ETV Bharat / sports

ಅರ್ಧಕ್ಕೆ ನಿಂತ ಐಪಿಎಲ್ ನಡೆಸಿಕೊಡಲು ಆಫರ್ ನೀಡಿದ ಇಂಗ್ಲೆಂಡ್ ಕೌಂಟಿ ಕ್ಲಬ್ಸ್​​ - ಇಂಡಿಯನ್ ಪ್ರೀಮಿಯರ್ ಲೀಗ್

ಇಎಸ್​ಪಿನ್ ಕ್ರಿಕ್​ಇನ್ಫೋ ವರದಿಯ ಪ್ರಕಾರ ಇಂಗ್ಲೀಷ್ ಕೌಂಟಿ ಕ್ಲಬ್​ಗಳು ದ್ವಿತೀಯ ಹಂತದ ಐಪಿಎಲ್​ಗೆ ಸೆಪ್ಟೆಂಬರ್​ನಲ್ಲಿ ಆತಿಥ್ಯವಹಿಸಲು ತಾವು ಸಿದ್ಧವಿದ್ದೇವೆ ಎಂದು ಇಸಿಬಿಗೆ ಪತ್ರದ ಮೂಲಕ ತಿಳಿಸಿವೆ.

ಐಪಿಎಲ್ 2021
ಐಪಿಎಲ್ 2021
author img

By

Published : May 6, 2021, 8:12 PM IST

Updated : May 6, 2021, 8:18 PM IST

ಲಂಡನ್: ಕೊರೊನಾ ಕಾರಣದಿಂದ ಅರ್ಧಕ್ಕೆ ಮುಂದೂಡಲ್ಪಟ್ಟಿರುವ ಐಪಿಎಲ್​ ಭಾರತದಲ್ಲಿ ಆಯೋಜಿಸಲು ಅನಿಶ್ಚಿತತೆ ಇರುವುದರಿಂದ ಸೆಪ್ಟೆಂಬರ್ ತಿಂಗಳಲ್ಲಿ ತಾವು ನಡೆಸಿಕೊಡುವುದಾಗಿ ಇಂಗ್ಲೀಷ್ ಕೌಂಟಿ ಕ್ಲಬ್​ಗಳು ಬಿಸಿಸಿಐಗೆ ಆಫರ್ ನೀಡಿವೆ ಎಂದು ತಿಳಿದುಬಂದಿದೆ.

ಇಎಸ್​ಪಿಎನ್ ಕ್ರಿಕ್​ಇನ್ಫೋ ವರದಿಯ ಪ್ರಕಾರ ಇಂಗ್ಲೀಷ್ ಕೌಂಟಿ ಕ್ಲಬ್​ಗಳು ದ್ವಿತೀಯ ಹಂತದ ಐಪಿಎಲ್​ಗೆ ಸೆಪ್ಟೆಂಬರ್​ನಲ್ಲಿ ಆತಿಥ್ಯವಹಿಸಲು ತಾವು ಸಿದ್ಧವಿದ್ದೇವೆ ಎಂದು ಇಸಿಬಿಗೆ ಪತ್ರದ ಮೂಲಕ ತಿಳಿಸಿವೆ.

ದ ಕಿಯಾ ಓವೆಲ್ (ಲಂಡನ್), ಎಡ್​ಬಸ್ಟನ್ ​(ಬರ್ಮಿಂಗ್​ಹ್ಯಾಮ್) ಮತ್ತು ಎಮಿರೇಟ್ಸ್ ಓಲ್ಡ್​ ಟ್ರಾಫರ್ಡ್​ ಮತ್ತು ಎಂಸಿಸಿ, ಸರ್ರೆ, ವಾರ್ವಿಕ್​ಷೈರ್​ ಮತ್ತು ಲ್ಯಾಂಕಾಶೈರ್ ಕ್ಲಬ್​ಗಳು ಇಂಗ್ಲೆಂಡ್ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​(ಇಸಿಬಿ)ಗೆ ಪತ್ರ ಬರೆದಿದ್ದು, ಉಳಿದ ಐಪಿಎಲ್​ಗೆ ಆತಿಥ್ಯ ನೀಡುವುದಕ್ಕೆ ಬಿಸಿಸಿಐಗೆ ಆಹ್ವಾನ ನೀಡಲು ತಿಳಿಸಿವೆ ಎಂದು ತಿಳಿದುಬಂದಿದೆ.

ಸುರಕ್ಷತೆಯ ಮಾನದಂಡವನ್ನಾಗಿಟ್ಟುಕೊಂಡು ಬಿಸಿಸಿಐ ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಲೀಗ್​ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಿವೆ. ಇಂಗ್ಲಿಷ್ ಕೌಂಟಿಗಳು ಈ ವರ್ಷದ ಅಕ್ಟೋಬರ್‌ನಲ್ಲಿ ಆಡಲಿರುವ ಟಿ 20 ವಿಶ್ವಕಪ್‌ಗೆ ಆಟಗಾರರಿಗೆ ಗುಣಮಟ್ಟದ ಕ್ರಿಕೆಟ್ ಅನುಭವ ನೀಡುವ ಭರವಸೆಯನ್ನು ನೀಡಿವೆ. ವರದಿಯ ಪ್ರಕಾರ 14ನೇ ಆವೃತ್ತಿಯ ಉಳಿದ ಭಾಗಕ್ಕೆ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಿಕೊಡುವ ಭರವಸೆಯನ್ನು ವ್ಯಕ್ತಪಡಿಸಿವೆ.

ಆದರೆ ಬಿಸಿಸಿಐ ಅಧಿಕಾರಿಯೊಬ್ಬರು ಇದರ ಬಗ್ಗೆ ಎಎನ್​​ಐಗೆ ಪ್ರತಿಕ್ರಿಯೆ ನೀಡಿದ್ದು, ಸೆಪ್ಟೆಂಬರ್​ನಲ್ಲಿ ಭಾರತದಲ್ಲೇ ಕೋವಿಡ್​ ನಿಯಂತ್ರಣಕ್ಕೆ ಬಂದರೆ 14ನೇ ಆವೃತ್ತಿಯನ್ನು ಪೂರ್ಣಗೊಳಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನು ಓದಿ:ಆಕ್ಸಿಜನ್​ಗಾಗಿ ಸಿಎಂ ಯೋಗಿ ನೆರವು ಕೋರಿದ ರೈನಾ, ನೆರವಿಗೆ ಬಂದ ನಟ ಸೋನು ಸೂದ್​

Last Updated : May 6, 2021, 8:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.