ETV Bharat / sports

ಪಾಕಿಸ್ತಾನಕ್ಕಿಂತ ಇಂಗ್ಲೆಂಡ್​ ಬಲಿಷ್ಠ ತಂಡ: ಮಾಜಿ ನಾಯಕ ಮುಷ್ತಾಕ್​ ಮೊಹಮದ್​ - exclusive interview

ನಾಳೆ ನಡೆಯುವ ಟಿ20 ವಿಶ್ವಕಪ್​ನ ಫೈನಲ್​ ಕದನ ಕುತೂಹಲದ ಬಗ್ಗೆ ಪಾಕಿಸ್ತಾನದ ಮಾಜಿ ಆಟಗಾರ, ನಾಯಕ ಮುಷ್ತಾಕ್​ ಮೊಹಮದ್​ ಈಟಿವಿ ಭಾರತ್​ ಜೊತೆ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್​ -ಪಾಕ್​ ನಡುವಿನ ಪಂದ್ಯ 30 ವರ್ಷಗಳ ಇತಿಹಾಸವನ್ನು ಮರುಕಳಿಸಲಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

former-pak-skipper-mushtaq-mohammad
ಮಾಜಿ ನಾಯಕ ಮುಷ್ತಾಕ್​ ಮೊಹಮದ್​
author img

By

Published : Nov 12, 2022, 7:45 PM IST

ಕೋಲ್ಕತ್ತಾ: ಟಿ20 ವಿಶ್ವಕಪ್​ನ ಫೈನಲ್​ ಪಂದ್ಯ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿದ್ದು, ಪಾಕಿಸ್ತಾನ ಮತ್ತು ಇಂಗ್ಲೆಂಡ್​ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ನ್ಯೂಜಿಲ್ಯಾಂಡ್​ ಸೋಲಿಸಿ ಪಾಕಿಸ್ತಾನ ಮೊದಲ ತಂಡವಾಗಿ ಫೈನಲ್​ ಪ್ರವೇಶಿಸಿದ್ದರೆ, ಭಾರತವನ್ನು ಹೀನಾಯವಾಗಿ ಸೋಲಿಸಿ ಆಂಗ್ಲರು ಪ್ರಶಸ್ತಿ ಸುತ್ತು ತಲುಪಿದ್ದಾರೆ. ಪಾಕ್​ ಮತ್ತು ಇಂಗ್ಲೆಂಡ್​ ನಡುವಿನ ಈ ಪಂದ್ಯ 30 ವರ್ಷಗಳ ವಿಶ್ವಕಪ್​ ದಾಖಲೆಯನ್ನು ಮರುಕಳಿಸುವ ಸಾಧ್ಯತೆ ಇದೆ.

30 ವರ್ಷಗಳ ಹಿಂದೆ ಇದೇ ಮೆಲ್ಬೋರ್ನ್​ ಕ್ರೀಡಾಂಗಣದಲ್ಲಿ ಪಾಕಿಸ್ತಾನ, ಇಂಗ್ಲೆಂಡ್​ ತಂಡವನ್ನು ಸೋಲಿಸಿ ವಿಶ್ವಕಪ್​ ಎತ್ತಿಹಿಡಿದಿತ್ತು. ಈ ದಾಖಲೆಯನ್ನು ಮತ್ತೆ ಮರುಕಳಿಸಲು ಪಾಕಿಸ್ತಾನ ಸಜ್ಜಾಗಿದ್ದರೆ, ಇಂಗ್ಲೆಂಡ್​ ಎರಡನೇ ಐಸಿಸಿ ವಿಶ್ವಕಪ್​ ವಶಕ್ಕೆ ತಂತ್ರ ರೂಪಿಸಿದೆ. ನಾಳಿನ ಪಂದ್ಯದ ಬಗ್ಗೆ ಪಾಕಿಸ್ತಾನ ಮಾಜಿ ಆಲ್​ರೌಂಡರ್​, ನಾಯಕ ಮುಷ್ತಾಕ್ ಮೊಹಮ್ಮದ್ ಈಟಿವಿ ಭಾರತ್​ ಜೊತೆ ಮಾತನಾಡಿದ್ದು, ಪಂದ್ಯದ ರೋಚಕತೆಯ ಬಗ್ಗೆ ಹೇಳಿದ್ದಾರೆ.

