ಮ್ಯಾಂಚೆಸ್ಟರ್(ಇಂಗ್ಲೆಂಡ್): ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ತಂಡ ಭಾರತಕ್ಕೆ 260ರನ್ಗಳ ಗುರಿ ನೀಡಿದೆ. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿದೆ. ಶಿಖರ್ ಧವನ್ 1ರನ್ ಹಾಗೂ ರೋಹಿತ್ ಶರ್ಮಾ 17ರನ್ಗೆ ವಿಕೆಟ್ ಚೆಲ್ಲಿದ್ದಾರೆ. ನಂತರ ಬಂದ ವಿರಾಟ್ ಕೊಹ್ಲಿ(17) ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಕಂಡಿದ್ದಾರೆ.
ಎರಡನೇ ಪಂದ್ಯದಂತೆ ಟೋಪ್ಲೆ ಮತ್ತೆ ಮಾರಕ ಬೌಲಿಂಗ್ ಮಾಡಿದ್ದಾರೆ. ಭಾರತದ ಮೂರು ವಿಕೆಟಗಳನ್ನು ಟೋಪ್ಲೆಯೇ ಪಡೆದುಕೊಂಡಿದ್ದಾರೆ. ಸೂರ್ಯ ಕುಮಾರ್ ಯಾದವ್ ಮತ್ತು ರಿಷಬ್ ಪಂತ್ ಕ್ರೀಸ್ನಲ್ಲಿದ್ದಾರೆ.
ಮೊದಲ ಇನ್ನಿಂಗ್ಸ್: ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಿರ್ಣಾಯಕ ಏಕದಿನ ಪಂದ್ಯ ನಡೆಯುತ್ತಿದ್ದು, ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ತಂಡ 259 ರನ್ಗಳಿಕೆ ಮಾಡಿದೆ. 45.5 ಓವರ್ ಆಲ್ ಔಟ್ ಆಗಿರುವ ತಂಡ ಭಾರತಕ್ಕೆ 260 ರನ್ಗಳ ಗುರಿಯನ್ನು ನೀಡಿದೆ. ಉಭಯ ತಂಡಗಳು ಸರಣಿ ಗೆಲ್ಲುವ ತವಕದಲ್ಲಿವೆ.
-
On 🔥 🙌
— England Cricket (@englandcricket) July 17, 2022 3" class="align-text-top noRightClick twitterSection" data="
Scorecard/clips: https://t.co/2efir2v7RD
🏴 #ENGvIND 🇮🇳 pic.twitter.com/KDQRAhCDSt
3">On 🔥 🙌
— England Cricket (@englandcricket) July 17, 2022
Scorecard/clips: https://t.co/2efir2v7RD
🏴 #ENGvIND 🇮🇳 pic.twitter.com/KDQRAhCDSt
3On 🔥 🙌
— England Cricket (@englandcricket) July 17, 2022
Scorecard/clips: https://t.co/2efir2v7RD
🏴 #ENGvIND 🇮🇳 pic.twitter.com/KDQRAhCDSt
ಪಂದ್ಯದ ಎರಡನೇ ಓವರ್ನ ಮೂರನೇ ಎಸೆತದಲ್ಲಿ ಬೈರ್ಸ್ಟೋ ಮತ್ತು ಆರನೇ ಎಸೆತದಲ್ಲಿ ಜೋ ರೂಟ್ ವಿಕೆಟನ್ನು ಮೊಹಮ್ಮದ್ ಸಿರಾಜ್ ಕಬಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತ ನೀಡಿದರು. ನಂತರ ಬಂದ ಸ್ಟೋಕ್ಸ್ ಆರಂಭಿಕ ಜೇಸನ್ ರಾಯ್ಗೆ ಬೆಂಬಲವಾಗಿ ನಿಂತು ರನ್ ಕಲೆಹಾಕಿದರು. ಏಳು ಬೌಂಡರಿಗಳೊಂದಿಗೆ ಬಿರುಸಿನಿಂದ ಆಟ ಆಡುತ್ತಿದ್ದ ಜೇಸನ್ ರಾಯ್(41) ಹಾರ್ದಿಕ್ ಪಾಂಡ್ಯರ ಕರಾರುವಕ್ಕು ದಾಳಿಗೆ ಬಲಿಯಾದರು.
