ನಾಟಿಂಗ್‌ಹ್ಯಾಮ್ : ಇಂಗ್ಲೆಂಡ್ 17ರನ್ಗಳಿಂದ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ಪೀಪ್ನಿಂದ ತಪ್ಪಿಸಿಕೊಂಡಿದೆ. ಇಂಗ್ಲೆಂಡ್ ನೀಡಿದ್ದ ಬೃಹತ್ ಮೊತ್ತ ಬೆನ್ನತ್ತಿದ್ದ ಭಾರತ 20 ಓವರ್ಗಳಲ್ಲಿ 7 ವಿಕೆಟ್ಗೆ 198 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತದ ಪರ ಸೂರ್ಯಕುಮಾರ್ ಯಾದವ್ 117ರನ್ ಉತ್ತಮ ಬ್ಯಾಟಿಂಗ್ ಮಾಡಿದರು.
ಸೂರ್ಯ ಕುಮಾರ್ ಯಾದವ್ ಆರಂಭಿಕ ವೈಫಲ್ಯವನ್ನು ಮೆಟ್ಟಿನಿಂತು ಉತ್ತಮ ಬ್ಯಾಟಿಂಗ್ ಮಾಡಿದರು. ಆರಂಭಿಕ ಆಟಗಾರ ಪಂತ್ (1), ರೋಹಿತ್ ಶರ್ಮಾ(11), ಕೊಹ್ಲಿ(11) ವಿಕೆಟ್ಗಳು ಬೇಗ ಪತನವಾದವು. ಸೂರ್ಯನಿಗೆ ಅಯ್ಯರ್(28) ಕೊಂಚ ಹೊತ್ತಿನ ಜೊತೆಯಾಟ ನೀಡಿದರು. ನಂತರ ಬಂದವರಾರು ಜೊತೆಯಾಟ ನೀಡಲಿಲ್ಲ. ಕಾರ್ತಿಕ್ (6), ಜಡೇಜ (7), ಹರ್ಷಲ್(5), ಆವೇಶ್ ಖಾನ್(1), ಬಿಷ್ಟೋಯ್(2) ವಿಕೆಟ್ ಒಪ್ಪಿಸಿದರು.
-
💯
— BCCI (@BCCI) July 10, 2022 " class="align-text-top noRightClick twitterSection" data="
A magnificent CENTURY from @surya_14kumar 👏👏
His first in international cricket!
Live - https://t.co/hMsXyHNzf8 #ENGvIND pic.twitter.com/LwZVee9Ali
">💯
— BCCI (@BCCI) July 10, 2022
A magnificent CENTURY from @surya_14kumar 👏👏
His first in international cricket!
Live - https://t.co/hMsXyHNzf8 #ENGvIND pic.twitter.com/LwZVee9Ali💯
— BCCI (@BCCI) July 10, 2022
A magnificent CENTURY from @surya_14kumar 👏👏
His first in international cricket!
Live - https://t.co/hMsXyHNzf8 #ENGvIND pic.twitter.com/LwZVee9Ali
ಯಾದವ್ ಭರ್ಜರಿ ಶತಕ: ಸೂರ್ಯಕುಮಾರ್ ಭರ್ಜರಿ ಆಟ ಪ್ರದರ್ಶಿಸಿದರು. 55ಎಸೆತಗಳಲ್ಲಿ 14ಬೌಡರಿ ಮತ್ತು 6ಸಿಕ್ಸರ್ನಿಂದ 117ರನ್ ಗಳಿಸಿದರು.