30 ವರ್ಷಗಳ ಹಿಂದಿನ ದಾಖಲೆ ಇಲ್ಲಿ ನಿರ್ಮಾಣವಾಗುತ್ತಾ?​: ಆಸ್ಟ್ರೇಲಿಯಾದ ಮೆಲ್ಬೋರ್ನ್​ನಲ್ಲಿ ಇತ್ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ. 30 ವರ್ಷಗಳ ಹಿಂದಿನ ದಾಖಲೆಯನ್ನು ತಂಡ ಮರಳಿ ಬರೆಯುವ ವಿಶ್ವಾಸವಿದೆ. ಇದೊಂದು ಉತ್ತಮ ಪಂದ್ಯವಾಗಿರಲಿದ್ದು, ರೋಚಕತೆ ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ಇಂಗ್ಲೆಂಡ್ ಮತ್ತು ಪಾಕಿಸ್ತಾನ ತಂಡಗಳನ್ನು ಬಲಾಬಲವೇನು?​: ಇಂಗ್ಲೆಂಡ್​ ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದು ಎಂಬುದು ಸರ್ವವಿಧಿತ. ಬಲಿಷ್ಠ ಭಾರತವನ್ನು ಸದೆಬಡಿದು ಫೈನಲ್​ಗೆ ಬಂದಿದೆ. ಇದು ಆ ತಂಡದ ಶಕ್ತಿ ತೋರಿಸುತ್ತದೆ. ಪಾಕಿಸ್ತಾನ ಅದೃಷ್ಟದಾಟದಲ್ಲಿ ಫೈನಲ್​ಗೆ ಬಂದರೂ ಉತ್ತಮ ಪ್ರದರ್ಶನ ತೋರಿದೆ. ಅಂತಿಮ ಹಣಾಹಣಿಗೆ ಬಂದಿರುವುದು ತಂಡ ಇದೇ ಖದರ್​ ಮುಂದುವರಿಸಿದಲ್ಲಿ ಪ್ರಶಸ್ತಿ ಪಡೆಯಲಿದೆ.

ಪಾಕಿಸ್ತಾನದ ಈವರೆಗಿನ ಜರ್ನಿ ಹೇಗಿತ್ತು?: ಟೂನಿರ್ಯ ಆರಂಭಿಕ ಪಂದ್ಯಗಳಲ್ಲಿನ ಹೀನಾಯ ಸೋಲು ತಂಡವನ್ನು ಕುಗ್ಗಿಸಿತ್ತು. ಬಳಿಕ ಪುಟಿದೆದ್ದ ತಂಡ ಗೆಲ್ಲುತ್ತಾ ಸಾಗಿ ಬಂದಿದ್ದು ಅದ್ಭುತವೇ ಸರಿ. ಅದರಲ್ಲೂ ನೆದರ್​ಲ್ಯಾಂಡ್​ ತಂಡ ಪಾಕಿಸ್ತಾನಕ್ಕೆ ಹೆಚ್ಚಿನ ಉಪಕಾರ ಮಾಡಿದೆ. ಅದೃಷ್ಟದ ಬಾಗಿಲು ತೆರೆದುಕೊಟ್ಟಿತು. ಬೌಲಿಂಗ್​ ಪಡೆಯೇ ತಂಡದ ಶಕ್ತಿಯಾಗಿದೆ. ಹಿಂಬಾಗಿಲಿನಿಂದ ಬಂದ ತಂಡ ಫೈನಲ್​ಗೆ ಬಂದರೂ, ಪ್ರದರ್ಶನವನ್ನು ಅಲ್ಲಗಳೆಯುವಂತಿಲ್ಲ.

ತಂಡದ ಪ್ರದರ್ಶನ 1992 ರ ವಿಶ್ವಕಪ್‌ನಂತೆಯೇ ಇದೆಯೇ?​: ಹೌದು, 1992 ರ ವಿಶ್ವಕಪ್​ನಲ್ಲೂ ಪಾಕಿಸ್ತಾನ ಪಂದ್ಯಾವಳಿಯಿಂದ ನಿರ್ಗಮಿಸುವ ಹಾದಿಯಲ್ಲಿ ಎದ್ದು ಫೈನಲ್​ ತಲುಪಿ ಪ್ರಶಸ್ತಿ ಜಯಿಸಿತ್ತು. ಈ ಬಾರಿಯೂ ಅದೇ ತೆರನಾದ ಪರಿಸ್ಥಿತಿ ಮರುಕಳಿಸಿದೆ. ಅಂದು ಸೆಮಿಫೈನಲ್‌ನಲ್ಲಿ ನ್ಯೂಜಿಲ್ಯಾಂಡ್​​ ತಂಡವನ್ನು ಸೋಲಿಸಲಾಗಿತ್ತು. ಈಗಲೂ ಅದೇ ಜರುಗಿದೆ. ಬಳಿಕ ಇಂಗ್ಲೆಂಡ್​ ಫೈನಲ್​ನಲ್ಲಿ ಎದುರಾಗಿತ್ತು. ಬಳಿಕ ನಡೆದಿದ್ದೆಲ್ಲವೂ ಇತಿಹಾಸ. ಈ ಬಾರಿಯೂ ಪಾಕಿಸ್ತಾನ ವಿಶ್ವಕಪ್​ ಗೆದ್ದು ಆ ಇತಿಹಾಸವನ್ನು ಮರಳಿ ಬರೆಯಲಿದೆ ಎಂಬ ವಿಶ್ವಾಸವಿದೆ.

