ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ಕಿವೀಸ್ ಪಡೆ ಭಾರತ ತಂಡದ ಬೌಲರ್ಗಳಿಗೆ ತಕ್ಕ ಉತ್ತರವೇ ನೀಡುತ್ತಿದೆ. ಇನ್ನು ಆರಂಭಿಕ ಆಟಗಾರ ಮನ್ರೋ ಆಕ್ರಮಣಕಾರಿ ಆಟವಾಡಿದ್ದಾರೆ. ಕೇವಲ 40 ಎಸೆತಕ್ಕೆ 72 ರನ್ಗಳನ್ನು ಕಲೆ ಹಾಕಿ ಕುಲ್ದೀಪ್ ಯಾದವ್ಗೆ ವಿಕೆಟ್ ಒಪ್ಪಿಸಿದ್ದಾರೆ.
ಇದಕ್ಕೂ ಮುನ್ನ 12.5 ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಎಸೆತಕ್ಕೆ ಮನ್ರೋ ಥರ್ಡ್ ಮ್ಯಾನ್ನಲ್ಲಿ ಕ್ಯಾಚ್ ನೀಡಿದ್ದರು. ಕುಲ್ದೀಪ್ ಯಾದವ್ ಆ ಕ್ಯಾಚ್ ಮಿಸ್ ಮಾಡಿದ್ದರು. ಇದರಿಂದ ಬೇಸರಗೊಂಡ ಹಾರ್ದಿಕ್ ಪಾಂಡ್ಯ ಹಣೆ ಜಜ್ಜಿಕೊಂಡಿದ್ದರು.
ಇನ್ನು 13.2 ಓವರ್ನಲ್ಲಿ ಕುಲ್ದೀಪ್ ಯಾದವ್ ಎಸೆತಕ್ಕೆ ಮನ್ರೋ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ್ದರು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಕ್ಯಾಚ್ ಹಿಡಿದು ಮನ್ರೋಗೆ ಪೆವಿಲಿಯನ್ ಹಾದಿ ತೋರಿಸಿದರು. ಬಳಿಕ 14.4 ಓವರ್ಗೆ ಕಿವೀಸ್ ತಂಡದ ನಾಯಕ ವಿಲಿಯಮ್ಸನ್ 27 ರನ್ಗಳಿಸಿ ಔಟಾಗಿದ್ದಾರೆ.
ಕಿವೀಸ್ ತಂಡ 15 ಓವರ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು 151 ರನ್ಗಳನ್ನು ಕಲೆ ಹಾಕಿ ಬ್ಯಾಟಿಂಗ್ ಮುಂದುವರಿಸಿದೆ.