ETV Bharat / sports

ಇಂಗ್ಲೆಂಡ್ ಫೀಲ್ಡರ್​ ಚೆಂಡು ತುಳಿಯುತ್ತಿರುವ ವಿಡಿಯೋ ವೈರಲ್.. ಬಾಲ್​ ಟ್ಯಾಂಪರಿಂಗ್ ಅನುಮಾನ​?

ಪಂದ್ಯದ ವೇಳೆ ಈ ವಿಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ಚೆಂಡನ್ನು ತುಳಿಯುತ್ತಿರುವ ಆಟಗಾರರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಏಕೆಂದರೆ ವೀಡಿಯೊದಲ್ಲಿ ಆ ಫೀಲ್ಡರ್​ಗಳ ಶೂಗಳು ಮಾತ್ರ ಕಾಣಿಸುತ್ತಿದೆ..

ಬಾಲ್ ಟ್ಯಾಂಪರಿಂಗ್
ಬಾಲ್ ಟ್ಯಾಂಪರಿಂಗ್
author img

By

Published : Aug 15, 2021, 9:23 PM IST

ಲಂಡನ್ : ಭಾರತ ಮತ್ತು ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್​ ಪಂದ್ಯದ ವೇಳೆ ಇಂಗ್ಲಿಷ್​ ಫೀಲ್ಡರ್​ಗಳಿಬ್ಬರು ಚೆಂಡನ್ನು ತಮ್ಮ ಸ್ಪೈಕ್​ ಶೂಗಳಿಂದ ತುಳಿಯುತ್ತಿರುವ ವಿಡಿಯೋ ವೈರಲ್​ ಆಗುತ್ತಿದೆ. ಬಾಲ್​ ಟ್ಯಾಂಪರಿಂಗ್ ಮಾಡುವ ಅಥವಾ ಚೆಂಡು ಹಾಳಾಗಿದೆ ಏಂದು ಹೇಳಿ ಹೊಸ ಬಾಲು ಪಡೆಯುವ ಹುನ್ನಾರ ನಡೆಸಿದ್ದಾರೆಯೇ ಎಂಬ ಅನುಮಾನ ಮೂಡಿದೆ.

ವಿರೇಂದ್ರ ಸೆಹ್ವಾಗ್ ತಮ್ಮ ಟ್ವಿಟರ್​ನಲ್ಲಿ ಇಂಗ್ಲೆಂಡ್ ಫೀಲ್ಡರ್​ ಒಬ್ಬರು ಚೆಂಡನ್ನು ತುಳಿಯುವ ಫೋಟೋವನ್ನು ಶೇರ್​ ಮಾಡಿ, ಇಲ್ಲಿ ಏನಾಗುತ್ತಿದೆ. ಕೋವಿಡ್​ ತಡೆಗಟ್ಟುವ ಕ್ರಮಗಳ ಹೆಸರಿನಲ್ಲಿ ಇಂಗ್ಲೆಂಡ್​ ಆಟಗಾರರಿಂದ ಬಾಲ್​ ಟ್ಯಾಂಪರಿಂಗ್ ಮಾಡಲಾಗಿದೆಯೇ? ಎಂದು ಟ್ವೀಟ್​ ಮಾಡಿದ್ದಾರೆ.

ಪಂದ್ಯದ ವೇಳೆ ಈ ವಿಡಿಯೋವನ್ನು ಟಿವಿಯಲ್ಲಿ ಪ್ರಸಾರ ಮಾಡಲಾಗಿದೆ. ಆದರೆ, ಚೆಂಡನ್ನು ತುಳಿಯುತ್ತಿರುವ ಆಟಗಾರರು ಯಾರು ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ, ವಿಡಿಯೋದಲ್ಲಿ ಆ ಫೀಲ್ಡರ್​ಗಳ ಶೂಗಳು ಮಾತ್ರ ಕಾಣಿಸುತ್ತಿವೆ.

ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಗಾಯಗೊಂಡು ಸರಣಿಯಿಂದ ಹೊರ ಬಿದ್ದಿರುವ ಇಂಗ್ಲೆಂಡಿನ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್, ಮಾರ್ಕ್ ವುಡ್ ಮತ್ತು ರೋರಿ ಬರ್ನ್ಸ್ ಈ ವಿಡಿಯೋದಲ್ಲಿದ್ದಾರೆ. ಅವರಿಬ್ಬರು ಚೆಂಡನ್ನು ಒದೆಯುವ ಸಂದರ್ಭದಲ್ಲಿ ಚೆಂಡು ಶೂ ಕೆಳಗೆ ಸಿಲುಕಿದೆ. ಇದು ಆಕಸ್ಮಿಕ ಘಟನೆಯಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.

ಆದರೆ, ಭಾರತೀಯ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಕೆಲವು ಪತ್ರಕರ್ತರು ಈ ಫೋಟೋವನ್ನು ಹಂಚಿಕೊಂಡು ಇದು ಬಾಲ್ ಟ್ಯಾಂಪರಿಂಗ್ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ:ಲಾರ್ಡ್ಸ್​ನಲ್ಲಿ ಧ್ವಜಾರೋಹಣ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಿದ ಟೀಮ್​ ಇಂಡಿಯಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.