ಸೌತಾಂಪ್ಟನ್: ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ದಾಖಲು ಮಾಡಿದೆ. ಕೊನೆ ಪಂದ್ಯದಲ್ಲಿ 89ರನ್ಗಳ ಅಂತರದ ಸೋಲು ಕಾಣುವ ಮೂಲಕ ಲಂಕಾ ಪಡೆ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 3-0 ಅಂತರದಲ್ಲಿ ಸೋಲು ಕಂಡಿದೆ.
ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ನಡೆದ ಕೊನೆಯ ಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋ(51), ಡೇವಿಡ್ ಮಲನ್(76)ರನ್ಗಳಿಕೆ ಮಾಡಿ ಮೊದಲ ವಿಕೆಟ್ನಷ್ಟಕ್ಕೆ 105ರನ್ಗಳ ಜೊತೆಯಾಟವಾಡಿದರು. ಇದಾದ ಬಳಿಕ ಯಾವುಬ್ಬ ಪ್ಲೇಯರ್ಸ್ ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲಗೊಂಡರೂ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 180ರನ್ಗಳಿಕೆ ಮಾಡಿತು. ಲಂಕಾ ಪರ ಚಮೀರಾ 4 ವಿಕೆಟ್ ಪಡೆದುಕೊಂಡರು.
ಸ್ಪರ್ಧಾತ್ಮಕ 181ರನ್ಗಳ ಗುರಿ ಬೆನ್ನಟ್ಟಿದ ಲಂಕಾ ತಂಡ, ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿ ಹೋಯಿತು. ಕೇವಲ 18.5 ಓವರ್ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 91ರನ್ ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಪರ ಫರ್ನಾಡೋ ಗಳಿಸಿದ್ದ 20 ರನ್ ಗರಿಷ್ಠ ಸ್ಕೋರ್ ಆಯಿತು.
-
Sri Lanka are all out for 91 ☝️
— ICC (@ICC) June 26, 2021 " class="align-text-top noRightClick twitterSection" data="
England win by 89 runs in Southampton, sealing a 3-0 series victory 👏#ENGvSL | https://t.co/HCVIYWgPts pic.twitter.com/3Vhron2EBz
">Sri Lanka are all out for 91 ☝️
— ICC (@ICC) June 26, 2021
England win by 89 runs in Southampton, sealing a 3-0 series victory 👏#ENGvSL | https://t.co/HCVIYWgPts pic.twitter.com/3Vhron2EBzSri Lanka are all out for 91 ☝️
— ICC (@ICC) June 26, 2021
England win by 89 runs in Southampton, sealing a 3-0 series victory 👏#ENGvSL | https://t.co/HCVIYWgPts pic.twitter.com/3Vhron2EBz
ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಡೇವಿಡ್ ವಿಲ್ಲೇ 3 ವಿಕೆಟ್, ಸ್ಯಾಮ್ ಕರ್ರನ್ 2 ವಿಕೆಟ್ ಪಡೆದು ಮಿಂಚಿದ್ರೆ, ವೋಕ್ಸ್, ಜೋರ್ಡನ್, ಮೊಯಿನ್ ಅಲಿ ತಲಾ 1ವಿಕೆಟ್ ಪಡೆದುಕೊಂಡರು. ಸರಣಿ ಉದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಸ್ಯಾಮ್ ಕರ್ರನ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.