ಆಕ್ಲೆಂಡ್: ವನಿತೆಯರ ಏಕದಿನ ವಿಶ್ವಕಪ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡವು ಒಂದು ವಿಕೆಟ್ ಅಂತರದ ರೋಚಕ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಆಂಗ್ಲರಿಗೆ ಸೆಮಿಫೈನಲ್ ಅವಕಾಶ ಜೀವಂತವಾಗಿದೆ.
ಆಕ್ಲೆಂಡ್ನ ಏಡನ್ ಪಾರ್ಕ್ನಲ್ಲಿ ನಡೆದ ಟೂರ್ನಿಯ 19ನೇ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ಗಿಳಿದ ಕಿವೀಸ್ಗೆ ಸೂಜಿ ಬೇಟ್ಸ್(22) ಹಾಗೂ ನಾಯಕಿ ಸೋಫಿಯಾ ಡಿವೈನ್(41) ಮೊದಲ ವಿಕೆಟ್ಗೆ 61 ರನ್ ಬಾರಿಸಿ ಉತ್ತಮ ಆರಂಭ ಒದಗಿಸಿದರು. ಬಳಿಕ ಅಮೆಲಿಯಾ ಕೆರ್ ಹಾಗೂ ಸಾಟ್ಟೆರ್ಥ್ವೇಟ್ ತಲಾ 24 ರನ್ ಕೊಡುಗೆ ನೀಡಿದರು.
ಮ್ಯಾಟಿ ಗ್ರೀನ್ ತಂಡದ ಪರ ಏಕೈಕ ಅರ್ಧಶತಕ ಗಳಿಸಿ(52*) ಅಜೇಯರಾಗುಳಿದರು. ಒಂದು ಹಂತದಲ್ಲಿ ಎರಡು ವಿಕೆಟ್ಗೆ 134 ರನ್ ಬಾರಿಸಿದ್ದ ನ್ಯೂಜಿಲೆಂಡ್ ತದನಂತರ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಕೆಳಕ್ರಮಾಂಕದ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದ್ದರಿಂದ 48.5 ಓವರ್ಗಳಲ್ಲಿ 203 ರನ್ಗೆ ತಂಡವು ಆಲೌಟ್ ಆಯಿತು. ಇಂಗ್ಲೆಂಡ್ ಪರ ಕೇಟ್ ಕ್ರಾಸ್ 35ಕ್ಕೆ 3, ಎಕ್ಲೊಸ್ಟೋನ್ 41ಕ್ಕೆ 3 ಹಾಗೂ ಚಾರ್ಲೊಟ್ಟೆ ಡೀನ್ 36ಕ್ಕೆ 2 ವಿಕೆಟ್ ಕಬಳಿಸಿದರು.
-
England beat New Zealand by one wicket in an absolute thriller in Auckland. What a game! 🔥#CWC22 pic.twitter.com/QDMzEALcAb
— ICC (@ICC) March 20, 2022 " class="align-text-top noRightClick twitterSection" data="
">England beat New Zealand by one wicket in an absolute thriller in Auckland. What a game! 🔥#CWC22 pic.twitter.com/QDMzEALcAb
— ICC (@ICC) March 20, 2022England beat New Zealand by one wicket in an absolute thriller in Auckland. What a game! 🔥#CWC22 pic.twitter.com/QDMzEALcAb
— ICC (@ICC) March 20, 2022
204 ರನ್ ಗುರಿ ಬೆನ್ನಟ್ಟಿದ ಆಂಗ್ಲರು ಉತ್ತಮ ಆಟದ ಹೊರತಾಗಿಯೂ ಅಂತಿಮ ಹಂತದಲ್ಲಿ ವಿಕೆಟ್ಗಳನ್ನು ಕಳೆದುಕೊಂಡು ಕೊನೆಗೂ ಗೆಲ್ಲುವ ಮೂಲಕ ನಿಟ್ಟುಸಿರು ಬಿಟ್ಟರು. ತಂಡದ ಪರ ಟಾಮ್ಮಿ ಬೆಮೊಂಟ್ 25, ನಾಯಕಿ ಹೀದರ್ ನೈಟ್ 42, ನಟಾಲೀ ಸ್ಕೀವರ್ 61 ಹಾಗೂ ಸೋಫಿಯಾ ಡಂಕ್ಲಿ 33 ರನ್ ಕೊಡುಗೆ ನೀಡಿದರು.
5 ವಿಕೆಟ್ಗೆ 176 ರನ್ ಪೇರಿಸಿದ್ದ ಇಂಗ್ಲೆಂಡ್ ಒಂದು ಹಂತದಲ್ಲಿ ಸುಲಭ ಗೆಲುವಿನತ್ತ ಮುಖ ಮಾಡಿತ್ತು. ಆದರೆ ಈ ಹಂತದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಕಿವೀಸ್ ವನಿತೆಯರು ಗೆಲುವಿನತ್ತ ಮುಖ ಮಾಡಿದ್ದರು. 196 ರನ್ಗೆ ಆಂಗ್ಲರ 9 ವಿಕೆಟ್ ಉರುಳಿದವು. ಆದರೆ 11ನೇ ಕ್ರಮಾಂಕದ ಆಟಗಾರ್ತಿ ಅನ್ಯಾ ಶ್ರಬ್ಸೊಲೆ ಒಂದು ಬೌಂಡರಿ ಸಹಿತ ಅಜೇಯ 7 ರನ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. 47.2ನೇ ಓವರ್ನಲ್ಲಿ ಆಂಗ್ಲರು ಗೆಲುವಿನ ಕೇಕೆ ಹಾಕಿದರು.
ಈ ಮೂಲಕ ಇಂಗ್ಲೆಂಡ್ ಟೂರ್ನಿಯಲ್ಲಿ 5 ಪಂದ್ಯಗಳಿಂದ 2 ಜಯದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ಆಸೆ ಇನ್ನೂ ಜೀವಂತವಾಗಿದೆ. ಇನ್ನೊಂದೆಡೆ ಕಿವೀಸ್ 6 ಪಂದ್ಯಗಳಲ್ಲಿ 4ನೇ ಸೋಲು ಕಂಡಿದ್ದು, ಅಂಕಪಟ್ಟಿಯಲ್ಲಿನ ಲೆಕ್ಕಾಚಾರದ ಮೇಲೆ ತಂಡದ ಸೆಮೀಸ್ ಹಾದಿ ನಿಂತಿದೆ. 5 ಪಂದ್ಯಗಳಿಂದ ಎರಡು ಗೆಲುವು ಸಾಧಿಸಿರುವ ಭಾರತದ ಮಿಥಾಲಿ ಪಡೆ 4ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: 2022ರ ಏಷ್ಯಾಕಪ್ ಟೂರ್ನಿಗೆ ಮುಹೂರ್ತ ಫಿಕ್ಸ್.. ಆಗಸ್ಟ್ 27ರಿಂದ T20 ಮಾದರಿಯಲ್ಲಿ ಟೂರ್ನಿ