ಲಂಡನ್: ಯುಎಇನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಐಪಿಎಲ್ನ ದ್ವಿತೀಯಾರ್ಧದಲ್ಲಿ ಇಂಗ್ಲೆಂಡ್ ತಂಡದ ಆಟಗಾರರು ಭಾಗವಹಿಸುವುದಿಲ್ಲ ಎಂದು ಇಸಿಬಿ ಸ್ಪಷ್ಪಡಿಸಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿ ಮುಗಿಯುತ್ತಿದ್ದಂತೆ ಯುಎಇನಲ್ಲಿ ಐಪಿಎಲ್ನ 2ನೇ ಭಾಗ ನಡೆಸಲು ಬಿಸಿಸಿಐ ಯೋಜನೆ ಸಿದ್ಧಪಡಿಸಿಕೊಂಡಿದೆ. ಆದರೆ, ಬಿಡುವಿಲ್ಲದ ವೇಳಾಪಟ್ಟಿಯಿಂದ ಇಂಗ್ಲೆಂಡ್ನ ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಇಯಾನ್ ಮಾರ್ಗನ್, ಸ್ಯಾಮ್ ಕರ್ರನ್ ಸೇರಿದಂತೆ ಕೆಲವು ಸ್ಟಾರ್ ಆಟಗಾರರು ಭಾಗವಹಿಸುವುದಿಲ್ಲ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ನ ಡೈರೆಕ್ಟರ್ ಆಶ್ಲೇ ಗಿಲ್ಸ್ ತಿಳಿಸಿದ್ದಾರೆ.
ನಾವು ಬಿಡುವಿಲ್ಲದ ವೇಳಾಪಟ್ಟಿ ಹೊಂದಿದ್ದೇವೆ. 5ನೇ ಟೆಸ್ಟ್ ಮುಗಿಯುತ್ತಿದ್ದಂತೆ ಸೆಪ್ಟೆಂಬರ್ 19 ಅಥವಾ 20ರಂದು ಟಿ-20 ಸರಣಿಗಾಗಿ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುತ್ತೇವೆ. ನಂತರ ಪಾಕಿಸ್ತಾನ ಪ್ರವಾಸವಿದೆ, ಟಿ-20 ವಿಶ್ವಕಪ್ವರೆಗೆ ನಾವು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದೇವೆ ಎಂದು ಗಿಲ್ಸ್ ಹೇಳಿದ್ದಾರೆ.
" ನಾವು ಈ ಹುಡುಗರಲ್ಲಿ ಕೆಲವರಿಗೆ ಒಂದು ಹಂತದಲ್ಲಿ ವಿರಾಮ ನೀಡಬೇಕಾಗಿದೆ. ಬಾಂಗ್ಲಾದೇಶ ವಿರುದ್ಧದ ಸರಣಿ ಎಂಬ ಕಾರಣಕ್ಕಾಗಿ ಕೆಲವು ಹುಡುಗರಿಗೆ ವಿಶ್ರಾಂತಿ ನೀಡಿದ್ದೇವೆ. ಹಾಗಾಗಿ ಅವರು ಬೇರೆಡೆ ಹೋಗಿ ಕ್ರಿಕೆಟ್ ಆಡಲು ಆಗುವುದಿಲ್ಲ. ನಾವು ನಮ್ಮ ವೇಳಾಪಟ್ಟಿಯನ್ನು ನಿರ್ವಹಿಸಬೇಕು ಜೊತೆಗೆ ಟಿ-20 ವಿಶ್ವಕಪ್ ಮತ್ತು ಆಶಸ್ ಸರಣಿ ವೇಳೆಗೆ ನಮ್ಮ ಆಟಗಾರರು ಉತ್ತಮ ಶೇಪ್ನಲ್ಲಿರಲು ನಾವು ಬಯಸುತ್ತೇವೆ " ಎಂದು ಇಂಗ್ಲೆಂಡ್ ಆಟಗಾರರು ಐಪಿಎಲ್ನಲ್ಲಿ ಭಾಗವಹಿಸಲು ಅವಕಾಶವಿಲ್ಲ ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.
ಇದನ್ನು ಓದಿ:ನನ್ನನ್ನು ಫ್ರಾಂಚೈಸಿ ಏಕೆ ರೀಟೈನ್ ಮಾಡಿಕೊಳ್ಳಬೇಕು ಎಂದು ಸ್ವತಃ ಧೋನಿ ಆಲೋಚಿಸಲಿ: ಆಕಾಶ್ ಚೋಪ್ರಾ