ETV Bharat / sports

ಬುಮ್ರಾ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆಂಬ ಆಂಗ್ಲರ ಈ ಮೂರ್ಖತನವೇ ಸೋಲಿಗೆ ಕಾರಣ : ಬಾಯ್ಕಾಟ್​ - ಭಾರತ ತಂಡದ ಆಟಗಾರರ ತಂತ್ರಗಾರಿಕೆ

ಇಂಗ್ಲೆಂಡ್​ ಬೌಲರ್​ಗಳು ಶಮಿ ಮತ್ತು ಬುಮ್ರಾರನ್ನು ಔಟ್ ಮಾಡುವ ಬದಲು ಅವರಿಗೆ ಹೊಡೆಯುವುದಕ್ಕೆ ಹೆಚ್ಚು ಗಮನ ಹರಿಸಿದರು. ಆದರೆ, ಈ ವೇಳೆ ಚೆಂಡು ಎಡ್ಜ್​ಗಳಾಗಿ ರನ್​ಗಳ ಸೋರಿಕೆಯಾಯಿತು. ಜೊತೆಗೆ ಭಾರತದಿಂದ ಇನ್ನಿಂಗ್ಸ್​ ಡಿಕ್ಲೇರ್​ ಘೋಷಿಸಿದ್ದರಿಂದ ಮುಜುಗರಕ್ಕೂಳಗಾಯಿತು..

ಭಾರತ vs ಇಂಗ್ಲೆಂಡ್
ಭಾರತ vs ಇಂಗ್ಲೆಂಡ್
author img

By

Published : Aug 17, 2021, 6:16 PM IST

ಲಂಡನ್ : ಇಂಗ್ಲೆಂಡ್ ತಂಡ ಭಾರತದ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ ತಮ್ಮ ತಂತ್ರಗಳಿಂದ ಮೂರ್ಖರಾದರಲ್ಲದೆ, ಮಾತಿನ ಚಕಮಕಿ ಮೂಲಕ ಎದುರಾಳಿಗಳ ಭಾವನೆಗಳನ್ನು ಉತ್ತಮಗೊಳಿಸಲು ಅವಕಾಶ ಮಾಡಿಕೊಟ್ಟರು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕೊನೆಯ ದಿನದವರೆಗೂ ಇಂಗ್ಲೆಂಡ್​ ತಂಡ ಟೆಸ್ಟ್​ನಲ್ಲಿ ಗೆಲುವಿನ ತಂಡವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಕೊನೆಗೆ 151 ರನ್​ಗಳಿಂದ ಭಾರತ ತಂಡದ ವಿರುದ್ಧ ಹೀನಾಯ ಸೋಲು ಕಂಡಿತು.

ಆದರೆ, ಈ ಪಂದ್ಯದಲ್ಲಿ ಎರಡು ತಂಡಗಳ ನಡುವೆ ಪದೇಪದೆ ಮಾತಿನ ಚಕಮಕಿ ನಡೆಯುತ್ತಿದ್ದವು. ಇದರಿಂದ ಭಾವನಾತ್ಮಕವಾಗಿ ತೆಗೆದುಕೊಂಡ ಭಾರತ ತಂಡ, ಗೆಲುವನ್ನು ಪಡೆಯಲು ಸಾಕಷ್ಟು ಶ್ರಮವಹಿಸಿತು. ಇದರಲ್ಲಿ ಯಶಸ್ವಿಯೂ ಆಯಿತು.

"ಈ ಟೆಸ್ಟ್​ ಪಂದ್ಯ ಎರಡು ಅಂಶಗಳನ್ನು ನಿರೂಪಿಸಿದೆ. ಮೊದಲನೆಯದಾಗಿ, ನಿಮ್ಮ ತಂತ್ರಗಾರಿಕೆಗಳು ಮೂರ್ಖತನದಿಂದ ಕೂಡಿದ್ದರೆ, ನೀವು ಟೆಸ್ಟ್ ಪಂದ್ಯಗಳನ್ನು ಗೆಲ್ಲಲು ಅರ್ಹರಲ್ಲ. 2ನೇಯದಾಗಿ ನೀವು ರನ್​ಗಳಿಗೆ ನಾಯಕ ಜೋ ರೂಟ್​ ಅವರನ್ನೇ ಅವಲಂಭಿಸುವುದಲ್ಲ, ಮೊದಲ ಮೂರು ಬ್ಯಾಟ್ಸ್​ಮನ್ಸ್​ಗಳಿಂದಲೂ ಆದಷ್ಟು ಬೇಗ ಸುಧಾರಣೆಯಾಗಬೇಕು ಎಂದು ಇಂಗ್ಲೆಂಡ್ ಮಾಜಿ ನಾಯಕ ಟೆಲಿಗ್ರಾಫ್​ಗೆ ಬರೆದ ಲೇಖನದಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:ನೀವು ನಮ್ಮಲ್ಲಿ ಒಬ್ಬನನ್ನು ಕೆಣಕಿದರೆ, ನಾವು 11 ಜನ ತಿರುಗಿ ಬೀಳುತ್ತೇವೆ : ಕನ್ನಡಿಗ ಕೆ ಎಲ್ ರಾಹುಲ್​

