ಕ್ಯಾಂಟರ್ಬರಿ, ಇಂಗ್ಲೆಂಡ್: ಭಾರತ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ರ ಭರ್ಜರಿ ಶತಕ ಮತ್ತು ಹರ್ಲಿನ್ ಡಿಯೋಲ್ಸ್ರ ಚೊಚ್ಚಲ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಇಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದಲ್ಲಿ ದಾಖಲೆಯ 5 ವಿಕೆಟ್ ನಷ್ಟಕ್ಕೆ 333 ರನ್ ಗಳಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಹರ್ಮನ್‌ಪ್ರೀತ್ ಕೌರ್ ಪಡೆ ಆರಂಭದಲ್ಲಿ ಶೆಫಾಲಿ ವರ್ಮಾರ ವಿಕೆಟ್ ಬೇಗನೇ ಕಳೆದುಕೊಂಡಿತು. ಬಳಿಕ ಸ್ಮೃತಿ ಮಂಧಾನಾ 40, ಯಾಸ್ತಿಕಾ ಬಾಟಿಯಾ 26 ರನ್ ಗಳಿಸಿ, 54 ರನ್ಗಳ ಜೊತೆಯಾಟ ಕಟ್ಟಿದರು.
-
A superb batting performance by #TeamIndia to set a mammoth target of 3️⃣3️⃣4️⃣
— BCCI Women (@BCCIWomen) September 21, 2022 " class="align-text-top noRightClick twitterSection" data="
1⃣4⃣3⃣* for Harmanpreet Kaur
5⃣8⃣ for Harleen Deol
Over to our bowlers now.
Follow the match ▶️ https://t.co/dmQVpiNH4h #ENGvIND pic.twitter.com/9miUtZGMnH
">A superb batting performance by #TeamIndia to set a mammoth target of 3️⃣3️⃣4️⃣
— BCCI Women (@BCCIWomen) September 21, 2022
1⃣4⃣3⃣* for Harmanpreet Kaur
5⃣8⃣ for Harleen Deol
Over to our bowlers now.
Follow the match ▶️ https://t.co/dmQVpiNH4h #ENGvIND pic.twitter.com/9miUtZGMnHA superb batting performance by #TeamIndia to set a mammoth target of 3️⃣3️⃣4️⃣
— BCCI Women (@BCCIWomen) September 21, 2022
1⃣4⃣3⃣* for Harmanpreet Kaur
5⃣8⃣ for Harleen Deol
Over to our bowlers now.
Follow the match ▶️ https://t.co/dmQVpiNH4h #ENGvIND pic.twitter.com/9miUtZGMnH
ನಾಯಕಿ ಕೌರ್ ಗರಿಷ್ಠ ವೈಯಕ್ತಿಕ ರನ್: ಯಾಸ್ತಿಕಾ ಭಾಟಿಯಾ ಔಟಾದ ಬಳಿಕ ಕ್ರೀಸ್ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ ಭರ್ಜರಿ ಬ್ಯಾಟ್ ಬೀಸಿದರು. 111 ಎಸೆತಗಳಲ್ಲಿ 143 ಬಾರಿಸಿದ ಕೌರ್ ಇಂಗ್ಲಿಷ್ ಮಹಿಳೆಯರ ಬೆವರಿಳಿಸಿದರು. ಇವರ ಇನಿಂಗ್ಸ್ನಲ್ಲಿ 18 ಬೌಂಡರಿಗಳಿದ್ದರೆ, 4 ಭರ್ಜರಿ ಸಿಕ್ಸರ್ಗಳಿದ್ದವು. ಭಾರತ ತಂಡದ ನಾಯಕಿ ಕೌರ್ ಅವರ ವೈಯಕ್ತಿಕ ಗರಿಷ್ಠ ಮೊತ್ತ ಕೂಡ ಇದಾಗಿದೆ.
ಕೌರ್ಗೆ ಉತ್ತಮ ಸಾಥ್ ನೀಡಿದ ಹರ್ಲಿನ್ ಡಿಯೋಲ್ 58 ರನ್ ಗಳಿಸಿದರು. ಇದು ಏಕದಿನದಲ್ಲಿ ಅವರ ಚೊಚ್ಚಲ ಅರ್ಧಶತಕವಾಗಿದೆ. ಲಾರೆನ್ ಬೆಲ್ಲಾಗೆ ಹರ್ಲಿನ್ ವಿಕೆಟ್ ಒಪ್ಪಿಸಿದ ಬಳಿಕ ಬಿರುಸಾಗಿ ಬ್ಯಾಟ್ ಬೀಸಿದ ಪೂಜಾ ವಸ್ತ್ರಕಾರ್ 18, ದೀಪ್ತಿ ಶರ್ಮಾ 15 ರನ್ ಗಳಿಸಿದರು.
ಇಂಗ್ಲೆಂಡ್ ವಿರುದ್ಧ ಅತ್ಯಧಿಕ ಸ್ಕೋರ್: ನಾಯಕಿ ಹರ್ಮನ್‌ಪ್ರೀತ್ ಕೌರ್ರ ಔಟಾಗದೇ 143 ರನ್ಗಳ ನೆರವಿನಿಂದ ಭಾರತ ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 333 ರನ್ ಗಳಿಸಿತು. ಇದು ಆಂಗ್ಲ ಮಹಿಳೆಯರ ವಿರುದ್ಧ ದಾಖಲೆಯ ಅತ್ಯಧಿಕ ರನ್ ಆಗಿದೆ.
ಇನ್ನು ಭಾರತದ ಬೃಹತ್ ಮೊತ್ತ ಬೆನ್ನತ್ತಿರುವ ಇಂಗ್ಲೆಂಡ್ ಮಹಿಳೆಯರು 15 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿದ್ದಾರೆ. ಟಾಮಿ ಬ್ಯೂಮಾಂಟ್ 6, ಎಮ್ಮಾ ಲಾಂಬಾ 15, ಸೋಪಿಯಾ ಡಂಕ್ಲಿ 1 ರನ್ಗೆ ಪೆವಿಲಿಯನ್ ಸೇರಿದರು. ಆಲೀಸಾ ಕ್ಯಾಪ್ಸಿ 38ಮ ಡ್ಯಾನೈಲ್ಲಿ ವ್ಯಾಟ್ 39 ರನ್ ಗಳಿಸಿ ಕ್ರೀಸ್ನಲ್ಲಿದ್ದಾರೆ.
ಸಂಕ್ಷಿಪ್ತ ಸ್ಕೋರ್- ಭಾರತ 333/5 (ಹರ್ಮನ್‌ಪ್ರೀತ್ ಕೌರ್ 143*, ಹರ್ಲೀನ್ ಡಿಯೋಲ್ 58; ಷಾರ್ಲೆಟ್ ಡೀನ್ 1/39).
ಓದಿ: ಮಿಥಾಲಿ ರಾಜ್ ದಾಖಲೆ ಉಡೀಸ್, ವಿರಾಟ್ ಕೊಹ್ಲಿ ಸಾಲಿಗೆ ಸ್ಮೃತಿ ಮಂಧಾನಾ..ಏನದು ಗೊತ್ತಾ?