ಇತ್ತಂಡಗಳ ಆಟಗಾರರಲ್ಲಿ ಯಾರ ಪಾತ್ರ ಹೆಚ್ಚಿರಲಿದೆ?: ತಂಡದ ಹನ್ನೊಂದು ಜನರೂ ತಮ್ಮ ಹೊಣೆಯನ್ನು ನಿಭಾಯಿಸಬೇಕು. ಬ್ಯಾಟ್ಸಮ್​ನಗಳು ರನ್​ ಗಳಿಸಿದರೆ, ಬೌಲರ್​​ಗಳು ವಿಕೆಟ್​ ಪಡೆಯಬೇಕು. ಎರಡೂ ತಂಡಗಳ ಆಟಗಾರರೂ ಇದನ್ನು ಮಾಡಬೇಕು. ತಂಡದ ರಣತಂತ್ರ ಡ್ರೆಸ್ಸಿಂಗ್ ರೂಮಿನಲ್ಲಿ ಸಿದ್ಧವಾಗುತ್ತದೆ. ಯಾರನ್ನು ಟಾರ್ಗೆಟ್​ ಮಾಡಬೇಕು ಎಂಬುದು ಅಲ್ಲಿ ನಿರ್ಧಾರವಾಗುತ್ತದೆ. ಹೀಗಾಗಿ ಮೈದಾನದಲ್ಲಿ ಯಾರು ಸಿಡಿಯಲಿದ್ದಾರೆ ಎಂಬುದು ಊಹಿಸುವುದು ತುಸು ಕಷ್ಟಕರ ಸಂಗತಿ.

ಇಂಗ್ಲೆಂಡ್​- ಪಾಕಿಸ್ತಾನ ತಂಡಗಳ ಬಲ- ಲೋಪವೇನು?​: ಇಂಗ್ಲೆಂಡ್​ ಎಲ್ಲಾ ವಿಭಾಗಗಳಲ್ಲೂ ಬಲಿಷ್ಠವಾಗಿದೆ. ಹೆಚ್ಚು ವೃತ್ತಿಪರ ಆಟಗಾರರಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ನಲ್ಲಿ ಮಿಂಚುವ ಆಲ್​ರೌಂಡರ್​ಗಳಿದ್ದಾರೆ. ಹೀಗಾಗಿಯೇ ಅದು ಫೈನಲ್​ನಲ್ಲಿದೆ. ಇನ್ನು ಪಾಕಿಸ್ತಾನ ಅದೃಷ್ಟದ ಆಧಾರದ ಮೇಲೆ ಫೈನಲ್​ಗೆ ಬಂದರೂ ಉತ್ತಮ ಬೌಲಿಂಗ್​ ಪಡೆಯನ್ನು ಹೊಂದಿದೆ. ಬ್ಯಾಟಿಂಗ್ ಪಡೆಯನ್ನು ತಂಡ ಸ್ವಲ್ಪ ಸುಧಾರಿಸಿಕೊಳ್ಳಬೇಕಿದೆ. ತಂಡ ಪ್ರಶಸ್ತಿ ಗೆಲ್ಲಲು ಎಲ್ಲ ವಿಭಾಗಗಳಲ್ಲಿ ಮಿಂಚಬೇಕಿದೆ.

ಪಾಕ್​ ನಾಯಕ ಬಾಬರ್ ಆಜಂ ಬಗ್ಗೆ ನಿಮ್ಮ ಮಾತು?: ಬಾಬರ್​ ಇನ್ನೂ ಬಹಳಷ್ಟು ವಿಷಯಗಳನ್ನು ಕಲಿಯಬೇಕಾಗಿದೆ. ಅವರ ಕೈಗೆ ಈಗಷ್ಟೇ ಮಹತ್ತರ ಜವಾಬ್ದಾರಿ ಸಿಕ್ಕಿದೆ. ಅದನ್ನು ನಿಭಾಯಿಸಿಕೊಂಡು ಹೋಗಬೇಕಿದೆ. ಕಾಲಾನಂತರದಲ್ಲಿ ಆತ ಉತ್ತಮ ನಾಯಕನಾಗಿ ಹೊರಹೊಮ್ಮಲಿದ್ದಾನೆ.

ಓದಿ: ಕಳಚಿತೇ ಸಾನಿಯಾ ಶೋಯೆಬ್​ರ 12 ವರ್ಷಗಳ ಪ್ರೀತಿಯಬಂಧ..ಭಾರತ ಪಾಕ್​ ಆಟಗಾರರ ಮಧ್ಯೆ ಪ್ರೀತಿ ಬೆಳೆದಿದ್ದೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.