"ಜೋ ತಮ್ಮ ಫೀಲ್ಡಿಂಗ್ ರಚನೆಯಲ್ಲಿ ಉತ್ತಮವಾಗಿದ್ದರು. ಆದರೆ, ಜಸ್ಪ್ರೀತ್​ ಬುಮ್ರಾ ಅವರನ್ನು ಕ್ರೀಸ್​ನಲ್ಲಿ ನೋಡಿದಾಗಲೆಲ್ಲಾ ಗೂಳಿ ಕೆಂಪು ಬಟ್ಟೆಯನ್ನು ನೋಡಿದಾಗ ವರ್ತಿಸುವಂತೆ ನಡೆದುಕೊಂಡರು. ಅವರು ಮಾರ್ಕ್​ವುಡ್​ಗೆ ವೇಗದ ಶಾರ್ಟ್​ಬಾಲ್​ ಎಸೆಯುವುದಕ್ಕೆ ಪ್ರೇರೇಪಣೆ ನೀಡುತ್ತಿದ್ದರು.

ಇಂಗ್ಲೆಂಡಿನ ನಾಯಕ ಮತ್ತು ಕೆಲವು ಆಟಗಾರರು ಬುಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ಜೇಮ್ಸ್ ಆಂಡರ್ಸನ್ ಅವರಿಗೆ ಶಾರ್ಟ್​ ಬಾಲ್​ಗಳಿಂದ ಕಾಡಿಸಿದ್ದಕ್ಕೆ, ಸೇಡು ತೀರಿಸಿಕೊಳ್ಳಲು ಬಯಸಿದ್ದರು ಎಂಬುದು ಸ್ಪಷ್ಟವಾಗಿತ್ತು. ಜೊತೆಗೆ ಪದೇಪದೆ ಮಾತಿನ ಚಕಮಕಿ ಆಟಗಾರರಲ್ಲಿ ಕೋಪ ಏರುವಂತೆ ಮಾಡಿತು.

ಇಂಗ್ಲೆಂಡ್​ ಬೌಲರ್​ಗಳು ಶಮಿ ಮತ್ತು ಬುಮ್ರಾರನ್ನು ಔಟ್ ಮಾಡುವ ಬದಲು ಅವರಿಗೆ ಹೊಡೆಯುವುದಕ್ಕೆ ಹೆಚ್ಚು ಗಮನ ಹರಿಸಿದರು. ಆದರೆ, ಈ ವೇಳೆ ಚೆಂಡು ಎಡ್ಜ್​ಗಳಾಗಿ ರನ್​ಗಳ ಸೋರಿಕೆಯಾಯಿತು. ಜೊತೆಗೆ ಭಾರತದಿಂದ ಇನ್ನಿಂಗ್ಸ್​ ಡಿಕ್ಲೇರ್​ ಘೋಷಿಸಿದ್ದರಿಂದ ಮುಜುಗರಕ್ಕೂಳಗಾಯಿತು ಎಂದು ಬರೆದುಕೊಂಡಿದ್ದಾರೆ.

ಕೊನೆಯ ದಿನ ಪಂದ್ಯ ಆರಂಭವಾದಾಗ ಇಂಗ್ಲೆಂಡ್​ ತಂಡ ಗೆಲ್ಲುವ ಹಂತದಲ್ಲಿತ್ತು. ಆದರೆ, ನಂತರ ಇಂಗ್ಲೆಂಡ್​ ಕಳಪೆಯಾಯಿತು ಎಂದು ನನಗೆ ನಂಬಲಾಗುತ್ತಿಲ್ಲ. ಭಾರತ ತಂಡಕ್ಕೆ ಅಭಿನಂದನೆಗಳು, ಅದ್ಭುತವಾಗಿ ಆಡಿದಿರಿ ಎಂದು ಬಾಯ್ಕಾಟ್​ ಹೇಳಿಕೊಂಡಿದ್ದಾರೆ.

ಇದನ್ನು ಓದಿ:ಭಾರತದ ಕೆಳ ಕ್ರಮಾಂಕವನ್ನು ಕಡೆಗಣಿಸಿದ್ದೆ ನಮ್ಮ ಸೋಲಿಗೆ ಕಾರಣ : ಜೋ ರೂಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.