ನಂತರ ಬಂದ ಬಟ್ಲರ್ 80ಎಸೆತಗಳಲ್ಲಿ ನಿಧಾನಗತಿಯಲ್ಲಿ 60 ರನ್ ಗಳಿಸಿದರು. ಆದರೆ ಅವರಿಗೆ ಸರಿಯಾದ ಜೊತೆಯಾಟವನ್ನು ಯಾರೂ ನೀಡಲಿಲ್ಲ. ಸ್ಟೋಕ್ಸ್(27), ಲಿಯಾಮ್ ಲಿವಿಂಗ್‌ಸ್ಟೋನ್(27), ಮೊಯಿನ್ ಅಲಿ(34), ಕ್ರೇಗ್ ಓವರ್‌ಟನ್(34), ಡೇವಿಡ್ ವಿಲ್ಲಿ(18), ಬ್ರೈಡನ್ ಕಾರ್ಸ್(3*) ಮತ್ತು ರೀಸ್ ಟೋಪ್ಲಿ(0)ಗೆ ವಿಕೆಟ್ ಒಪ್ಪಿಸಿದರು.
ಹಾರ್ದಿಕ್ ಮಿಂಚು : ಹಾರ್ದಿಕ್ ಪಾಂಡ್ಯ 7 ಓವರ್ನಲ್ಲಿ 4 ವಿಕೆಟ್ ಪಡೆದರು. ಅದರಲ್ಲಿ 3 ಮೇಡಿನ್ ಓವರ್ ಮಾಡಿ ಕೇವಲ 24ರನ್ ಮಾತ್ರ ಬಿಟ್ಟುಕೊಟ್ಟರು. ಇವರ ಜೊತೆ ಚಹಾಲ್ 3, ಸಿರಾಜ್ 2, ಜಡೇಜ 1 ವಿಕೆಟ್ ಕಬಳಿಸಿದರು.
-
Jasprit Bumrah was ruled out of this game owing to back spasms. Arshdeep Singh was not considered for selection as he is yet to fully recover from right abdominal strain.#ENGvIND
— BCCI (@BCCI) July 17, 2022 " class="align-text-top noRightClick twitterSection" data="
">Jasprit Bumrah was ruled out of this game owing to back spasms. Arshdeep Singh was not considered for selection as he is yet to fully recover from right abdominal strain.#ENGvIND
— BCCI (@BCCI) July 17, 2022Jasprit Bumrah was ruled out of this game owing to back spasms. Arshdeep Singh was not considered for selection as he is yet to fully recover from right abdominal strain.#ENGvIND
— BCCI (@BCCI) July 17, 2022
ಭಾರತ ತಂಡದಲ್ಲಿ ಬದಲಾವಣೆ: ನಿರ್ಣಾಯಕ ಪಂದ್ಯದಲ್ಲಿ ಬೂಮ್ರಾರನ್ನು ಕೈ ಬಿಡಲಾಯಿತು. ಈ ಬಗ್ಗೆ ಬಿಸಿಸಿಐ ಟ್ವೀಟ್ ಮಾಡಿ ಬೂಮ್ರಾ ಅವರಿಗೆ ಬೆನ್ನು ನೋವಿನ ಕಾರಣ, ಈ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ತಿಳಿಸಿದೆ. ಇಂಗ್ಲೆಂಡ್ ತಂಡ ಅದೇ ತಂಡದೊಂದಿಗೆ ಮುಂದುವರೆದಿದೆ.
ಇದನ್ನೂ ಓದಿ: 'ಶತಕ ರಹಿತ ಸಹಸ್ರ ದಿನ'ಗಳತ್ತ ಕೊಹ್ಲಿ: ಕೆಟ್ಟ ರೆಕಾರ್ಡ್ನಿಂದ ಪಾರಾಗಲು ಇಂದೇ ಕೊನೆಯ ಅವಕಾಶ!