ಇಂಗ್ಲೆಂಡ್ ಪರ:ಮೊಯಿನ್ ಅಲಿ(1), ಡೇವಿಡ್ ವಿಲ್ಲಿ(2), ಕ್ರಿಸ್ ಜೋರ್ಡನ್(2), ರಿಚರ್ಡ್ ಗ್ಲೀಸನ್(1) ರೀಸ್ ಟೋಪ್ಲಿ(3) ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್: ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಬೃಹತ್ ಮೊತ್ತದ ಗುರಿಯನ್ನು ಭಾರತಕ್ಕೆ ನೀಡಿದೆ. ಮಲಾನ್ ಮತ್ತು ಲಿವಿಂಗ್ ಸ್ಟೋನ್ ಅವರ ಬಿರುಸಿನ ಆಟದಿಂದ 20 ಓವರ್ಗಳಲ್ಲಿ 215 ಗಳಿಕೆ ಮಾಡಿದ್ದು, ಭಾರತಕ್ಕೆ 216ರನ್ಗಳ ಗುರಿ ನೀಡಿದೆ.
ಆರಂಭಿಕ ಬ್ಯಾಟರ್ಗಳಿಂದ ಉತ್ತಮ ಆರಂಭ ಇಂಗ್ಲಂಡ್ಗೆ ದೊರೆಯಿತು. ಬಟ್ಲರ್ ಮತ್ತು ರಾಯ್ 31ರನ್ಗಳ ಬಿರುಸಿನ ಜೊತೆಯಾಟ ನೀಡಿದರು. ಜಾಸ್ ಬಟ್ಲರ್ (18) ಆವೇಶ್ ಖಾನ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಮಲಾನ್ ರಾಯ್ರನ್ನು ಜೊತೆ ಉತ್ತಮ ಆಟ ಆಡಿದರು. ತಂಡದ ಮೊತ್ತ 61 ಆಗಿದ್ದಾಗ ಉಮ್ರಾನ್ ಮಲಿಕ್ಗೆ ರಾಯ್(27) ವಿಕೆಟ್ ಒಪ್ಪಿಸಿದರು. ನಂತರ ಬಂದ ಫಿಲಿಪ್ ಸಾಲ್ಟ್ (8) ಹೆಚ್ಚು ಹೊತ್ತು ಕ್ರಿಸ್ನಲ್ಲಿ ಇರಲಿಲ್ಲ.
ಮಲಾನ್ ಮತ್ತು ಲಿವಿಂಗ್ ಸ್ಟೋನ್ ನಂತರ ತಂಡದ ಸ್ಕೋರ್ಗೆ ವೇಗ ನೀಡಿದರು. ಬಿರುಸಿನ ಆಟ ಪ್ರದರ್ಶಿಸಿದ ಮಲಾನ್ 39 ಎಸೆತದಲ್ಲಿ 6 ಬೌಂಡರಿ ಮತ್ತು 5 ಸಿಕ್ಸರ್ ನೊಂದಿಗೆ 77 ರನ್ ಕಲೆಹಾಕಿ ರವಿ ಬಿಷ್ಣೋಯ್ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದವರು ಲಿವಿಂಗ್ ಸ್ಟೋನ್ಗೆ ಜೊತೆಯಾಗಲಿಲ್ಲ. ಮೊಯಿನ್ ಅಲಿ(0), ಹ್ಯಾರಿ ಬ್ರೂಕ್ (19), ಕ್ರಿಸ್ ಜೋರ್ಡನ್ (11) ಗಳಿಸಿದರು. ಲಿವಿಂಗ್ ಸ್ಟೋನ್ 29 ಎಸೆತದಲ್ಲಿ 4ಸಿಕ್ಸರ್ನಿಂದ 42ರನ್ಗಳಿಸಿ ಅಜೇಯರಾಗಿ ಉಳಿದರು.
ಭಾರತದ ಪರವಾಗಿ ರವಿ ಬಿಷ್ಣೋಯ್ ಮತ್ತು ಹರ್ಷಲ್ ಪಟೇಲ್ ತಲಾ ಎರಡು, ಉಮ್ರಾನ್ ಮಲಿಕ್ ಮತ್ತು ಆವೇಶ್ ಖಾನ್ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ : ಭಾರತ ತಂಡದಲ್ಲಿ ನಾಲ್ಕು ಬದಲಾವಣೆ