಾತನಾಡಿದೆ. ಅವರು ವಾಸಿಸುವ ಪ್ರದೇಶದಲ್ಲಿ ಬಾಂಬ್ಗಳ ಶಬ್ಧ ಕೇಳಿಸುತ್ತಿದ್ದು, ಭಯದಲ್ಲಿರುವುದಾಗಿ ತಿಳಿಸಿದರು, ಪ್ರಸ್ತುತ ಅವರು ತಮ್ಮ ಮನೆಯ ಅಂಡರ್ ಗ್ರೌಂಡ್ನಲ್ಲಿ ಇರುವುದಾಗಿ ನನಗೆ ತಿಳಿಸಿದ್ದಾರೆ" ಎಂದು ಮಾಹಿತಿ ನೀಡಿದರು.
ನಿಕಿಟಿನ್ ವಾಸಿಸುವ ಖರ್ಕಿವ್ ಕೇವಲ ಉಕ್ರೇನ್ ರಾಜಧಾನಿ ಕೈವ್ಗೆ 500 ಕಿ.ಮೀ ದೂರವಿದೆ. ಈಗಾಗಲೇ ರಷ್ಯಾದ ಸೇನೆ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ಮಾಡುತ್ತಿರುವುದರಿಂದ ಆತಂಕ ಇನ್ನುಷ್ಟು ಹೆಚ್ಚಿದೆ. ರಷ್ಯನ್ ಮಿಸೈಲ್ಗಳು ಯಾವುದೇ ಪಾಸ್ಪೋರ್ಟ್ ನೋಡುವುದಿಲ್ಲ". ಹಾಗಾಗಿ ಅವರ ಕುಟುಂಬಕ್ಕೆ ಏನಾಗುವುದೋ ಎಂಬ ಆತಂಕ ನನ್ನಲ್ಲಿ ಮನೆಮಾಡಿದೆ. ನಾನು ಉಕ್ರೇನ್ನಲ್ಲಿ 4 ವರ್ಷಗಳಿದ್ದೆ, ಅವರು ನನ್ನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು" ಎಂದು ಶರದ್ ನೋವಿನಲ್ಲಿ ತಿಳಿಸಿದ್ದಾರೆ.
ಶರದ್ ಕುಮಾರ್ ಖರ್ಕಿವ್ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್ನಲ್ಲಿ ಇಂಟರ್ ನ್ಯಾಷನಲ್ ಬಿಸಿನೆಸ್ ಮ್ಯಾನೇಜ್ಮೆಂಟ್ ಓದಿದ್ದಾರೆ. ಹಾಗಾಗಿ ಅಲ್ಲಿರುವ ಕೆಲವು ಸ್ನೇಹಿತರು ಇವರನ್ನು ಸಂಪರ್ಕಿಸಿ ತಮ್ಮ ಗೋಳನ್ನು ಹಂಚಿಕೊಂಡಿದ್ದು, ಏನಾದರೂ ಸಹಾಯ ಮಾಡಬಹುದೇ ಎಂದು ಕೇಳುತ್ತಿದ್ದಾರೆ ಎಂದು ಶರದ್ ಈ ಸಂದರ್ಭದಲ್ಲಿ ತಿಳಿಸಿದರು.
"ಅವರೆಲ್ಲರು(ಸ್ನೇಹಿತರು) ಅಳುತ್ತಿದ್ದಾರೆ. ಅವರು, ನೀವು ಹೈಪ್ರೊಫೈಲ್ ಅಥ್ಲೀಟ್ ಆಗಿದ್ದೀರಾ, ನಿಮ್ಮಿಂದ ಏನಾದರೂ ಸಹಾಯ ಮಾಡಿ" ಎಂದು ಕೇಳುತ್ತಿದ್ದಾರೆ. ಆದರೆ ನಿಸ್ಸಹಾಯಕ ಸ್ಥಿತಿಯಲ್ಲಿ ಮಾತನಾಡಿದ ಶರದ್ "ತಮ್ಮಿಂದ ಸ್ನೇಹಿತರು ಯುದ್ದವನ್ನು ಎದುರಿಸಲು ತಡೆಯುವಂತಹ ಸಂಪರ್ಕವಿಲ್ಲ" ಎಂದರು.
"ನನ್ನಿಂದ ಏನೂ ಮಾಡಲಾಗುವುದಿಲ್ಲ, ನನ್ನ ಕೈಯಲ್ಲಿ ಏನೂ ಇಲ್ಲ. ನಾನೂ ಅವರಂದುಕೊಂಡಂತಹ ಪ್ರಸಿದ್ಧ ಅಥ್ಲೀಟ್ ಕೂಡ ಅಲ್ಲ. ಒಂದಷ್ಟು ಸಾಧನೆ ಮಾಡಿರುವ ಒಬ್ಬ ಸಾಧಾರಣ ಅಥ್ಲೀಟ್. ನನ್ನ ಬಳಿ ಅವರಿಗೆ ಸಹಾಯ ಮಾಡಬಲ್ಲಂತಹ ಯಾವುದೇ ಸಂಪರ್ಕಗಳಿಲ್ಲ ಎಂದು ಈ ಟಿವಿ ಭಾರತದ ಜೊತೆಗೆ ತಮ್ಮ ಅಸಹಾಯಕತೆ ಹೇಳಿಕೊಂಡ ಕುಮಾರ್, ತಾವೂ ರಷ್ಯಾ ಯುದ್ದವನ್ನು ನಿಲ್ಲಿಸಬೇಕೇಂದು ಬಯಸುತ್ತೇನೆ" ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಉಕ್ರೇನ್ ಮೇಲೆ ಆಕ್ರಮಣ ; ರಷ್ಯಾ ವಿರುದ್ಧ 2022ರ ವಿಶ್ವಕಪ್ ಪ್ಲೇ ಆಫ್ ಆಡದಿರಲು ಪೋಲೆಂಡ್ ನಿರ್ಧಾರ