ಲಂಡನ್: ಭದ್ರತೆ ಕಾರಣ ನೀಡಿ ಪಾಕಿಸ್ತಾನ ವಿರುದ್ಧದ ಸೀಮಿತ ಓವರ್ಗಳ ಕ್ರಿಕೆಟ್ ಸರಣಿ ರದ್ಧು ಮಾಡಿಕೊಂಡಿರುವ ನ್ಯೂಜಿಲ್ಯಾಂಡ್ ತಂಡ ಈಗಾಗಲೇ ತವರಿಗೆ ವಾಪಸ್ ಆಗಿದೆ. ಇದರ ಬೆನ್ನಲ್ಲೇ ಪಾಕಿಸ್ತಾನಕ್ಕೆ ಮತ್ತೊಂದು ಅವಮಾನಕರ ಬೆಳವಣಿಗೆ ನಡೆದಿದೆ.
ಅಕ್ಟೋಬರ್ ತಿಂಗಳಲ್ಲಿ ಪಾಕಿಸ್ತಾನ ಪ್ರವಾಸ ಕೈಗೊಳ್ಳಬೇಕಾಗಿದ್ದ ಇಂಗ್ಲೆಂಡ್ ಪುರುಷ ಹಾಗೂ ಮಹಿಳಾ ತಂಡ ತಮ್ಮ ಪ್ರವಾಸ ರದ್ದು ಮಾಡಿಕೊಂಡಿದೆ. ಇದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಟ್ವೀಟ್ ಮಾಡಿ ಮಾಹಿತಿ ಶೇರ್ ಮಾಡಿಕೊಂಡಿದೆ.
ಆಟಗಾರರು ಹಾಗೂ ಕ್ರಿಕೆಟ್ ಸಿಬ್ಬಂದಿ ಯೋಗಕ್ಷೇಮದ ದೃಷ್ಠಿಯಿಂದ ಈ ಪ್ರವಾಸ ರದ್ಧು ಮಾಡಿಕೊಳ್ಳುತ್ತಿರುವುದಾಗಿ ಇಸಿಬಿ ತಿಳಿಸಿದ್ದು, ನ್ಯೂಜಿಲ್ಯಾಂಡ್ ಹಾದಿ ಅನುಸರಿಸಿದೆ.
-
"We can confirm that the Board has reluctantly decided to withdraw both teams from the October trip."
— England Cricket (@englandcricket) September 20, 2021 " class="align-text-top noRightClick twitterSection" data="
🇵🇰 #PAKvENG 🏴
">"We can confirm that the Board has reluctantly decided to withdraw both teams from the October trip."
— England Cricket (@englandcricket) September 20, 2021
🇵🇰 #PAKvENG 🏴"We can confirm that the Board has reluctantly decided to withdraw both teams from the October trip."
— England Cricket (@englandcricket) September 20, 2021
🇵🇰 #PAKvENG 🏴
ಪಾಕಿಸ್ತಾನಕ್ಕೆ ಪ್ರವಾಸ ಕೈಗೊಳ್ಳುವ ಬಗ್ಗೆ ಹೆಚ್ಚುತ್ತಿರುವ ಆತಂಕದ ಬಗ್ಗೆ ನಮಗೆ ತಿಳಿದಿದೆ. ಜೊತೆಗೆ ಕೋವಿಡ್ನಿಂದಾಗಿ ಈ ಪ್ರವಾಸ ರದ್ಧುಗೊಳಿಸುತ್ತಿದ್ದೇವೆ ಎಂದು ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ. ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ ಪುರುಷರ ತಂಡ ಎರಡು ಟಿ-20 ಪಂದ್ಯ ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಭಾಗಿಯಾಗಬೇಕಾಗಿತ್ತು. ಇದರ ಜೊತೆಗೆ ಮಹಿಳೆಯರ ತಂಡ ಕೂಡ ಪಾಕಿಸ್ತಾನದ ಪ್ರವಾಸ ಕೈಗೊಳ್ಳಬೇಕಾಗಿತ್ತು.
ಇದನ್ನೂ ಓದಿ: ಕೇರಳದಲ್ಲಿ ಆಟೋ ಡ್ರೈವರ್ಗೆ ಒಲಿದ ಅದೃಷ್ಟ ಲಕ್ಷ್ಮಿ: 12 ಕೋಟಿ ರೂ. ಲಾಟರಿ ಗೆದ್ದ ವ್ಯಕ್ತಿ
ಕಳೆದ ಕೆಲ ದಿನಗಳ ಹಿಂದೆ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದ ನ್ಯೂಜಿಲ್ಯಾಂಡ್ ತಂಡ ರಾವಲ್ಪಿಂಡಿಯಲ್ಲಿ ಮೊದಲ ಏಕದಿನ ಪಂದ್ಯ ಆರಂಭಗೊಳ್ಳಲು ಕೆಲ ನಿಮಿಷ ಬಾಕಿ ಇರುವಾಗಲೇ ಭದ್ರತೆ ಕಾರಣ ನೀಡಿ, ಸರಣಿ ರದ್ಧು ಮಾಡಿಕೊಂಡಿತ್ತು. ಇದೀಗ ಇಂಗ್ಲೆಂಡ್ ಕೂಡ ಅದೇ ರೀತಿಯ ನಿರ್ಧಾರ ಕೈಗೊಂಡಿದೆ.